More

    ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಂವಹನ ಕೌಶಲ ಮುಖ್ಯ; ವಿಜಯಲಕ್ಷ್ಮೀ ತೀರ್ಲಾಪುರ

    ರಾಣೆಬೆನ್ನೂರ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಂವಹನ ಕೌಶಲ ಮತ್ತು ಕಂಪ್ಯೂಟರ್ ಜ್ಞಾನವನ್ನು ಬೆಳೆಸಿಕೊಂಡರೆ ಉದ್ಯೋಗಗಳನ್ನು ಪಡೆಯಬಹುದು ಎಂದು ಹಾವೇರಿ ವಿಶ್ವ ವಿದ್ಯಾಲಯದ ಕುಲಸಚಿವೆ (ಮೌಲ್ಯಮಾಪನ) ವಿಜಯಲಕ್ಷ್ಮೀ ತೀರ್ಲಾಪುರ ಹೇಳಿದರು.
    ನಗರದ ಕೆ.ಎಲ್.ಇ. ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ 2023-24ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಬಿ.ಎ, ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಇಂದಿನ ಜಗತ್ತಿನಲ್ಲಿ ಅವಕಾಶಗಳು ಕಡಿಮೆ, ಸವಾಲುಗಳು ಹೆಚ್ಚು. ಆದ್ದರಿಂದ ದೊರೆತಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
    ಕೆ.ಎಲ್.ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಚೇರ್ಮನ್ ವಿ.ಪಿ. ಲಿಂಗನಗೌಡ್ರ ಅಧ್ಯಕ್ಷತೆ ವಹಿಸಿದ್ದರು.
    ಸದಸ್ಯ ಬಿ.ಎಸ್. ಪಟ್ಟಣಶೆಟ್ಟಿ, ಪ್ರಾಚಾರ್ಯ ನಾರಾಯಣ ನಾಯಕ, ಸಾಯಿಲತಾ ಮಡಿವಾಳರ, ಡಾ. ಕವಿತಾ ಗಡ್ಡದಗೂಳಿ, ವೀರೇಶ ಕುರಹಟ್ಟಿ, ಭಾಗ್ಯವತಿ ದೇಶಪಾಂಡೆ, ಭೂಮಿಕಾ ಯಡಿಯಾಪುರ, ಶ್ರೇಯಾ ಬಣ್ಣದ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts