More

    ಬಾಲಭವನ ನಿರ್ವಹಣೆ ಮರೆತ ಅಧಿಕಾರಿಗಳು

    ಚಿತ್ರದುರ್ಗ: ಜಿಲ್ಲಾ ಬಾಲಭವನದ ದುಸ್ಥಿತಿ ಹಾರಿಬಲ್, ಪುಟಾಣಿ ಮಕ್ಕಳು ಆಡುವ ಈ ಭವನದ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ನಿಮ್ಮ ಮನಸಿಗೆ ಒಪ್ಪುವಂತೆ ಆತ್ಮಸಾಕ್ಷಿಯಿಂದ ಕೆಲಸ ಮಾಡಿ. ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಪೂರ್ಣಿಮಾ ಪ್ರಕಾಶ್ ಅವರು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದ ಪರಿಯಿದು.

    ಜಿಪಂದಲ್ಲಿ ಮಂಗಳವಾರ ಪ್ರಗತಿ ಪರಿಶೀಲಿಸಿ ಮಾತನಾಡಿ, ಶ್ರೀಮಂತರು ತಮ್ಮ ಮಕ್ಕಳನ್ನು ಮನರಂಜನೆಗೆಂದು ಪ್ರಖ್ಯಾತ ಸ್ಥಳಗಳಿಗೆ ಕ ರೆದೊಯ್ಯುತ್ತಾರೆ. ಗ್ರಾಮೀಣ, ನಗರ ಪ್ರದೇಶಗಳ ಬಡವರ ಮಕ್ಕಳ ಮನರಂಜನೆಗೆ ಸರ್ಕಾರ ಸವಲತ್ತು ಕಲ್ಪಿಸಿದ್ದರೂ ಅದರ ನಿರ್ವಹಣೆ ಸರಿಯಾಗಿಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು.

    ನಗರದ ಹೃದಯಭಾಗದ 3.10 ಎಕರೆ ವಿಸ್ತೀರ್ಣದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಭವನದಲ್ಲಿ ಶೌಚಗೃಹಗಳು ಕೆಟ್ಟದಾಗಿವೆ. ಬಾಲಭವನದ ಆವರಣದಲ್ಲಿದ್ದ ಮೊಲಗಳನ್ನು ಕಳವು ಮಾಡಿದ್ದಾರೆ ಎಂಬಿತ್ಯಾದಿ ಸಬೂಬು ಹೇಳುವುದು ಸರಿಯೇ?ಮುಂದಿನ ಬಾರಿ ನಗರಕ್ಕೆ ಭೇಟಿ ಕೊಟ್ಟಾಗ ಉತ್ತಮ ನಿರ್ವಹಣೆಯೊಂದಿಗೆ ಭವನವು ಅಪ್‌ಗ್ರೇಡ್ ಆಗಿರಬೇಕೆಂದು ತಾಕೀತು ಮಾಡಿದರು.

    ಭವನಕ್ಕೆ ಭೇಟಿ ಕೊಡುವಂತೆ ಜಿಲ್ಲಾ ಬಾಲಭವನ ಸಮಿತಿ ಅಧ್ಯಕ್ಷ, ಜಿಪಂ ಸಿಇಒ ಎಂ.ಎಸ್.ದಿವಾಕರ್ ಅವರಿಗೆ ಸೂಚಿಸಿದರು. ರಾಜ್ಯ ದ ಎಲ್ಲ ತಾಲೂಕುಗಳಲ್ಲಿ ಬಾಲಭವನ ನಿರ್ಮಾಣಕ್ಕೆ ರಾಜ್ಯಸರ್ಕಾರ ಉದ್ದೇಶಿಸಿದೆ. ತಾಲೂಕುಗಳಲ್ಲಿ ನಿವೇಶನ ಗುರುತಿಸಬೇಕಿದೆ. ಇದಕ್ಕೆ ಪೂರಕವಾಗಿ ಬಾಲ ಭವನಗಳ ಅಧ್ಯಕ್ಷರನ್ನಾಗಿ ಉಪವಿಭಾಗಾಧಿಕಾರಿ ಬದಲು ತಹಸೀಲ್ದಾರ್‌ಗಳನ್ನು ನೇಮಿಸಬೇಕೆಂಬ ಸಲಹೆಗೆ ನನ್ನ ಒಪ್ಪಿಗೆ ಇದೆ. ಬೋರ್ಡ್ ಮೀಟಿಂಗ್‌ನಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಬೆಂಗಳೂರಲ್ಲಿ ಜ.25 ರಿಂದ 27 ರವರೆಗೆ ಆ ಯೋಜಿಸಿರುವ ಯುವ ಪರಿಸರವಾದಿಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಜಿಲ್ಲೆಯಿಂದ ಇಬ್ಬರು ಮಕ್ಕಳನ್ನು ಕಳಿಸ ಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

    ಇನ್‌ಕ್ರಿಮೆಂಟ್ ಕಡಿತಕ್ಕೆ ಸೂಚನೆ: ವಾರಾಂತ್ಯ ತರಗತಿ ಸಹಿತ ಕಾರ‌್ಯಕ್ರಮಗಳ ಅನುಷ್ಠಾನದಲ್ಲಿ ನಿರ್ಲಕ್ಷೃ ತೋರಿರುವ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಹಾಗೂ ಅ ವರಿಗೆ 2 ಇನ್‌ಕ್ರಿಮೆಂಟ್ ಕಡಿತಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಭಾರತಿ ಬಣಕಾರ್ ಅವರಿಗೆ ಸಿಇಒ ಆದೇಶಿಸಿದರು.
    ಕೆಲಸ ಮಾಡದಿದ್ದರೂ ಮಾರ್ಚ್ ಸಮೀಪಿಸುತ್ತಿದೆ ಎಂದು ಬಿಲ್ ಸಲ್ಲಿಸಬಾರದೆಂದು ಎಚ್ಚರಿಸಿದರು. ವರದಿ ಸಲ್ಲಿಸುವ ವೇಳೆ ನಿರ್ಲಕ್ಷೃ ತೋರಿದ ಒಂದಿಬ್ಬರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರೂಪಣಾಧಿಕಾರಿ ಕೆಂಪಹನುಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿ ರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಡಿಸಿಎಫ್ ಸುರೇಶ್‌ಬಾಬು, ಮುಖ್ಯಗ್ರಂಥಾಲಯಾಧಿಕಾರಿ ಬಸವರಾಜ ಕೊಳ್ಳಿ, ವಿವಿಧ ತಾಲೂಕುಗಳ ಸಿಡಿಪಿಒಗಳು, ಶಿಕ್ಷಣ, ಲೋಕೋಪಯೋಗಿ ಮತ್ತಿತರ ಇಲಾಖೆ ಅಧಿಕಾರಿಗಳಿದ್ದರು. ಸಭೆಗೆ ಮುನ್ನ ಅಧ್ಯಕ್ಷರು ಬಾಲಭವನಕ್ಕೆ ಭೇಟಿ ನೀ ಡಿ ಪರಿಶೀಲಿಸಿದರು.

    ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಪೂರ್ಣಿಮಾ ಪ್ರಕಾಶ್ ಅವರು ಮಂಗಳವಾರ ಚಿತ್ರದುರ್ಗದಲ್ಲಿ ಪ್ರಗತಿ ಪರಿಶೀಲಿಸಿದರು. ಜಿಪಂ ಸಿಇಒ ಎಂ.ಎಸ್.ದಿವಾಕರ್ ಇದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts