More

    ರಜನಿಸಂಗೆ 45 ವರ್ಷ … ಸಂಭ್ರಮಾಚರಣೆ ಶುರು …

    ರಜನಿಕಾಂತ್ ಅಭಿನಯದ ಮೊದಲ ತಮಿಳು ಚಿತ್ರ ‘ಅಪೂರ್ವ ರಾಗಂಗಳ್​’ ಬಿಡುಗಡೆಯಾಗಿ ಇದೇ ತಿಂಗಳ 18ಕ್ಕೆ 45 ವರ್ಷಗಳಾಗಿವೆ. 1975ರ ಆಗಸ್ಟ್​​ 18ರಂದು ಈ ಚಿತ್ರ ಬಿಡುಗಡೆಯಾಗಿತ್ತು. ಕೆ. ಬಾಲಚಂದರ್​ ಅಭಿನಯದ ಈ ಚಿತ್ರ ಸೂಪರ್​ ಹಿಟ್​ ಆಗಿದ್ದಷ್ಟೇ ಅಲ್ಲ, ಚಿತ್ರರಂಗಕ್ಕೆ ರಜನಿಕಾಂತ್​ ಎಂಬ ಪ್ರತಿಭಾವಂತ ನಟನ ಪರಿಚಯ ಮಾಡಿಸಿತು. ಆ ನಂತರ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ.

    ಇದನ್ನೂ ಓದಿ: ಚಿತ್ರರಂಗದಲ್ಲಿ ದರ್ಶನ್​ 23 ವರ್ಷ … ಶುಭ ಕೋರಿದ ಸೆಲೆಬ್ರಿಟಿಗಳು

    ಆ ಚಿತ್ರ 45 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಶುರು ಮಾಡಿದ್ದಾರೆ. ಆಗಸ್ಟ್​ 18ಕ್ಕೆ ಇನ್ನೂ ಎಂಟು ದಿನಗಳಿರುವಾಗಲೇ, ಒಂದು ಕಾಮನ್​ ಡಿಸ್​ಪ್ಲೇ ಪಿಕ್ಚರ್​ ಬಿಡುಗಡೆ (ಸಿಡಿಪಿ) ಮಾಡುವ ಮೂಲಕ ಅವರು ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಈ ಸಿಡಿಪಿ ಟ್ವಿಟರ್​ ಮತ್ತು ಇತರೆ ಸೋಷಿಯಲ್​ ಮೀಡಿಯಾ ವೇದಿಕೆಗಳಲ್ಲಿ ನಂಬರ್​ ಒನ್​ ಸ್ಥಾನದಲ್ಲಿ ಟ್ರೆಂಡಿಂಗ್​ ಆಗುತ್ತಿದೆ.

    ವಿಶೇಷವೆಂದರೆ, ಈ ಸಿಡಿಪಿಯನ್ನು ದಕ್ಷಿಣ ಭಾರತೀಯ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಏಕಕಾಲಕ್ಕೆ ಬಿಡುಗಡೆ ಮಾಡಿದ್ದಾರೆ. ಮೋಹನ್​ ಲಾಲ್​, ಮಮ್ಮೂಟ್ಟಿ, ಶಿವಕಾರ್ತಿಕೇಯನ್​, ದುಲ್ಕನ್​ ಸಲ್ಮಾನ್​, ಅನಿರುದ್ಧ್​ ರವಿಚಂದರ್​, ವಿಘ್ನೇಶ್​ ಶಿವನ್​, ಲೋಕೇಶ್​ ಕನಕರಾಜ್​, ಸಂತೋಷ್​ ಶಿವನ್​, ಸುನೀಲ್​ ಶೆಟ್ಟಿ, ಪೀಟರ್​ ಹೇನ್​, ಪ. ರಂಜಿತ್​ ಮುಂತಾದವರು ತಮ್ಮ ಸೋಷಿಯಲ್​ ಮೀಡಿಯಾ ಅಕೌಂಟ್​ಗಳ ಮೂಲಕ ಹಂಚಿಕೊಂಡಿದ್ದಾರೆ.

    ಈ ಸಿಡಿಪಿಯಲ್ಲಿ ರಜನಿಕಾಂತ್​ ಅಭಿನಯದ ಹಲವು ಮಹತ್ವದ ಮತ್ತು ಜನಪ್ರಿಯ ಪಾತ್ರಗಳನ್ನು ನೋಡಬಹುದು. ‘ಎಂದಿರನ್​’, ‘ಕಾಲ’, ‘ಭಾಷಾ’, ತಿಲ್ಲುಮುಲ್ಲು’, ‘ಶಿವಾಜಿ – ದಿ ಬಾಸ್​’, ‘ಬಿಲ್ಲಾ’ ಮುಂತಾದ ಹಲವು ಚಿತ್ರಗಳಲ್ಲಿನ ಅವರ ಫೋಟೋಗಳನ್ನು ಬಳಸಿಕೊಂಡು ಈ ಸಿಡಿಪಿಯನ್ನು ವಿಶೇಷವಾಗಿ ರಚಿಸಲಾಗಿದೆ.

    ಇದನ್ನೂ ಓದಿ: ಸುದೀಪ್​ಗೆ ಅಭಿನಂದನೆ ಸಲ್ಲಿಸಿದ ಸಚಿವ ಸುಧಾಕರ್​

    ಇನ್ನು ಲಾಕ್​ಡೌನ್​ನಿಂದಾಗಿ, ರಜನಿಕಾಂತ್​ ಅಭಿನಯದ ‘ಅಣ್ಣಾತ್ತೆ’ ಚಿತ್ರದ ಚಿತ್ರೀಕರಣ ನಿಲ್ಲಿಸಲಾಗಿದ್ದು, ಈ ವರ್ಷದ ಕೊನೆಗೆ ಪುನಃ ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಈ ವಿಚಾರದಲ್ಲಿ ಅಕ್ಷಯ್​ ಕುಮಾರ್ ಅವರನ್ನೇ ಫಾಲೋ ಮಾಡ್ತಿದ್ದಾರೆ ಆಮೀರ್​ ಖಾನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts