More

    ರಾಜ್ಯದ 10 ಕ್ಷೇತ್ರಗಳಲ್ಲಿ ಮರಾಠ ಪಕ್ಷ ಸ್ಪರ್ಧೆ

    ಶಿವಮೊಗ್ಗ: ಲೋಕಸಭಾ ಚುನಾವಣೆಗೆ ರಾಜ್ಯದ 10 ಕ್ಷೇತ್ರಗಳಲ್ಲಿ ಮರಾಠ ಪಾರ್ಟಿಯ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಾಮಸುಂದರ್ ಗಾಯಕ್‌ವಾಡ್ ತಿಳಿಸಿದರು.

    ನಮ್ಮದು ರಾಷ್ಟ್ರೀಯ ಮರಾಠ ಪಕ್ಷವಾಗಿದ್ದು, ದೇಶಾದ್ಯಂತ 200ಕ್ಕೂ ಅಧಿಕ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ರಾಜ್ಯದಲ್ಲಿ ಮರಾಠರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರಿಗೆ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನವರು ಸರಿಯಾಗಿ ಸ್ಥಾನಮಾನ ನೀಡಿಲ್ಲ. ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶವನ್ನು ರಕ್ಷಣೆ ಮಾಡುವ ಹಾಗೂ ರೈತಾಪಿಗಳಾಗಿ, ಕೂಲಿ ಕಾರ್ಮಿಕರಾಗಿ, ದೇಶ ಸೇವೆ ಮಾಡುತ್ತಿರುವವರನ್ನು ಗುರುತಿಸಿ ರಾಷ್ಟ್ರೀಯ ಮರಾಠ ಪಾರ್ಟಿ ಲೋಕಸಭೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುತ್ತಿದೆ ಎಂದರು.
    ಉತ್ತರ ಕನ್ನಡದಿಂದ ತಾವು ಸ್ಪರ್ಧೆ ಮಾಡುತ್ತಿದ್ದು ಧಾರವಾಡದಿಂದ ಜೆ.ಡಿ.ಘೋರ್ಪಡೆ, ಹಾವೇರಿಯಿಂದ ನಾರಾಯಣ ರಾವ್ ಗಾಯಕ್‌ವಾಡ್, ಬೆಳಗಾವಿಯಿಂದ ಈಶ್ವರ್ ಗಾಡಿ, ಚಿಕ್ಕೋಡಿಯಿಂದ ವಿನೋದ್ ಸಾಳುಂಕೆ, ಬೀದರ್‌ನಿಂದ ವಿಜಯಕುಮಾರ್ ಪಾಟೇಲ್, ಬಾಗಲಕೋಟೆಯಿಂದ ಶ್ರೀಕಾಂತ್ ಮುಧೋಳ್, ಶಿವಮೊಗ್ಗದಿಂದ ಎಂ.ಡಿ.ದೇವರಾಜ್ ಶಿಂಧೆ ಸ್ಪರ್ಧೆ ಮಾಡುವರು. ವಿಜಯಪುರ ಮತ್ತು ಕಲಬುರಗಿ ಕ್ಷೇತ್ರಗಳಲ್ಲಿ ಎಸ್ಸಿ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು ಎಂದರು. ಪಕ್ಷದ ಅಧ್ಯಕ್ಷ ಮನೋಹರ್ ರಾವ್ ಜಾದವ್, ಪ್ರಮುಖರಾದ ವೀರೇಶಪ್ಪ, ಶಿವಾನಂದಪ್ಪ, ಗಾಯತ್ರಿ, ಮನೋಹರ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts