More

    ಇಂದು ರಮೇಶ್ ಅರವಿಂದ್ ಮಗಳ ಆರತಕ್ಷತೆ

    ಬೆಂಗಳೂರು: ನಟ- ನಿರ್ದೇಶಕ ರಮೇಶ್ ಅರವಿಂದ್ ಅವರ ಮಗಳು ನಿಹಾರಿಕಾ ಮದುವೆ ಅಕ್ಷಯ್ ಜತೆಗೆ ಡಿಸೆಂಬರ್ ಕೊನೆಯಲ್ಲಿ ನಡೆದಿತ್ತು. ಕುಟುಂಬದವರು ಮತ್ತು ಆಪ್ತರಿಗಷ್ಟೇ ಈ ಮದುವೆ ಸೀಮಿತವಾಗಿದ್ದು, ಚಿತ್ರರಂಗದ ಸ್ನೇಹಿತರಿಗೆ ಮತ್ತು ಗಣ್ಯರಿಗೆ ಪ್ರತ್ಯೇಕ ಸಮಾರಂಭ ಆಯೋಜಿಸುವುದಾಗಿ ರಮೇಶ್ ಹೇಳಿದ್ದರು. ಅದರಂತೆ ಶನಿವಾರ ನಗರದ ಹೋಟೆಲ್​ನಲ್ಲಿ ನಿಹಾರಿಕಾ ಮತ್ತು ಅಕ್ಷಯ್ ಆರತಕ್ಷತೆ ನಡೆಯಲಿದ್ದು, ಈ ಸಮಾರಂಭದಲ್ಲಿ ಚಿತ್ರರಂಗ ಸೇರಿ ಬೇರೆಬೇರೆ ಕ್ಷೇತ್ರಗಳ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸಿಎಂ ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಅಶ್ವತ್ಥ್​ನಾರಾಯಣ್ ಸೇರಿ ಹಲವರನ್ನು ಖುದ್ದು ರಮೇಶ್ ಅರವಿಂದ್ ಅವರು ಭೇಟಿ ಮಾಡಿ ಆಹ್ವಾನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts