More

    ಶಿಕ್ಷಕರ ಸಂಘದ ಚುನಾವಣೆ ಜ. 7ರಂದು

    ರಾಣೆಬೆನ್ನೂರ: ಇಲ್ಲಿನ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಪತ್ತಿನ ಸಹಕಾರ ಸಂಘಕ್ಕೆ ಜ. 7ರಂದು ಚುನಾವಣೆ ನಡೆಯಲಿದೆ.
    ಸಂಘದಲ್ಲಿ 1 ಪರಿಶಿಷ್ಟ ಜಾತಿ, 1 ಪರಿಶಿಷ್ಟ ಪಂಗಡ, 1 ಹಿಂದುಳಿದ ಅ ವರ್ಗ, 1 ಹಿಂದುಳಿದ ಬ ವರ್ಗ, 2 ಮಹಿಳಾ ಮೀಸಲು ಹಾಗೂ 7 ಸಾಮಾನ್ಯ ಸೇರಿ ಒಟ್ಟು 13 ಸ್ಥಾನಗಳಿವೆ. ಪುರುಷರು, ಮಹಿಳೆಯರು ಸೇರಿ 685 ಮತದಾರರರಿದ್ದಾರೆ. ಚುನಾವಣೆಯಲ್ಲಿ ಹೋರಾಟ ಸಮಿತಿ ಹಾಗೂ ಕ್ರಿಯಾ ಸಮಿತಿ ಸಂಘಟನೆಗಳಿಂದ ಎಲ್ಲ 13 ಸ್ಥಾನಗಳಿಗೂ ಸ್ಪರ್ಧೆ ಏರ್ಪಟ್ಟಿದೆ. ಸದ್ಯ ಹೋರಾಟ ಸಮಿತಿ ಆಡಳಿತ ನಡೆಸುತ್ತಿದೆ.
    ಜ. 7ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 4ರ ವರೆಗೆ ನಗರದ ಚರ್ಚ್ ರಸ್ತೆಯ ಶಿಕ್ಷಕರ ಪತ್ತಿನ ಸಂಘದ ಕಟ್ಟಡದಲ್ಲಿ ಮತದಾನ ನಡೆಯಲಿದೆ. ಮತದಾನ ಮುಗಿದ ತಕ್ಷಣ ಮತಗಳ ಎಣಿಕೆ ಕಾರ್ಯ ಕೈಗೊಳ್ಳಲಾಗುತ್ತಿದ್ದು ರಾತ್ರಿ ವೇಳೆಗೆ ಫಲಿತಾಂಶ ಲಭ್ಯವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts