More

    VIDEO| ಹಿಂದಿ ಭಾರತೀಯರ ಮಾತೃಭಾಷೆಯಾಗಿದ್ದು, ಇದಕ್ಕಿಂತ ದೊಡ್ಡ ಭಾಷೆ ಇನ್ನೊಂದಿಲ್ಲ ಎಂದ ಕಾಮೆಂಟರ್​ ವಿರುದ್ಧ ತೀವ್ರ ಆಕ್ರೋಶ

    ನವದೆಹಲಿ: ಗುರುವಾರ ಕರ್ನಾಟಕ ಮತ್ತು ಬರೋಡಾ ನಡುವಿನ ರಣಜಿ ಟ್ರೋಫಿಯ ಪಂದ್ಯದ ವೇಳೆ ಬಿಸಿಸಿಐನ ವೀಕ್ಷಕ ವಿವರಣೆಗಾರರು ಅನಗತ್ಯವಾಗಿ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಹಿಂದಿ ಭಾರತೀಯರ ಮಾತೃ ಭಾಷೆ ಎಂದು ಹೇಳಿದ್ದೇ ತಡ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ಅಲೆ ಎದ್ದಿದೆ.

    ಬರೋಡ ತಂಡದ ಎರಡನೇ ಇನ್ನಿಂಗ್ಸ್​ನ 7 ಓವರ್​ನಲ್ಲಿ ಕಾಮೆಂಟರ್​ ಇಬ್ಬರು ಹಿಂದಿ ಭಾಷೆ ಬಗ್ಗೆ ಮಾತನಾಡಿದ ಬಳಿಕ ವ್ಯಾಪಕ ಚರ್ಚೆಯಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಜಾಲತಾಣದಲ್ಲಿಯೂ ಹರಿದಾಡುತ್ತಿದೆ.

    ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಸುನೀಲ್​ ಗವಾಸ್ಕರ್​ ಅವರು ಇತ್ತೀಚಿನ ದಿನಗಳಲ್ಲಿ ಹಿಂದಿಯಲ್ಲಿ ಕಾಮೆಂಟರಿ ಮಾಡುತ್ತಿರುವ ವಿಚಾರವನ್ನು ಮುಂದಿಟ್ಟುಕೊಂಡು ಮೊದಲಿಗೆ ಗವಾಸ್ಕರ್​ರನ್ನು ಹೊಗಳಿದರು. ಬಳಿಕ ಓರ್ವ ಕಾಮೆಂಟರ್​, ಹಿಂದಿ ಭಾಷೆ ಭಾರತೀಯರ ಮಾತೃ ಭಾಷೆಯಾಗಿದ್ದು, ಎಲ್ಲರೂ ಖಂಡಿತವಾಗಿ ಕಲಿಯಬೇಕು. ನಮ್ಮ ಹಿಂದಿಗಿಂತ ದೊಡ್ಡ ಭಾಷೆ ಇನ್ನೊಂದಿಲ್ಲ ಎಂದು ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ದಾಖಲಾಗಿದೆ.

    ಇದಕ್ಕೆ ಸಹಮತ ವ್ಯಕ್ತಪಡಿಸಿದ ಮತ್ತೊಬ್ಬ ಕಾಮೆಂಟರ್​, ನಾವೇಕೆ ಹಿಂದಿಯನ್ನು ಕಲಿಯಬೇಕೆಂದು ಯಾವುದೇ ಕ್ರಿಕೆಟರ್​ ಕೇಳಿದಾಗ ನನಗೆ ಕೋಪ ಬರುತ್ತದೆ ಎಂದು ಹೇಳಿದ್ದಾರೆ.

    ಕಾಮೆಂಟರ್​ಗಳ ಧ್ವನಿಯನ್ನು ಕೇಳಿದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ಮಾಡಿ, ಕ್ಷಮೆಗೆ ಆಗ್ರಹಿಸಿದ್ದಾರೆ. ಹಿಂದಿ ಹೇರಿಕೆಯನ್ನು ನಿಲ್ಲಿಸಿ ಮತ್ತು ತಪ್ಪು ಸಂದೇಶ ಹರಡಬೇಡಿ ಎಂದು ಆಗ್ರಹಿಸಿದ್ದಾರೆ. ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಕಾಮೆಂಟರ್​ಗಳು ಕ್ಷಮೆಯಾಚಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts