More

    ನವಲಗುಂದದಲ್ಲಿ ರಾಮ ನಾಮ ಝೇಂಕಾರ

    ನವಲಗುಂದ: ಎಲ್ಲಿ ನೋಡಿದರಲ್ಲಿ ಕೇಸರಿ ಧ್ವಜಗಳ ಕಲರವ, ಹಸಿರು ತೋರಣಗಳ ಸಿಂಗಾರ, ರಂಗೋಲಿಗಳ ಚಿತ್ತಾರದ ನಡುವೆ ಮದುವಣಗಿತ್ತಿಯಂತೆ ಸಿಂಗಾರಗೊಂಡ ಪಟ್ಟಣದೆಲ್ಲೆಡೆ ರಾಮೋತ್ಸವ ಸಡಗರ, ನೋಡಲು ಕಣ್ಣೆರೆಡೂ ಸಾಲದಂತ ವೈಭವ.


    ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಪಟ್ಟಣದ ತುಂಬೆಲ್ಲಾ ರಾಮ ನಾಮ ಝೇಂಕಾರ ಜೋರಾಗಿತ್ತು, ರಾಮೋತ್ಸವದ ಅಂಗವಾಗಿ ಪಟ್ಟಣದಲ್ಲಿನ ಶಿವರಾಮ ಮಂದಿರದಲ್ಲಿ ಶ್ರೀನಿವಾಸಾಚಾರ್ಯ ಪುರಾಣಿಕ ಅವರಿಂದ ರಾಮ ಸೀತಾ ಸಹಿತ ಪರಿವಾರ ದೇವರುಗಳಿಗೆ ವಿಶೇಷ ಅಲಂಕಾರ ಪೂಜೆ ಹವನಾದಿಗಳು ನಡೆದವು.


    ಆರ್ಯವೈಶ್ಯ ಸಮಾಜದಿಂದ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಜರುಗಿದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಶ್ರೀರಾಮ ಜಪ ಸಂಕಲ್ಪ,ಪುಣ್ಯಾಹವಾಚನ, ನವಗ್ರಹ ಪೂಜೆ, ಶ್ರೀರಾಮ ತಾರಕ ಹೋಮ, ಪೂರ್ಣಾಹುತಿ ಮಂಗಳಾರತಿ ವಿದ್ವಾನ್ ಮಹೇಶ ಭಟ್ ನೇತೃತ್ವದಲ್ಲಿ ಸಾವಿರಾರು ಭಕ್ತರ ಸಮೂಹದಲ್ಲಿ ವಿಜೃಂಭಣೆಯಿಂದ ಜರುಗಿತು. ನಂತರ ಸಾಮೂಹಿಕ ಮಹಾಪ್ರಸಾದ ಸೇವಾ ಕಾರ್ಯಕ್ರಮ ಜರುಗಿತು. ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಲೋಕನಾಥ ಹೆಬಸೂರ,ಅಜಿತ್ ಆನೇಗುಂದಿ, ಮುರಳಿ ಹೆಬಸೂರ, ಎಸ್.ಎನ್. ಡಂಬಳ, ರಾಜು ಧಾರವಾಡ, ಜಗದೀಶ ಬೆಟದೂರ, ನವೀನ ಹರಿಹರ, ಶಂಕರ ನಾರಾಯಣ ಧಾರವಾಡ, ವಾಸವಿ ಮಹಿಳಾ ಮಂಡಳದ ಉಷಾರಾಣಿ ಧಾರವಾಡ ಸೇರಿ ನೂರಾರು ಸುಮಂಗಲೆಯರು ಇದ್ದರು.
    ಗಣಪತಿ ದೇವಸ್ಥಾನದಲ್ಲಿ ವೈದಿಕರ ನೇತೃತ್ವದಲ್ಲಿ ರಾಮತಾರಕ ಹೋಮ ಪೂರ್ಣಾವತಿ ಹೋಮ ನಡೆಸಿ, ಮಹಾ ಪ್ರಸಾದ ಆಯೋಜಿಸಲಾಗಿತ್ತು, ಕವಿ ಗವಾಯಿ ಮೌನೇಶ್ವರ ತುರವಿಹಾಳ ಅವರಿಂದ ರಾಮಾಯಣ ಕುರಿತಾದ ಗೀತ ಗಾಯನಗಳು ಜರುಗಿದವು, ಅಣ್ಣಪ್ಪ ಬಾಗಿ, ಈರಣ್ಣ ಚವಡಿ, ಚನ್ನಪ್ಪ ಕೆಸರಪ್ಪನವರ, ಶಂಭು ಶಿದ್ರಾಮಶೆಟ್ಟರ, ಸಂತೋಷ ನಾವಳ್ಳಿ ಮತ್ತಿತರರಿದ್ದರರು.


    ಸ್ಥಳೀಯ ಲಾಲಘಡ ಮಾರುತಿ ದೇವಸ್ಥಾನ ಸಮಿತಿಯಿಂದ ಹನುಮ ಮಾಲಾಧಾರಿಗಳು ಶ್ರೀರಾಮ ಹಾಗೂ ಆಂಜನೇಯ ಮೂರ್ತಿಗಳನ್ನು ಪಲ್ಲಕ್ಕಿ ಮೂಲಕ ಮೆರವಣೆಗೆ ನಡೆಸಿ ಮಾರುಕಟ್ಟೆಯಲ್ಲಿರುವ ಶಿವರಾಮ ಮಂದಿರದವರೆಗೆ ಕರೆತಂದರು.


    ರಾಮಲಿಂಗ ಓಣಿಯ ಶ್ರೀ ರಾಮಲಿಂಗ ಕಾಮದೇವರ ದೇವಸ್ಥಾನದಲ್ಲಿಯೂ ವಿಶೇಷ ಪೂಜೆ ಪ್ರಸಾದ ವ್ಯವಸ್ಥೆ ಆಯೋಜಿಸಲಾಗಿತ್ತು. ಹಿರೇಮಠದ ಹತ್ತಿರ ಇರುವ ಕಿಡಕಿ ಮಾರುತಿ ದೇವಸ್ಥಾನ ಹಾಗೂ ಹುಬ್ಬಳ್ಳಿ ಓಣಿಯಲ್ಲಿರುವ ಹನುಮಂತ ದೇವರ ದೇವಸ್ಥಾನದಲ್ಲಿಯೂ ಪೂಜೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಎಸ್​ಎಸ್​ಕೆ ಸಮಾಜ ಹಾಗೂ ಗೊಲ್ಲರ ಓಣಿಯ ಯುವಕರಿಂದ ಶ್ರೀರಾಮ ಭಜನಾ ಮೆರವಣೆಗೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts