More

    ಕಾನೂನು ದುರ್ಬಳಕೆ ಮಾಡಿದ್ದಕ್ಕಾಗಿ 2 ಕೋಟಿ ಡಿಮಾಂಡ್ ಮುಂದಿಟ್ಟ ಕಂಗನಾ: ಪರಿಹಾರಕ್ಕೆ ಅರ್ಹವಲ್ಲ ಎಂದ ಬಿಎಂಸಿ

    ಮುಂಬಯಿ: ಕಾನೂನು ದುರ್ಬಳಕೆ ಮಾಡಿಕೊಂಡು ಬಂಗಲೆ ಕೆಡವಿದ ಕ್ರಮವನ್ನು ಪ್ರಶ್ನಿಸಿ ನಟಿ ಕಂಗನಾ ರಾಣಾವತ್ ಬಾಂಬ್ ಹೈಕೋರ್ಟ್​ನಲ್ಲಿ ರಿಟ್​ ಪಿಟಿಷನ್ ಸಲ್ಲಿಸಿದ್ದಾರೆ. ಇದರಲ್ಲಿ 2 ಕೋಟಿ ರೂಪಾಯಿ ಪರಿಹಾರದ ಬೇಡಿಕೆಯನ್ನೂ ಅವರು ಇಟ್ಟಿದ್ದು, ಇದನ್ನು ಪಿಟಿಷನ್ ವೆಚ್ಚದೊಂದಿಗೆ ತಿರಸ್ಕರಿಸಬೇಕು ಎಂದು ಬೃಹನ್ಮುಂಬೈ ಮಹಾನಗರಪಾಲಿಕೆ (ಬಿಎಂಸಿ) ಹೈಕೋರ್ಟ್​ಗೆ ಮನವಿ ಮಾಡಿದೆ.

    ದೂರುದಾರರು ನಿಯಮ ಪಾಲಿಸದೇ ಕೋರ್ಟ್ ಮೆಟ್ಟಿಲೇರಿದ್ದಾರೆ. ವಾಸ್ತವಾಂಶವನ್ನು ಮುಚ್ಚಿಟ್ಟು ಪರಿಹಾರ ಕೇಳುತ್ತಿದ್ದಾರೆ. ಅವರ ಕೇಸ್ ಯಾವುದೇ ಪರಿಹಾರಕ್ಕೆ ಅರ್ಹವಾದುದಲ್ಲ ಎಂದು ಕೋರ್ಟ್​ಗೆ ಬಿಎಂಸಿ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆ.

    ಇದನ್ನೂ ಓದಿ: “ಆರ್​.ವಿ.ಯುವರಾಜ್ ಬಂದ್ರು ಅಂತ ಸಿಸಿಬಿ ಇನ್​ಸ್ಪೆಕ್ಟರ್​ಗೆ ಹೇಳಿ…”

    ರಾಣಾವತ್ ಅವರಿಗೆರ ಸೇರಿದ ಪಾಲಿ ಹಿಲ್ ಬಂಗಲೆಯನ್ನು ಬಿಎಂಸಿ ಸೆಪ್ಟೆಂಬರ್ 9ರಂದು ಕೆಡವಿತ್ತು. ಅನುಮತಿ ತೆಗೆದುಕೊಳ್ಳದೇ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಈ ಕ್ರಮವನ್ನು ಅದು ಕೈಗೊಂಡಿತ್ತು. ಅದೇ ದಿನ ಕಂಗನಾ ಕೋರ್ಟ್ ಮೆಟ್ಟಿಲೇರಿದ್ದರಿಂದ ಬಿಎಂಸಿಯ ನಡೆಗೆ ತಡೆ ಸಿಕ್ಕಿತ್ತು. ನ್ಯಾಯಮೂರ್ತಿ ಎಸ್​.ಜೆ.ಕಥಾವಲ್ಲಾ ಅವರಿದ್ದ ನ್ಯಾಯಪೀಠ ಈ ತಡೆ ನೀಡಿತ್ತು.

    ಇದನ್ನೂ ಓದಿ: ಆರೆಸ್ಸೆಸ್ ಶಕ್ತಿ ಕೇಂದ್ರ ನಾಗಪುರದಲ್ಲಿ 9 ಹಿರಿಯ ಆರೆಸ್ಸೆಸ್ ನಾಯಕರಿಗೆ ಕರೋನಾ, ಆಸ್ಪತ್ರೆಗೆ ದಾಖಲು

    ಸೆಪ್ಟೆಂಬರ್ 15ರಂದು ರಾಣಾವತ್ ರಿಟ್ ಪಿಟಿಷನ್ ದಾಖಲಿಸಿದ್ದು, ಬಿಎಂಸಿಯಿಂದ 2 ಕೋಟಿ ರೂಪಾಯಿ ಪರಿಹಾರವನ್ನು ಅಪೇಕ್ಷಿಸಿದ್ದಾರೆ. ಇದಕ್ಕೆ ಉತ್ತರವಾಗಿ ಅಡ್ವೋಕೇಟ್ ಜೋಯೆಲ್ ಕಾರ್ಲೋಸ್ ಮೂಲಕ ಬಿಎಂಸಿ ಪ್ರತಿಕ್ರಿಯೆಯನ್ನು ಸಲ್ಲಿಸಿದೆ. ಅಲ್ಲದೆ ಅದರ ನಡೆಯನ್ನು ಸಮರ್ಥಿಸಿಕೊಳ್ಳುವ ಸಮಜಾಯಿಷಿಯನ್ನೂ ಕೋರ್ಟ್​ಗೆ ಸಲ್ಲಿಕೆ ಮಾಡಿದೆ, ಮುಂದಿನ ವಿಚಾರಣೆ ಸೆ.22ಕ್ಕೆ ನಿಗದಿಯಾಗಿದೆ. (ಏಜೆನ್ಸೀಸ್)

    ಬಂಧಿತ ಅಲ್​ಕೈದಾ ಉಗ್ರರ ಪ್ರವರವಿದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts