More

    ಡ್ರಗ್ಸ್​ ಮಾಫಿಯಾ ಬಗ್ಗೆ ಸಾಕ್ಷಿ ಇದ್ದರೆ ಪೊಲೀಸರಿಗೆ ಕೊಡಿ… ಕಂಗನಾಗೆ ರಮ್ಯಾ ಸಲಹೆ

    ಬೆಂಗಳೂರು: ಬಾಲಿವುಡ್​ ಬಗ್ಗೆ, ಬಾಲಿವುಡ್​ನಲ್ಲಿರುವ ಡ್ರಗ್ಸ್​ ಸೇವನೆ ಬಗ್ಗೆ ನಟಿ ಕಂಗನಾ ರಣಾವತ್​ ಸಾಕಷ್ಟು ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಬಾಲಿವುಡ್​ನಲ್ಲಿರುವ ಶೇ. 99ರಷ್ಟು ಜನ ಡ್ರಗ್ಸ್​ ಸೇವಿಸುತ್ತಾರೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಸಾಕಷ್ಟು ಚರ್ಚೆಗಳಾಗಿವೆ.

    ಇದನ್ನೂ ಓದಿ: ಲಾಕ್​ಡೌನ್​ ಬಳಿಕ ಹಾಸ್ಯ ನಟ ಧರ್ಮಣ್ಣ ಸಖತ್​ ಬಿಜಿ

    ಇತ್ತೀಚೆಗೆ ಸಂಸತ್ತಿನಲ್ಲೂ ಈ ವಿಷಯದ ಬಗ್ಗೆ ಪ್ರತಿಧ್ವನಿಯಾಗಿತ್ತು. ಈ ವಿಷಯವಾಗಿ ಮಾತನಾಡಿದ್ದ ಹಿರಿಯ ನಟಿ ಮತ್ತು ಸಮಾಜವಾದಿ ಪಕ್ಷದ ಸಂಸದೆಯಾಗಿರುವ ಜಯಾ ಬಚ್ಚನ್​, ‘ಸೋಷಿಯಲ್​ ಮೀಡಿಯಾದಲ್ಲಿ ಚಿತ್ರರಂಗದವರನ್ನು ಹರಿದು ಮುಕ್ಕುತ್ತಿದ್ದಾರೆ. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವವರೇ ಗಟಾರ ಎಂದು ಕರೆಯುತ್ತಿದ್ದಾರೆ. ಅಂತಹ ಶಬ್ಧಗಳನ್ನು ಉಪಯೋಗಿಸುವುದಕ್ಕೆ ಬಿಡಬಾರದು’ ಎಂದು ಕಂಗನಾ ಹೆಸರನ್ನು ಪ್ರಸ್ತಾಪಿಸದೆಯೇ ಹೇಳಿದ್ದರು.

    ಈಗ ಕನ್ನಡತಿ ರಮ್ಯಾ ಸಹ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಸಾಕ್ಷಿಗಳಿದ್ದರೆ ಪೊಲೀಸರಿಗೆ ಕೊಡು ಎಂದು ಕಂಗನಾಗೆ ಸಲಹೆ ಕೊಟ್ಟಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ಡ್ರಗ್ಸ್​ ಮಾಫಿಯಾ ಬಗ್ಗೆ ಗೊತ್ತಿದ್ದರೆ ಬಹಿರಂಗ ಮಾಡಿ. ಪೊಲೀಸರಿಗೆ ಸಾಕ್ಷಿ ಕೊಡಿ. ಆ ನಂತರ ಅವರು ಅವರ ಕೆಲಸ ಮಾಡುತ್ತಾರೆ. ಇದರಿಂದ ಡ್ರಗ್ಸ್​ ಮಾಫಿಯಾ ವಿರುದ್ಧ ಸಮರ ಸಾರಿರುವ ನಾರ್ಕೋಟಿಕ್ಸ್​ ಬ್ಯೂರೋಗೆ ಬಹಳ ಸಹಾಯವಾಗುತ್ತದೆ. ಏನೇ ಮಾಡಿದರೂ ಒಳ್ಳೆಯ ಉದ್ದೇಶಕ್ಕೆ ಮಾಡಿ, ಸೇಡಿಗಾಗಿ ಅಲ್ಲ’ ಎಂದು ರಮ್ಯಾ ಟ್ವೀಟ್​ ಮಾಡಿದ್ದಾರೆ.

    ಇದನ್ನೂ ಓದಿ: ಕಮಲ್​ ಹಾಸನ್​ಗೆ ಆಕ್ಷನ್​-ಕಟ್​ ಹೇಳಲಿರುವ ‘ಮಾಸ್ಟರ್​’ ನಿರ್ದೇಶಕ …

    ಈ ಕುರಿತು ಮತ್ತಷ್ಟು ಬರೆದಿರುವ ಅವರು, ‘ಬೇಸರದ ವಿಷಯವೆಂದರೆ, ನಿಮ್ಮ ಉದ್ದೇಶಗಳೆಲ್ಲಾ ತಪ್ಪಾಗಿ ಅರ್ಥೈಸಲಾಗುತ್ತಿದೆ. ಹೆದರಿಸುವ ಬದಲು, ಡ್ರಗ್ಸ್​ ಜಾಲದಲ್ಲಿರುವವರಿಗೆ ಸಹಾಯ ಮಾಡಿ. ಸಾಧ್ಯವಾದರೆ ಪುನರ್ವಸತಿ ಕೇಂದ್ರ ಶುರು ಮಾಡಿ. ಸಾಮಾನ್ಯವಾಗಿ ಡ್ರಗ್ಸ್​ ತೆಗೆದುಕೊಳ್ಳುವವರಿಗೆ ಈ ಜೀವನ ಎಷ್ಟು ಸುಂದರ ಎಂದು ಗೊತ್ತಿರುವುದಿಲ್ಲ. ಆಧ್ಯಾತ್ಮದಲ್ಲಿ ನಿಮಗೆ ಆಸಕ್ತಿ ಇರುವುದರಿಂದ ಈ ಬಗ್ಗೆ ಗೊತ್ತಿರುತ್ತದೆ. ಈ ವಿಷಯದಲ್ಲಿ ನಿಜಕ್ಕೂ ನಿಮಗೇನಾದರೂ ಮಾಡಬೇಕೆನಿಸಿದರೆ, ಡ್ರಗ್ಸ್​ ವಿರುದ್ಧ ಸಮರ ಸಾರಿ. ನೀವು ಸಹ ಒಂದು ಕಾಲಕ್ಕೆ ಡ್ರಗ್​ ಅಡಿಕ್ಟ್​ ಆಗಿದ್ದಿರಿ ಎಂದು ಹೇಳಿಕೊಂಡಿದ್ದೀರಿ. ಆ ಧೈರ್ಯ ಮೆಚ್ಚಲೇಬೇಕು. ನಿಮ್ಮ ಅನುಭವವನ್ನು ಹಂಚಿಕೊಂಡು, ಡ್ರಗ್ಸ್​ ಮೀರಿ ಬೆಳೆಯುವುದ ಹೇಗೆ ಎಂದು ಜಗತ್ತಿಗೆ ತೋರಿಸಿಕೊಡಿ’ ಎಂದು ರಮ್ಯಾ ಸಲಹೆ ನೀಡಿದ್ದಾರೆ.

    ಡಾ. ವಿಷ್ಣುವರ್ಧನ್​ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಅಂಚೆ ಲಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts