More

    ರಾಜೀವ್​ ಗಾಂಧಿ ಹತ್ಯೆ ಪ್ರಕರಣದ ಎಲ್ಲ ಹಂತಕರನ್ನು ಜೈಲಿನಿಂದ ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಆದೇಶ​

    ನವದೆಹಲಿ: ಮಾಜಿ ಪ್ರಧಾನಿ ರಾಜೀವ್​ ಗಾಂಧಿ (Rajiv Gandhi) ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ (Supreme Court)​ ಶುಕ್ರವಾರ (ನ.11) ಆದೇಶ ಹೊರಡಿಸಿದೆ.

    ಪ್ರಕರಣದ ಎಲ್ಲ ಏಳು ಹಂತಕರನ್ನು ಬಿಡಗಡೆ ಮಾಡಬೇಕೆಂದು ತಮಿಳುನಾಡು (Tamil Nadu) ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ರಾಜ್ಯಪಾಲರು ಸಹ ಇದಕ್ಕೆ ಒಪ್ಪಿಗೆ ನೀಡಿದ್ದರು. ಇದರ ಆಧಾರದ ಮೇಲೆ ಹಂತಕರನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್​ ಆದೇಶಿಸಿದೆ. ಹಂತಕಿ ನಳಿನಿ ಶ್ರೀಹರನ್​ ಸೇರಿದಂತೆ ಆರು ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದೀಗ ಸುಪ್ರೀಂಕೋರ್ಟ್​ ತೀರ್ಪಿನಿಂದ ನಿರಾಳರಾಗಿದ್ದಾರೆ.

    ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ (B R Gavai)ಮತ್ತು ಬಿವಿ ನಾಗರತ್ನ (B V Nagarathna) ಅವರನ್ನೊಳಗೊಂಡ ನ್ಯಾಯಪೀಠವು ಆದೇಶ ಹೊರಡಿಸಿದ್ದು, ಅಪರಾಧಿಗಳಾದ ನಳಿನಿ, ಸಂತನ್, ಮುರುಗನ್, ಶ್ರೀಹರನ್, ರಾಬರ್ಟ್ ಪಯಸ್ ಮತ್ತು ರವಿಚಂದ್ರನ್ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಕಳೆದ ಮೇ 18ರಲ್ಲಿ ಮತ್ತೊಬ್ಬ ಆರೋಪಿ ಪೆರಾರಿವಾಲನ್ (Perarivalan)​ನನ್ನು ಸುಪ್ರೀಂಕೋರ್ಟ್​ ಬಿಡುಗಡೆ ಮಾಡಿತ್ತು.

    ಈ ಹಿಂದೆ ಪೆರಾರಿವಾಲನ್ ಅವರ ಮನವಿಯನ್ನು ಕೇಂದ್ರ ಸರ್ಕಾರ ವಿರೋಧಿಸಿತ್ತು. ಬಿಡುಗಡೆ ಮಾಡುವ ವಿಚಾರವನ್ನು ತಮಿಳುನಾಡು ರಾಜ್ಯಪಾಲರು ಆಗಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ತಿಳಿಸಿದ್ದಾರೆ. ಈ ಬಗ್ಗೆ ರಾಷ್ಟ್ರಪತಿಗಳು ಇನ್ನು ತೀರ್ಮಾನ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಈ ವೇಳೆ ಮಧ್ಯ ಪ್ರವೇಶಿಸಿದ ಕೋರ್ಟ್​ ಪ್ರಕರಣದ ವಿಳಂಬ ಮತ್ತು ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿತ್ತು. ಅಲ್ಲದೆ, ಪ್ರಕರಣದ ಎಲ್ಲಾ ಏಳು ಅಪರಾಧಿಗಳನ್ನು ಬಿಡುಗಡೆ ಮಾಡುವ ತಮಿಳುನಾಡು ಕ್ಯಾಬಿನೆಟ್ ನಿರ್ಧಾರಕ್ಕೆ ರಾಜ್ಯಪಾಲರು ಕೂಡ ಬದ್ಧರಾಗಿದ್ದಾರೆ ಮತ್ತು ಸಂವಿಧಾನದ ಸೆಕ್ಷನ್ 161 ರ ಅಡಿಯಲ್ಲಿ ಕ್ಷಮಾದಾನವನ್ನು ನೀಡಿರುತ್ತಾರೆ. ರಾಜ್ಯಪಾಲರು ಕ್ಷಮಾಧಾನ ಕಡತವನ್ನು ರಾಷ್ಟ್ರಪತಿ ಕಚೇರಿಗೆ ರವಾನಿಸಿದ್ದರೂ ಅದು ರಾಷ್ಟ್ರಪತಿಗಳ ಪ್ರತಿಕ್ರಿಯೆಗೆ ಕಾಯುವುದಿಲ್ಲ ಎಂದು ಕೋರ್ಟ್​ ಹೇಳಿತ್ತು. ಕ್ಷಮಾದಾನದ ಪ್ರಕರಣಗಳಲ್ಲಿ ರಾಷ್ಟ್ರಪತಿಗಳಿಗೆ ಮಾತ್ರ ವಿಶೇಷ ಅಧಿಕಾರವಿರುತ್ತದೆ ಎಂಬ ಕೇಂದ್ರದ ವಾದದ ವಿರುದ್ಧ ನ್ಯಾಯಾಲಯ ವಾಗ್ದಾಳಿ ನಡೆಸಿತು. ಹಾಗಾದರೆ, ಈ ಎಲ್ಲಾ ವರ್ಷಗಳಲ್ಲಿ ರಾಜ್ಯಪಾಲರು ನೀಡಿದ ಕ್ಷಮಾಧಾನವು ಅಸಂವಿಧಾನಿಕ ಎಂದರ್ಥವೇ ಎಂದು ನ್ಯಾಯಾಲಯ ಹೇಳಿ, ಕೇಂದ್ರ ಕ್ರಮವನ್ನು ಟೀಕಿಸಿತ್ತು.

    1991, ಮೇ 21ರಂದು ತಮಿಳುನಾಡಿನ ಶ್ರೀಪೆರಂಬುದುರ್​ನಲ್ಲಿ ಮಹಿಳೆಯೊಬ್ಬಳು ನಡೆಸಿದ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ ರಾಜೀವ್​ ಗಾಂಧಿ ಹತರಾದರು. ಅಲ್ಲದೆ, ಇತರೆ 21 ಮಂದಿಯು ಕೂಡ ಪ್ರಾಣ ಕಳೆದುಕೊಂಡರು. ಈ ದಾಳಿಯ ಹಿಂದೆ ಎಲ್​ಟಿಟಿಇ ಸಂಘಟನೆ ಕೈವಾಡ ಇತ್ತು. ಈ ಪ್ರಕರಣದಲ್ಲಿ 7 ಮಂದಿಯನ್ನು ಬಂಧಿಸಿ, ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

    31 ವರ್ಷ ಜೈಲು ಶಿಕ್ಷೆ ಬಳಿಕ ರಾಜೀವ್​ ಗಾಂಧಿ ಹತ್ಯೆ ಆರೋಪಿ ಪೆರಾರಿವಾಲನ್​ ಬಿಡುಗಡೆಗೊಳಿಸಿದ ಸುಪ್ರೀಂಕೊರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts