More

    PHOTOS: ನಟಿ ರಮ್ಯಾರ ಸೊಟ್ಟ ಮುಖ ನೋಡಿ ಕಂಗಾಲಾದ ನೆಟ್ಟಿಗರು; ಯಾಕೀ ಹುಚ್ಚಾಟ ಎಂದು ಕೇಳುತ್ತಿದ್ದಾರೆ ಅಭಿಮಾನಿಗಳು !

    ಈ ಹಿಂದೆ ಟ್ವಿಟರ್​ನಲ್ಲಿ ಸದಾ ಸಕ್ರಿಯವಾಗಿದ್ದುಕೊಂಡು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಒಂದಿಲ್ಲೊಂದು ಟೀಕಾತ್ಮಕ ಪೋಸ್ಟ್​ ಹಾಕುತ್ತಿದ್ದ ನಟಿ ರಮ್ಯಾ 2019ರ ಲೋಕಸಭೆ ಚುನಾವಣೆ ಬಳಿಕ ಒಮ್ಮಲೆ ಮಾಯವಾಗಿಬಿಟ್ಟಿದ್ದರು.

    ಯಾವ ಸೋಷಿಯಲ್​ ಮೀಡಿಯಾಗಳಲ್ಲೂ ಅವರ ಪೋಸ್ಟ್​ಗಳು ಕಾಣುತ್ತಿರಲಿಲ್ಲ. ಎಲ್ಲಿದ್ದಾರೆ ಎಂಬುದೂ ಯಾರಿಗೂ ಗೊತ್ತಿರಲಿಲ್ಲ.
    ಆದರೆ ಇತ್ತೀಚೆಗೆ ಮತ್ತೆ ಅವರು ತಮ್ಮ ಸೋಷಿಯಲ್​ ಮೀಡಿಯಾ ಖಾತೆಗೆ ಮರಳಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಸ್ಟೋರಿಗಳನ್ನು ಅಪ್​ಡೇಟ್​ ಮಾಡುತ್ತಿದ್ದಾರೆ. ಇತ್ತೀಚೆಗೆ ಆಧ್ಯಾತ್ಮಕ್ಕೆ ಸಂಬಂಧಿಸಿದ ಪೋಸ್ಟ್​ಗಳನ್ನು ಹಾಕಿ ಸುದ್ದಿಯಾಗಿದ್ದರು.

    ಆದರೆ ಇಂದು ಒಂದಷ್ಟು ಫೋಟೋ ಹಾಕಿದ್ದನ್ನು ನೋಡಿದ ಮೇಲೆ ನಟಿ ರಮ್ಯಾ ಅವರಿಗೆ ಏನಾಗಿದೆ ಎಂಬ ಪ್ರಶ್ನೆಯೂ ಮೂಡುತ್ತದೆ..ಕುತೂಹಲವೂ ಉಂಟಾಗುತ್ತಿದೆ. ಇದನ್ನೂ ಓದಿ: ಜೂನ್ ಒಂದೇ ತಿಂಗಳಲ್ಲಿ 70 ಕಿಲೋ ಚಿನ್ನ ಕಳ್ಳಸಾಗಣೆ- ಇದು ಕೇರಳದ “ಬಂಗಾರಿ” ಗ್ಯಾಂಗ್​ನ ಕಥೆ

    ರಮ್ಯಾ ಇಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ವಿಚಿತ್ರ ಮುಖಭಾವಗಳ ಫೋಟೋಗಳನ್ನು ಅಪ್ಲೋಡ್​ ಮಾಡಿದ್ದಾರೆ. ಮೊದಲು ಎರಡು ಪ್ರೀತಿಯ ನಾಯಿಯ ಫೋಟೋಗಳನ್ನು ಹಾಕಿರುವ ಅವರು, ನಂತರ ತಮ್ಮ ಮುಖ, ತುಟಿಗಳನ್ನೆಲ್ಲ ಸೊಟ್ಟಗೆ, ಅಂಕುಡೊಂಕು ಮಾಡಿಕೊಂಡಿರುವ ಸೆಲ್ಫೀ ಫೋಟೋಗಳನ್ನು ಅಪ್ಲೋಡ್​ ಮಾಡಿದ್ದಾರೆ.

    ನಟಿ ರಮ್ಯಾ ಸಿಕ್ಕಾಪಟೆ ಕ್ರೇಜಿ ಫೋಟೋಗಳನ್ನು ಹಾಕಿದ್ದಾರೆ. ಸಾಮಾನ್ಯವಾಗಿ ನಟಿಯರು ತಮ್ಮ ಮುಖ ಕೆಟ್ಟದಾಗಿ, ಅಸಹಜವಾಗಿ ಕಾಣಿಸುವಂತಹ ಫೋಟೋಗಳನ್ನೆಲ್ಲ ಸೋಷಿಯಲ್​ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಿಲ್ಲ. ಆದರೆ ರಮ್ಯಾ ತುಸು ವಿಭಿನ್ನವಾಗಿ ಟ್ರೈ ಮಾಡಿದ್ದಾರೆ. ಫೋಟೋ ನೋಡಿದ ನೆಟ್ಟಿಗರು, ಅವರ ಅಭಿಮಾನಿಗಳಂತೂ ಸಿಕ್ಕಾಪಟೆ ಕಂಗಾಲಾಗಿದ್ದಾರೆ. ಏನು ಹೊಸ ಫಿಲ್ಮ್​ಗೆ ಟ್ರೈ ಮಾಡುತ್ತಿದ್ದಾರಾ ಎಂದೂ ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts