More

    ಗೃಹಲಕ್ಷ್ಮೀ ಅರ್ಜಿ ಸಲ್ಲಿಸಲು ನಗರಸಭೆ ತೆರೆದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ

    ರಾಣೆಬೆನ್ನೂರ: ಗೃಹಲಕ್ಷ್ಮೀ ಯೋಜನೆಯ ನೋಂದಣಿಗಾಗಿ ಇಲ್ಲಿಯ ನಗರಸಭೆ ವತಿಯಿಂದ 6 ಸ್ಥಳದಲ್ಲಿ ಸೇವಾ ಕೇಂದ್ರ ತೆರೆಯಲಾಗಿದೆ. ಫಲಾನುಭವಿಗಳು ತಮ್ಮ ಮೊಬೈಲ್ ಸಂಖ್ಯೆಗೆ ಬರುವ ಎಸ್‌ಎಂಎಸ್ ಆಧರಿಸಿ ಆಯಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
    ನಗರದ ಮೇಡ್ಲೇರಿ ರಸ್ತೆಯ ಸೇವಾಲಾಲ ಸಮುದಾಯ ಭವನ, ಮುನ್ಸಿಪಲ್ ಮೈದಾನ ರಸ್ತೆಯ ನಗರಸಭೆ ಕಲಾ ಭವನ, ಮಾರುತಿ ನಗರದ ನಗರೋತ್ಥಾನ ಹಂತ-3ರ ಅನುದಾನದಲ್ಲಿ ನಿರ್ಮಿಸಿದ ವಾಣಿಜ್ಯ ಮಳಿಗೆ ಕಟ್ಟಡ, ಸಿದ್ದೇಶ್ವರ ನಗರ ಅಂಗನವಾಡಿ, ಉಮಾಶಂಕರ ನಗರದ ಅಂಗನವಾಡಿ ಹಾಗೂ ಹರಳಯ್ಯ ನಗರದ ಶಾಲೆ ನಂ.5ರ ಆವರಣದ ಅಂಗನವಾಡಿಯಲ್ಲಿ ಸೇವಾ ಕೇಂದ್ರ ತೆರೆಯಲಾಗಿದೆ ಎಂದು ನಗರಸಭೆ ಆಯುಕ್ತ ನಿಂಗಪ್ಪ ಕುಮ್ಮಣ್ಣನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts