More

    ತರಬೇತಿ ವೇಳೆ ಕುಸಿದು ಬಿದ್ರೂ ಚಿಕಿತ್ಸೆ ಕೊಡಿಸದ ಅಧಿಕಾರಿಗಳು: ಪೊಲೀಸ್​​ ಪೇದೆ ದುರಂತ ಸಾವು

    ರಾಮನಗರ: ಪೊಲೀಸ್​ ತರಬೇತಿ ವೇಳೆ ಕುಸಿದು ಬಿದ್ದ ಪೊಲೀಸ್​​ ಪೇದೆಗೆ ಚಿಕಿತ್ಸೆ ದೊರೆಯದೇ ಮೃತಪಟ್ಟಿರುವ ಅಮಾನವೀಯ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.

    ಎಲ್ಲಪ್ಪ (36) ಸಾವಿಗೀಡಾದ ಪೇದೆ. ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯಲ್ಲಿ ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕು ಮೂಲದ ಎಲ್ಲಪ್ಪ ಅವರು ಎರಡೂವರೆ ತಿಂಗಳಿನಿಂದ ಚನ್ನಪಟ್ಟಣದ ವಂದರಾಗುಪ್ಪೆ ಗ್ರಾಮದಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದರು.

    ನಿನ್ನೆ ತರಬೇತಿ ಪಡೆಯುವ ವೇಳೆ ಎಲ್ಲಪ್ಪ ಕುಸಿದುಬಿದ್ದರು. ಹೀಗಿದ್ದರೂ ಎಲ್ಲಪ್ಪ ಅವರಿಗೆ ಅಧಿಕಾರಿಗಳು ಚಿಕಿತ್ಸೆ ಕೊಡಿಸಲಿಲ್ಲ. ಹೀಗಾಗಿ ಅವರು ಮೃತಪಟ್ಟಿದ್ದಾರೆಂದು ಆರೋಪಿಸಿ, ಉಳಿದ ಪೇದೆಗಳು ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಎಲ್ಲಪ್ಪ ಅವರು ಸೈನಿಕನಾಗಿ ಸೇವೆ ಸಲ್ಲಿಸಿದ್ದಾರೆ.

    ಡಿವೈಎಸ್ಪಿ ಗುರುಪ್ರಸಾದ್ ನಿರ್ಲಕ್ಷದಿಂದ ಎಲ್ಲಪ್ಪ ಮೃತಪಟ್ಟಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳ ವಿರುದ್ಧ ತರಬೇತಿನಿರತ ಪೇದೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಗ್ರಾಮಸ್ಥರಿಂದ ಕಲ್ಲು ತೂರಾಟ: ಪೆಟ್ಟು ತಿಂದು ಆಸ್ಪತ್ರೆಗೆ ದಾಖಲಾದ ಮಾಗಡಿ ಪಿಎಸ್​ಐ..!

    ಮಧ್ಯರಾತ್ರಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ​ ಮನೆಗೆ ನುಗ್ಗಿ ಎರಡು ಕಾರುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು..!

    ಸಿಲಿಕಾನ್​ ಸಿಟಿಯಲ್ಲಿ ವಂಚಕ ಕಂಪನಿ! ಟ್ರೇಡ್​ ಆಕ್ಸಿಸ್​ ಕಂಪನಿಯಿಂದ ವಂಚನೆ -ಶೇ. 8 ರವರೆಗೆ ಲಾಭಾಂಶ ಆಮಿಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts