More

    ರಾಜ್ಯಮಟ್ಟದ ಚೆಸ್‌ನಲ್ಲಿ ರಮೇಶ್ ಚಾಂಪಿಯನ್

    ಶಿವಮೊಗ್ಗ: ಕರ್ನಾಟಕ ಸ್ಟೇಟ್ ಚೆಸ್ ಅಸೋಸಿಯೇಷನ್ ಫಾರ್ ವಿಶುಯಲಿ ಚಾಲೆಂಜ್ ಹಾಗೂ ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಆಶ್ರಯದಲ್ಲಿ ಅಂಧರಿಗಾಗಿ ನಡೆದ ರಾಜ್ಯಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಬೆಂಗಳೂರಿನ ಎ.ಆರ್.ರಮೇಶ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

    ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರದಲ್ಲಿ ನಡೆದ ಸ್ಪರ್ಧೆಯಲ್ಲಿ 15ಕ್ಕಿಂತ ಹೆಚ್ಚು ಜಿಲ್ಲೆಯ 70 ಅಂಧರು ಭಾಗವಹಿಸಿದ್ದರು. ಈ ಪಂದ್ಯಾವಳಿಯಲ್ಲಿ ಸ್ವಿಸ್‌ಲೀಕ್ ಮಾದರಿಯಲ್ಲಿ ಏಳು ಸುತ್ತನ್ನು ಒಳಗೊಂಡಿತ್ತು. ಅದರಲ್ಲಿ 6.5 ಪಾಯಿಂಟ್ ಪಡೆದ ಬೆಂಗಳೂರಿನ ರಮೇಶ್ ಚಾಂಪಿಯನ್ ಆದರೆ ಬೆಂಗಳೂರಿನ ರವಿಕಿರಣ್ ದ್ವಿತೀಯ ಸ್ಥಾನ ಪಡೆದರು.
    ಶಿವಮೊಗ್ಗದ ವೃತ್ತಿಜೈನ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಬೆಂಗಳೂರಿನ ಬಿ.ಜ್ಯೋತಿ ಉತ್ತಮ ಮಹಿಳಾ ಆಟಗಾರ್ತಿ, ಮೈಸೂರಿನ ವರ್ಜೇಶ್ ಉತ್ತಮ ಕಿರಿಯ ಆಟಗಾರ ಹಾಗೂ ಶಾರದಾದೇವಿ ಶಾಲೆಯ ಶೋಭವ್ವ ಅವರು ಮಹಿಳಾ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
    ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರದಲ್ಲಿ ನಡೆದ ಸಮಾರೋಪದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ರಾಷ್ಟ್ರೀಯ ಉಪಾಧ್ಯಕ್ಷ ಕಿಶನ್ ಗಂಗೊಳ್ಳಿ ಮಾತನಾಡಿ, ಈ ಪಂದ್ಯಾವಳಿಯಲ್ಲಿ ಟಾಪ್ 15 ಸ್ಥಾನ ಪಡೆದವರನ್ನು ಇದೇ ವರ್ಷ ನಡೆಯುವ ದಕ್ಷಿಣ ವಲಯ ಮಟ್ಟಕ್ಕೆ ಆಯ್ಕೆ ಮಾಡಲಾಗಿದೆ ಎಂದರು. ಕೇಂದ್ರದ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಮಾತನಾಡಿ, ದೃಷ್ಠಿ ದೋಷ ಉಳ್ಳವರಿಗೆ ಸದಾ ಈ ಸಂಸ್ಥೇ ಸೇವೆ ಮಾಡಲು ಸಿದ್ದವಾಗಿರುತ್ತದೆ ಎಂದರು.
    ಅಸೋಸಿಯೇಷನ್ ಅಧ್ಯಕ್ಷ ಶ್ರೀಕೃಷ್ಣ ಉಡುಪ ಮಾತನಾಡಿ, ಮುಂದಿನ ದಿನಗಳಲ್ಲಿ ದೃಷ್ಠಿ ದೋಷ ಮತ್ತು ಅಂಧರಿಗಾಗಿ ಹಲವಾರು ಚೆಸ್ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು. ಆಡಳಿತಾಧಿಕಾರಿ ಈಶ್ವರ ಭಟ್, ಪ್ರಾಚಾರ್ಯ ಸುರೇಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts