More

    ನಗರಸಭೆಯಲ್ಲಿ ಮಹಿಳಾ ಕಾರುಬಾರು: ಕಾಂಗ್ರೆಸ್ ತೆಕ್ಕೆಗೆ ಅಧಿಕಾರ ಅಧ್ಯಕ್ಷೆಯಾಗಿ ಪಾರ್ವತಮ್ಮ, ಉಪಾಧ್ಯಕ್ಷೆಯಾಗಿ ಜಯಲಕ್ಷ್ಮಮ್ಮ ಆಯ್ಕೆ

    ರಾಮನಗರ : ತೀವ್ರ ಕುತೂಹಲ ಕೆರಳಿಸಿದ್ದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ಸಿ.ಪಾರ್ವತಮ್ಮ ಅಧ್ಯಕ್ಷೆಯಾಗಿ ಮತ್ತು ಉಪಾಧ್ಯಕ್ಷೆಯಾಗಿ ಜಯಲಕ್ಷ್ಮಮ್ಮ ಆಯ್ಕೆಯಾಗಿದ್ದಾರೆ.
    ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ 30ನೇ ವಾರ್ಡಿನ ಬಿ.ಸಿ. ಪಾರ್ವತಮ್ಮ ಮತ್ತು ಜೆಡಿಎಸ್‌ನಿಂದ 8ನೇ ವಾರ್ಡಿನ ಆರ್.ಮಂಜುಳಾ ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ 1ನೇ ವಾರ್ಡಿನ ಸದಸ್ಯೆ ಜಯಲಕ್ಷ್ಮಮ್ಮ ಮತ್ತು ಜೆಡಿಎಸ್‌ನಿಂದ 17ನೇ ವಾರ್ಡಿನ ರಮೇಶ್ ನಾಮಪತ್ರ ಸಲ್ಲಿಸಿದರು. ಬಿ.ಸಿ.ಪಾರ್ವತಮ್ಮ 21 ಮತ ಪಡೆದು ವಿಜಯ ವಾ

     

    ಲೆ ಧರಿಸಿದರು.

    ಪ್ರತಿಸ್ಪರ್ಧಿ ಆರ್.ಮಂಜುಳಾ 12 ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಯಲಕ್ಷ್ಮಮ್ಮ 21 ಮತ ಪಡೆದರೆ, ರಮೇಶ್ 11 ಮತ ಪಡೆದು ಸೋತರು. ಚುನಾವಣಾಧಿಕಾರಿ ಮಂಜುನಾಥ್, ಸಹಾಯಕ ಅಧಿಕಾರಿಯಾಗಿ ನಂದಕುಮಾರ್ ಕರ್ತವ್ಯ ನಿರ್ವಹಿಸಿದರು.31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಸದಸ್ಯರು, ಸಂಸದ ಡಿ.ಕೆ. ಸುರೇಶ್ ಮತ್ತು ಶಾಸಕಿ ಅನಿತಾ ಕುವಾರಸ್ವಾಮಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

    ಲಿತಾಂಶ ೋಷಣೆ ನಂತರ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ ಎಲ್ಲರಿಗೂ ಆಸೆಗಳು ಇರುವುದು ಸಹಜ, ಬೇಡ ಎನ್ನಲಾಗುವುದಿಲ್ಲ. ಪಕ್ಷಕ್ಕೆ ಎಲ್ಲರೂ ಬದ್ಧರಾಗಿದ್ದರಿಂದ ಯಾವುದೇ ಗೊಂದಲವಿಲ್ಲದೆ ಅಧ್ಯಕ್ಷರಾಗಿ ಬಿ.ಸಿ.ಪಾರ್ವತಮ್ಮ ಮತ್ತು ಉಪಾಧ್ಯಕ್ಷರಾಗಿ ಜಯಲಕ್ಷ್ಮಮ್ಮ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ರಾಮನಗರದ ಅಭಿವೃದ್ಧಿ ದೃಷ್ಟಿಯಿಂದ ಕಾರ್ಯನಿರ್ವಹಿಸುವಂತೆ ಮನವಿ ವಾಡುತ್ತೇನೆ ಎಂದಷ್ಟೇ ಹೇಳಿದರು.
    ಲಿತಾಂಶ ೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ನಗರಸಭೆ ಸುತ್ತ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.

    ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಜಿಪಂ ವಾಜಿ ಅಧ್ಯಕ್ಷರಾದ ಇಕ್ಬಾಲ್‌ಹುಸೇನ್, ಕೆ.ರಮೇಶ್, ನಗರ ಟಕದ ಅಧ್ಯಕ್ಷ ಚೇತನ್‌ಕುವಾರ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎರೇಹಳ್ಳಿ ಮಂಜು, ನಗರಸಭೆ ಸದಸ್ಯ ಕೆ. ಶೇಷಾದ್ರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಉಪಾಧ್ಯಕ್ಷರಾದ ಎಲ್.ಚಂದ್ರಶೇಖರ್, ದೀಪಾ ಮುನಿರಾಜು, ನಗರಸಭೆ ವಾಜಿ ಉಪಾಧ್ಯಕ್ಷೆ ಮಂಗಳಮ್ಮ ಸೇರಿ ವಿವಿಧ ಟಕಗಳ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದು ನೂತನ ಅಧ್ಯಕ್ಷ – ಉಪಾಧ್ಯಕ್ಷರನ್ನು ಅಭಿನಂದಿಸಿದರು.

    ಮತ ಚಲಾಯಿಸಿದ ಅನಿತಾ – ಸುರೇಶ್ : ಚುನಾವಣೆ ಪ್ರಕ್ರಿಯೆಯಲ್ಲಿ ಸಂಸದ ಡಿ.ಕೆ.ಸುರೇಶ್ ಮತಚಲಾಯಿಸಿದರು. ಶಾಸಕಿ ಅನಿತಾ ಕುವಾರಸ್ವಾಮಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗೆ ಮತಚಲಾಯಿಸಿ ಉಪಾಧ್ಯಕ್ಷ ಅಭ್ಯರ್ಥಿಗೆ ಮತ ಚಲಾಯಿಸದೆ ಚುನಾವಣೆ ಪ್ರಕ್ರಿಯೆಯಿಂದ ಹೊರ ನಡೆದರು.

    ಹಿರಿತನ ಗುರ್ತಿಸಿ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು ಮತ್ತು ನಗರಸಭೆ ಸದಸ್ಯರು ನನ್ನನ್ನು ಅಧ್ಯಕ್ಷೆಯನ್ನಾಗಿ ಮಾಡಿದ್ದಾರೆ. ಅವರ ನಂಬಿಕೆಗೆ ಪೂರಕವಾಗಿ ಆಡಳಿತ ನಡೆಸುತ್ತೇನೆ. ನಗರದಲ್ಲಿನ ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಜಾಗ ಗುರ್ತಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಗರದ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನಪರ ಆಡಳಿತ ನೀಡುತ್ತೇನೆ.
    ಬಿ.ಸಿ.ಪಾರ್ವತಮ್ಮ ನೂತನ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts