ಮೈಸೂರು: ನಗರದ ಪಡುವಾರಹಳ್ಳಿಯ ಜೋಡಿ ಮಾರಮ್ಮನ ದೇವಸ್ಥಾನ ಅಂಗಳದಲ್ಲಿ ಭಾನುವಾರ ಆಯೋಜಿಸಿದ್ದ ‘ರಂಗೋಲಿ’ ಸ್ಪರ್ಧೆ ಗಮನ ಸೆಳೆಯಿತು.
ಜೋಡಿ ಮಾರಮ್ಮನ ಹಬ್ಬದ ಅಂಗವಾಗಿ ಭೂಮಿಗಿರಿ ನಾರಾಯಣಪ್ಪ ಪ್ರತಿಷ್ಠಾನ ಹಾಗೂ ಪಡುವಾರಹಳ್ಳಿ (ವಿನಾಯಕನಗರ) ಗ್ರಾಮಾಭ್ಯುದಯ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಹತ್ತಾರು ಮಹಿಳೆಯರು ಭಾಗವಹಿಸಿ ನಾನಾ ಬಗೆಯ ರಂಗೋಲಿಗಳ ಚಿತ್ತಾರ ಬಿಡಿಸಿದರು. ಸ್ಪರ್ಧೆಯಲ್ಲಿ ಮನು ಪ್ರಥಮ, ಜಯಂತಿ, ಸುನೀತಾ ದ್ವಿತೀಯ ಹಾಗೂ ಅನನ್ಯ ಮತ್ತು ತರುಣ್ ತೃತೀಯ ಸ್ಥಾನ ಪಡೆದರು.
ತೀರ್ಪುಗಾರರಾಗಿ ಕಾವೇರಿ ಪ್ರಕಾಶ್, ಯಶೋದಾ, ಲಕ್ಷ್ಮೀದೇವಿ ಭಾಗವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಎನ್.ಬೆಟ್ಟೇಗೌಡ, ಗ್ರಾಮಾಭ್ಯುಧಯ ಟ್ರಸ್ಟ್ ಕಾರ್ಯದರ್ಶಿ ಎನ್.ಭೈರಪ್ಪ, ಉಪಾಧ್ಯಕ್ಷ ರಾಮಣ್ಣ ಇತರರಿದ್ದರು.