More

    ಕಾರ್ತಿಕ್ ಆರ್ಯನ್‌ನಿಂದ ಹಿಡಿದು ದೀಪಿಕಾ ಪಡುಕೋಣೆವರೆಗೆ…ಸೆಲೆಬ್ರಿಟಿಗಳಿಗೆ ‘ರಾಮೇಶ್ವರಂ ಕೆಫೆ’ ಎಂದರೆ ಏಕಿಷ್ಟ?

    ಬೆಂಗಳೂರು: ಬೆಂಗಳೂರಿನಲ್ಲಿರುವ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ದುಷ್ಕೃತ್ಯಕ್ಕೆ ಕಾರಣ ಇನ್ನು ತಿಳಿದುಬಂದಿಲ್ಲ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯ ಕುರಿತು ಈಗಾಗಲೇ ಸಿಎಂ ಡಿಸಿಎಂ ಪ್ರತಿಕ್ರಿಯೆ ನೀಡಿದ್ದು, ಆರೋಪಿಯ ಪತ್ತೆ ಹಚ್ಚುವ ಕಾರ್ಯ ಚುರುಕಾಗಿ ನಡೆದಿದೆ ಎಂದು ತಿಳಿಸಿದ್ದಾರೆ.

    ಇನ್ನು ರಾಮೇಶ್ವರಂ ಕೆಫೆಯ ಬಗ್ಗೆ ಹೇಳುವುದಾದರೆ ಅನೇಕ ಸೆಲೆಬ್ರಿಟಿಗಳು ಈ ಕೆಫೆಯ ದೋಸೆಯನ್ನು ಬಹಳ ಇಷ್ಟಪಟ್ಟು ತಿನ್ನುತ್ತಿದ್ದರು. ಹೌದು ಕಳೆದ ವರ್ಷ, ದೀಪಿಕಾ ಪಡುಕೋಣೆ ಈ ಕೆಫೆಯಲ್ಲಿ ಕಾಣಿಸಿಕೊಂಡಿದ್ದರೆ, ಒಂದು ವಾರದ ಹಿಂದೆಯಷ್ಟೇ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಕೂಡ ದೋಸೆ ರುಚಿ ನೋಡಿದ್ದರು. ಈ ಫೋಟೋವನ್ನು ಕಾರ್ತಿಕ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ರಾಮೇಶ್ವರಂ ಕೆಫೆ ಯಾಕೆ ಅಷ್ಟೊಂದು ಫೇಮಸ್ ಎಂಬ ಪ್ರಶ್ನೆ ಎಲ್ಲರಿಗೂ ಮೂಡಿರಬಹುದು.

    ದೋಸೆ ನನಗಿಷ್ಟ ಎಂದ ಕಾರ್ತಿಕ್ ಆರ್ಯನ್
    ಕಾರ್ತಿಕ್ ಆರ್ಯನ್ ಕಳೆದ ವಾರ ಬೆಂಗಳೂರಿನ ಇಂದಿರಾನಗರದಲ್ಲಿರುವ ‘ದಿ ರಾಮೇಶ್ವರಂ ಕೆಫೆ’ಗೆ ಆಗಮಿಸಿದಾಗ ಅವರನ್ನು ನೋಡಲು ಜನಸಾಗರವೇ ನೆರೆದಿತ್ತು. ಕಾರ್ತಿಕ್ ತನ್ನ ಸ್ನೇಹಿತರೊಂದಿಗೆ ಇಲ್ಲಿಗೆ ಬಂದಿದ್ದರು. ಕೆಫೆಯ ದೋಸೆ ನನಗೆ ಇಷ್ಟ ಎಂದು ಹೇಳಿದ್ದರು. ಜೊತೆಗೆ ಇಲ್ಲಿನ ಪರಿಸರವೂ ಅವರಿಗೆ ತುಂಬಾ ಇಷ್ಟವಾಗಿತ್ತು. ಕಾರ್ತಿಕ್ ತಮ್ಮ ಪೋಸ್ಟ್‌ನಲ್ಲಿ ನಾನು ಫುಡ್ ಬ್ಲಾಗರ್ ಆಗಲು ಯೋಚಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದರು.

    ಇದ್ದಕ್ಕಿದ್ದಂತೆ ಭೇಟಿ ಕೊಟ್ಟಿದ್ದ ದೀಪಿಕಾ
    ಕಳೆದ ವರ್ಷ ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ಇದ್ದಕ್ಕಿದ್ದಂತೆ ರಾಮೇಶ್ವರಂ ಕೆಫೆಗೆ ಬಂದಿದ್ದರು. ಇವರಲ್ಲದೆ ಮಾಸ್ಟರ್‌ಚೆಫ್ ಗ್ಯಾರಿ ಮೆಹಿಗನ್ ಕೂಡ ರಾಮೇಶ್ವರಂ ಕೆಫೆಯಲ್ಲಿ ದೋಸೆ ರುಚಿ ನೋಡಿದ್ದಾರೆ. ಕೇಸರಿ ಬಾತ್ ಜೊತೆ ರಾಗಿ ದೋಸೆ, ತುಪ್ಪದ ದೋಸೆ, ಬಡೆ, ಇಡ್ಲಿ, ಫಿಲ್ಟರ್ ಕಾಫಿಗೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಪ್ರತಿ ತಿಂಗಳು 5 ಕೋಟಿ ಆದಾಯ!
    ವರದಿಗಳ ಪ್ರಕಾರ, ಇಂದಿರಾ ನಗರವಲ್ಲದೆ, ರಾಮೇಶ್ವರಂ ಕೆಫೆ ಬೆಂಗಳೂರಿನ ಜೆಪಿ ನಗರ, ರಾಜಾಜಿನಗರ, ಬ್ರೂಕ್‌ಫೀಲ್ಡ್‌ನಲ್ಲಿಯೂ ಶಾಖೆಗಳನ್ನು ಹೊಂದಿದೆ. ಈ ಕೆಫೆಯಲ್ಲಿ ಶುದ್ಧ ಸಸ್ಯಾಹಾರಿ ದೊರೆಯಲಿದೆ. ವರದಿ ಪ್ರಕಾರ ರಾಮೇಶ್ವರಂ ಕೆಫೆಯ ಮಾಸಿಕ ಆದಾಯ ಸುಮಾರು 4 ರಿಂದ 5 ಕೋಟಿ ರೂ. ಕೆಫೆಯು ಬೆಳಗ್ಗೆ 6 ಗಂಟೆಗೆ ತೆರೆಯುತ್ತದೆ ಮತ್ತು ರಾತ್ರಿ 2 ರ ನಂತರ ಮುಚ್ಚುತ್ತದೆ.

    ಈ ಕೆಫೆ ಏಕೆ ಪ್ರಸಿದ್ಧವಾಗಿದೆ?
    ವರದಿಗಳ ಪ್ರಕಾರ, ರಾಮೇಶ್ವರಂ ಕೆಫೆಯು ವಿವಿಧ ರೀತಿಯ ದೋಸೆ ಮತ್ತು ಅವುಗಳ ರುಚಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಇಡ್ಲಿ ಸಾಂಬಾರ್ ಕೂಡ ತುಂಬಾ ರುಚಿಯಾಗಿರುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿ ಮಸಾಲೆ ದೋಸೆ, ತುಪ್ಪದ ದೋಸೆ, ಬೆಳ್ಳುಳ್ಳಿ ದೋಸೆ, ರಾಗಿ ದೋಸೆ, ಬೆಣ್ಣೆ ದೋಸೆ, ಅಕ್ಕಿ ರೊಟ್ಟಿ, ಪೊಂಗಲ್, ವಡಾ, ಇಡ್ಲಿ ಸಾಂಬಾರ್ ಸಿಗುತ್ತದೆ.

    ಅಪ್ಪಿ ತಪ್ಪಿಯೂ ಹೆಣ್ಮಕ್ಕಳಿಗೆ ‘ಡಾರ್ಲಿಂಗ್’ ಎಂದು ಕರೆಯಬೇಡಿ, ನೀವು ಜೈಲಿಗೆ ಹೋಗಬೇಕಾಗಬಹುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts