More

  ಭೇಟಿಯಾಗದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ; ಸಿಎಂ ವಿರುದ್ಧ ಕಿಡಿ ಕಾರಿದ ಸಾವರ್ಕರ್​ ಮೊಮ್ಮಗ ರಂಜಿತ್​

  ಮುಂಬೈ: ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ ಭೇಟಿಗೆ ಬಂದ ವೀರ ಸಾವರ್ಕರ್​ ಮೊಮ್ಮಗ ರಂಜಿತ್​ ಸಾವರ್ಕರ್​ಗೆ ನಿರಾಶೆಯಾಗಿದೆ.

  ಮುಖ್ಯಮಂತ್ರಿ ಅವರ ಭೇಟಿಗೆ ಮನವಿ ಮಾಡಿದ್ದರೂ ಉತ್ತರ ಬಂದಿರಲಿಲ್ಲ. ಆದರೆ ಈ ದಿನ ಖುದ್ದಾಗಿ ಬಂದರೂ ಅವರ ದರ್ಶನವಾಗಲಿಲ್ಲ ಎಂದು ರಂಜಿತ್​ ಬೇಸರ ವ್ಯಕ್ತಪಡಿಸಿದ್ದಾರೆ.

  ಅವರಿಗೆ ನನ್ನ ಜತೆ ಮಾತನಾಡಲು ಒಂದು ನಿಮಿಷದ ಬಿಡುವು ಇರಲಿಲ್ಲವೇ ಎಂದು ಪ್ರಶ್ನಿಸಿದ ರಂಜಿತ್​, ಸಾವರ್ಕರ್​ ಹೆಸರಿಗಾದರೂ ಅವರು ಬೆಲೆ ಕೊಟ್ಟು ಮಾತನಾಡಬಹುದಿತ್ತು. ಇದರಿಂದ ನನಗೆ ನಿರಾಶೆಯಾಗಿದೆ ಎಂದಿದ್ದಾರೆ. ಅಲ್ಲದೆ ಇದು ಸಾವರ್ಕರ್​ ಅವರಿಗೆ ಮಾಡಿದ ಅಪಮಾನ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.

  ಈ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ರಂಜಿತ್​, ಸಾವರ್ಕರ್​ ಅವರ ಬಗ್ಗೆ ಇಲ್ಲದ ಆರೋಪಗಳನ್ನು ಮಾಡಿದ ಹಲವರ ಮೇಲೆ ದೂರು ದಾಖಲಿಸಲಾಗುವುದು. ರಾಹುಲ್​ ಗಾಂಧಿ ಮತ್ತು ಕಾಂಗ್ರೆಸ್​ ಸೇವಾ ದಳದ ವಿರುದ್ಧವೂ ದೂರು ದಾಖಲಿಸುವುದಾಗಿ ತಿಳಿಸಿದರು. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts