More

    ರಂಜಾನ್​-ಯುಗಾದಿ ಹೊಸ ತೊಡಕು ದಿನ ಮಾಂಸದ ಬೆಲೆ ಏರಿಕೆ ಸಾಧ್ಯತೆ!

    ಬೆಂಗಳೂರು: ರಂಜಾನ್​ ಹಾಗೂ ಯುಗಾದಿ ಹೊಸ ತೊಡಕು ಹಬ್ಬದ ಹಿನ್ನೆಲೆಯಲ್ಲಿ ಕುರಿ ಮೇಕೆಗಳ ಮಾಂಸಕ್ಕೆ ಬೇಡಿಕೆ ಹೆಚ್ಚಾಗಲಿದ್ದು ದರವೂ ಜಾಸ್ತಿಯಾಗುವ ಸಾಧ್ಯತೆ ಇದೆ.

    ಇದನ್ನೂ ಓದಿ: ಅಶ್ವಿನಿ ಪುನೀತ್​​ರಾಜ್​ಕುಮಾರ್​ ಬೆಂಬಲಕ್ಕೆ ನಿಂತ ನಟ ಜಗ್ಗೇಶ್; ನೇರವಾಗಿ ಇವರ ವಿರುದ್ಧ ಆಕ್ರೋಶ 

    ಯುಗಾದಿ ಹಬ್ಬದ ದಿನ ಎಲ್ಲರೂ ಸಂಪ್ರದಾಯದಂತೆ ಹೋಳಿಗೆ ತಯಾರಿಸುತ್ತಾರೆ. ಹಬ್ಬ ಆಚರಣೆಯ ನಂತರ ಮಾರನೇ ದಿನ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹೊಸ ತೊಡಕು ಆಚರಣೆಯ ನಡೆಯುತ್ತಿದೆ. ಹೊಸ ತೊಡಕು ದಿನ ಮಾಂಸದೂಟ ತಯಾರಿಸಲಾಗುತ್ತದೆ. ಕಾಲ ಬದಲಾದಂತೆ ಹಳೇ ಸಂಪ್ರದಾಯಗಳಲ್ಲಿಯೂ ಬದಲಾವಣೆ ಕಂಡು ಬಂದಿದೆ. ಈಗ ಎಲ್ಲರಿಗೂ ಯುಗಾದಿಯ ಮರುದಿನವೇ ಸಂಭ್ರಮ.

    ರಂಜಾನ್​-ಯುಗಾದಿ ಹೊಸ ತೊಡಕು ದಿನ ಮಾಂಸದ ಬೆಲೆ ಏರಿಕೆ ಸಾಧ್ಯತೆ!

    ಮುಖ್ಯವಾಗಿ ಈ ಬಾರಿ ಯುಗಾದಿ ಮಂಗಳವಾರ ಆಚರಣೆ ಮಾಡುತ್ತಿದ್ದು, ಬುಧವಾರ ಹೊಸ ತೊಡಕು ಬಂದಿದೆ, ಇದರಿಂದ ಮಾಂಸ ಸೇವನೆಗೆ ಯಾವುದೇ ತೊಂದರೆಯಿಲ್ಲ. ಹೀಗಾಗಿ, ಮಾಂಸಾಹಾರ ಪ್ರಿಯರು ಫುಲ್​ ಜೋಶ್​ನಲ್ಲಿದ್ದಾರೆ. ಇದರಿಂದ ಕುರಿ, ನಾಟಿ ಕೋಳಿ ಮಾಂಸಕ್ಕೆ ಭಾರೀ ಬೇಡಿಕೆ ಬಂದಿದೆ.
    ರಂಜಾನ್​, ಯುಗಾದಿ ಹೊಸ ತೊಡಕು ಎರಡೂ ಹಬ್ಬಗಳು ಒಂದೇ ಬಾರಿಗೆ ಬಂದಿರುವ ಕಾರಣ, ಕುರಿ, ಮೇಕೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಬ್ಬದ ಸೀಸನ್​ಗೂ ಮೊದಲು 20 ಕೆ.ಜಿ.ತೂಕದ ಕುರಿಗೆ 13 ಸಾವಿರ ಇತ್ತು. ಈಗ 15 ಸಾವಿರಕ್ಕೆ ಏರಿಕೆಯಾಗಿದೆ. ಒಂದು ಮೇಕೆಗೆ 12 ಸಾವಿರ ಇದ್ದದ್ದು 14 ಸಾವಿರಕ್ಕೆ ಏರಿಕೆಯಾಗಿದೆ.

    ಮಟನ್ ಬೆಲೆ ಏರಿಕೆ ಸಾಧ್ಯತೆ: ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಕುರಿ ಹಾಗೂ ಒಂದು ಮೇಕೆ ಮಾಂಸ 700 ಇದೆ. ಹೊಸ ತೊಡಕು, ರಂಜಾನ್ ಹಿನ್ನೆಲೆಯಲ್ಲಿ ಈ ಬೆಲೆಯಲ್ಲಿ 50ರಿಂದ, 100ರಷ್ಟು ಜಾಸ್ತಿಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಮಾಂಸದ ಅಂಗಡಿಯ ವ್ಯಾಪಾರಿಗಳು.

    ಕೋಳಿ ಬೆಲೆ ಏರಿಕೆ?: ಒಂದು ಕೆಜಿ ನಾಟಿ ಕೋಳಿ ಮಾಂಸದ ಬೆಲೆ 350 ರೂ. ಇತ್ತು. ಹಬ್ಬದ ಹಿನ್ನೆಲೆಯಲ್ಲಿ ಈಗ ಅದರ ಬೆಲೆ 500 ರೂ. ಏರಿಕೆ ಸಾಧ್ಯತೆಯಿದೆ. ಒಂದು ಕೆಜಿ ಫಾರಂ ಕೋಳಿ ಮಾಂಸಕ್ಕೆ 200 ರೂ. ಇದೆ. ಇದು 250 ರೂ. ಏರಿಕೆ ಆಗಬಹುದು ಎನ್ನಲಾಗಿದೆ.

    ಎರಡೂ ಹಬ್ಬಗಳು ಒಂದೇ ಬಾರಿಗೆ ಬಂದಿರುವ ಕಾರಣ, ಕುರಿ, ಮೇಕೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ವರ್ಷದ ತೊಡಕಿಗೆ ಉತ್ತಮ ಬೆಲೆ ಸಿಗುತ್ತದೆ ಎನ್ನುವ ಕಾರಣದಿಂದಲೇ ಕೆಲವು ರೈತರು, ಕುರಿ, ಮೇಕೆಗಳನ್ನು ಸಾಕಾಣಿಕೆ ಮಾಡಿಕೊಂಡಿದ್ದಾರೆ. ಈಗ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

    ಗಜಪಡೆಯ ಕೀಳು ಮಟ್ಟದ ಪೋಸ್ಟ್‌ ವಿಚಾರಕ್ಕೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಆ್ಯಂಕರ್ ಅನುಶ್ರೀ! ಏನಿದೆ ಪೋಸ್ಟ್​ನಲ್ಲಿ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts