More

    ರಂಜಾನ್ ಸಂಭ್ರಮಕ್ಕೆ ಕಡಿವಾಣ ಹಾಕಿದ ಕರೊನಾ ; ಎಲ್ಲೆಡೆ ಸರಳವಾಗಿ ಹಬ್ಬ ಆಚರಣೆ

    ತುಮಕೂರು : ಕರೊನಾ ಎರಡನೇ ಅಲೆ ಭೀತಿಯ ನಡುವೆಯೇ ಮುಸ್ಲಿಮರು ಈದ್ ಉಲ್ ಫಿತುರ್ ರಂಜಾನ್ ಹಬ್ಬವನ್ನು ಗುರುವಾರ ತಮ್ಮ ತಮ್ಮ ಮನೆಗಳಲ್ಲೇ ಸರಳವಾಗಿ ಆಚರಿಸಿದರು. ಸರ್ಕಾರದ ಕಟ್ಟುನಿಟ್ಟಿನ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರಲಿಲ್ಲ. ಬದಲಿಗೆ 6 ಮಂದಿಯಷ್ಟೇ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.

    ಜನತಾಕರ್ಫ್ಯೂ ಹಿನ್ನೆಲೆಯಲ್ಲಿ ರಂಜಾನ್ ಸಂಭ್ರಮಕ್ಕೆ ಕಡಿವಾಣಬಿದ್ದಿತ್ತು. ಅಲ್ಲದೆ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಾಗದ ಸಂದಿಗ್ಧತೆಯಲ್ಲಿ ಹಬ್ಬವನ್ನು ಸಂಪ್ರದಾಯ ಬದ್ಧವಾಗಿ ಮನೆಗಳಲ್ಲೇ ಕುಟುಂಬದವರೊಡಗೂಡಿ ಆಚರಿಸುವ ಮೂಲಕ ಕರೊನಾ ಸಂಕಷ್ಟದಿಂದ ಪಾರು ಮಾಡುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿರುವುದು ವಿಶೇಷ. ಮನೆ ಮಂದಿ, ಮಕ್ಕಳು ಸೇರಿದಂತೆ ಎಲ್ಲರೂ ಹೊಸ ಉಡುಪುಗಳನ್ನು ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.

    ರಫೀಕ್ ಮನೆಯಲ್ಲಿ ಪ್ರಾರ್ಥನೆ: ಮಾಜಿ ಶಾಸಕ ಡಾ.ಎಸ್.ರಫೀಕ್‌ಅಹ್ಮದ್ ಅವರ ನಿವಾಸದ ಆವರಣದಲ್ಲಿ ಪರಸ್ಪರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸುವ ಮೂಲಕ ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.
    ಕರೊನಾ ಆದಷ್ಟು ಬೇಗ ದೂರವಾಗಲಿ: ಕರೊನಾ ಎರಡನೇ ಅಲೆಯ ಅಟ್ಟಹಾಸ ಆದಷ್ಟು ಬೇಗ ನಿವಾರಣೆಯಾಗಲಿ ಎಂದು ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಪ್ರಾರ್ಥನೆ ಸಲ್ಲಿಸಿದರ. ನಗರದ ತಮ್ಮ ನಿವಾಸದಲ್ಲಿ ಕುಟುಂಬದವರ ಜತೆ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಿ, ಹಬ್ಬವನ್ನು ಸರಳವಾಗಿ ಆಚರಿಸಿದರು.

    ವ್ಯಾಪಾರ ವಹಿವಾಟು ನಡೆದಿಲ್ಲ : ರಂಜಾನ್ ಹಬ್ಬದ ಸಂದರ್ಭದಲ್ಲಿ ವ್ಯಾಪಾರಕ್ಕೆ ಸಂಪೂರ್ಣ ಕಡಿವಾಣ ಬಿದ್ದಿದ್ದು ಕಳೆದ ವರ್ಷದಂತೆ ಈ ವರ್ಷವೂ ವ್ಯಾಪಾರ, ವಹಿವಾಟು ನಡೆಯಲಿಲ್ಲ. ರಂಜಾನ್ ವಿಶೇಷ ಎನ್ನಿಸಿಕೊಂಡಿದ್ದ ತರಹೇವಾರಿ ಬಟ್ಟೆ, ಸಿಹಿ ತಿಂಡಿ, ಒಣ ಹಣ್ಣುಗಳಿಗೆ ಬೇಡಿಕೆ ಗಣನೀಯವಾಗಿ ಕುಗ್ಗಿದ್ದು ವ್ಯಾಪಾರಿಗಳಿಗೆ ನೆಮ್ಮದಿ ಕೆಡಿಸಿತ್ತು.

    ಪವಿತ್ರ ರಂಜಾನ್ ತಿಂಗಳಲ್ಲಿ ಉಪವಾಸ ಇದ್ದು, ಬಡವರಿಗೆ ದಾನ ಮಾಡುವ ಮೂಲಕ ಹಬ್ಬವನ್ನು ಆಚರಿಸುತ್ತೇವೆ. ಪ್ರಸ್ತುತ ಸಂಕಷ್ಟದ ಸಮಯ ದೂರವಾಗಿ, ಈ ನಾಡು ತ್ವರಿತಗತಿಯಲ್ಲಿ ಕರೊನಾ ಮುಕ್ತವಾಗಿ ಜನತೆ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ.
    ಎಸ್.ರಫೀಕ್ ಅಹ್ಮದ್ ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts