More

    ಶಿಲ್ಪಾ ಶೆಟ್ಟಿ ಗಂಡ ಮುಖಕ್ಕೆ ಮಾಸ್ಕ್​ ಹಾಕಿಕೊಂಡೇ ಇರೋದು ಯಾಕೆ ಗೊತ್ತಾ?

    ಮುಂಬೈ: ದೇಶಾದ್ಯಂತ ಈಗ ಕೋವಿಡ್​ ಕಡಿಮೆಯಾಗಿದೆ. ಜನ ಮಾಸ್ಕ್​ ಹಾಕುವುದು ಸಹ ಕಡಿಮೆಯಾಗಿದೆ. ಆದರೆ, ಶಿಲ್ಪಾ ಶೆಟ್ಟಿ ಗಂಡ ಮಾತ್ರ ಹೊರಗೆ ಎಲ್ಲೇ ಹೋಗುವುದಿದ್ದರೂ ಮಾಸ್ಕ್​ ಇಲ್ಲದೆ ಹೋಗುವುದಿಲ್ಲ. ಅದೂ ಮುಖ ಪೂರ್ತಿ ಕವರ್​ ಮಾಡುವಂತಹ ತರಹೇವಾರಿ ಮಾಸ್ಕ್​​ಗಳನ್ನು ಹಾಕಿಕೊಂಡು ಅವರು ಇತ್ತೀಚೆಗೆ ಓಡಾಡುತ್ತಿದ್ದಾರೆ. ಆಫೀಸ್​ ಇರಲಿ, ಪಾರ್ಟಿ ಇರಲಿ ಅಥವಾ ಯಾವುದೇ ಕಾರ್ಯಕ್ರಮವಾದರೂ ರಾಜ್​ ಕುಂದ್ರಾ ಮಾತ್ರ ಒಂದೇ ಒಂದು ದಿನಕ್ಕೂ ಮುಖಕ್ಕೆ ಮಾಸ್ಕ್​ ಇಲ್ಲದೆ ಹೊರಕ್ಕೆ ಬರುತ್ತಿಲ್ಲ.

    ಇದನ್ನೂ ಓದಿ: ನ.06ಕ್ಕೆ ಪ್ರಾರಂಭವಾಗಲಿದೆ ಧನಂಜಯ್​ ಅಭಿನಯದ ಹೊಸ ಚಿತ್ರ ‘ಉತ್ತರಕಾಂಡ’

    ಇದಕ್ಕೆ ಕಾರಣವೇನಿರಬಹುದು, ಇಷ್ಟಕ್ಕೂ ಅವರು ಯಾಕೆ ಹೊರಗೆಲ್ಲೂ ತಮ್ಮ ಮುಖವನ್ನು ತೋರಿಸುತ್ತಿಲ್ಲವೆಂದು ಹಲವರು ತಲೆ ಕೆಡಿಸಿಕೊಂಡಿದ್ದರು. ಈ ಕುರಿತಾಗಿ ಸ್ವತಃ ರಾಜ್​ ಕುಂದ್ರಾ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ಟ್ವೀಟ್​ಗಳ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ರಾಜ್​ ಕುಂದ್ರಾ ತಮ್ಮ ಮುಖ ಯಾಕೆ ತೋರಿಸುತ್ತಿಲ್ಲ ಗೊತ್ತಾ? ಪಾಪರಾಜಿಗಳಿಗೆ ಹೆದರಿ …

    ಎಲ್ಲರಿಗೂ ಗೊತ್ತಿರುವಂತೆ, ಬಾಲಿವುಡ್​ನಲ್ಲಿ ಪಾಪರಾಜಿಗಳ ಕಾಟ ಜಾಸ್ತಿ ಇದೆ. ಮುಂಬೈನಲ್ಲಿ ಸೆಲೆಬ್ರಿಟಿಗಳು ಎಲ್ಲೇ ಓಡಾಡಲಿ, ಅವರ ಹಿಂದೆ ಓಡಾಡುವ ಪಾಪರಾಜಿಗಳು ಫೋಟೋ ತೆಗೆದು, ಸುದ್ದಿ ಮಾಡುತ್ತಿದ್ದಾರೆ. ಇದರಿಂದ ಕೆಲವು ಸೆಲೆಬ್ರಿಟಿಗಳು ಸಾಕಷ್ಟು ಪ್ರಚಾರ ಪಡೆದುಕೊಂಡರೆ, ಇನ್ನೂ ಕೆಲವರು ಸಾಕಷ್ಟು ಮುಜುಗರ ಪಟ್ಟಿದ್ದಾರೆ. ರಾಜ್​ ಕುಂದ್ರಾ ಹೆಸರು ಬ್ಲೂಫಿಲಂ ಕೇಸ್​ನಲ್ಲಿ ಕೇಳಿಬಂದಿತ್ತು. ಈ ವಿಷಯವಾಗಿ ಅವರು ಒಂದಿಷ್ಟು ಜೈಲುವಾಸ ಸಹ ಅನುಭವಿಸಿ ಹೊರಬಂದಿದ್ದಾರೆ. ರಾಜ್​ ಹೋದಲ್ಲಿ ಬಂದಲ್ಲಿ ಪಾಪರಾಜಿಗಳು ಮುತ್ತಿಕೊಳ್ಳುವ ಕಾರಣ, ಅವರು ಮಾಸ್ಕ್​ ಹಾಕುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಯಾರೂ ತನ್ನನ್ನು ಗುರುತು ಹಿಡಿಯಬಾರದು ಎಂಬ ಕಾರಣಕ್ಕೆ ತರಹೇವಾರಿ ಮಾಸ್ಕ್​ಗಳನ್ನು ಧರಿಸುವುದಕ್ಕೆ ಮುಂದಾಗಿದ್ದಾರಂತೆ.

    ಇದನ್ನೂ ಓದಿ: ಸದ್ಯದಲ್ಲೇ 300 ಕೋಟಿ ರೂ. ಕ್ಲಬ್​ಗೆ ರಿಷಭ್​ ಶೆಟ್ಟಿ ‘ಕಾಂತಾರ’

    ಈ ಕುರಿತು ಟ್ವಿಟರ್​ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ನಾನು ಮಾಸ್ಕ್​ ಧರಿಸುವುದು ಸ್ನೇಹಿತರಿಂದ ದೂರ ಇರುವುದಕ್ಕಲ್ಲ, ಪಾಪರಾಜಿಗಳಿಂದ ದೂರ ಇರುವುದಕ್ಕೆ. ಮಾಧ್ಯಮದವರು ಸಾಕಷ್ಟು ಕಿರುಕುಳ ನೀಡುವುದರಿಂದ ಮಾಸ್ಕ್​ ಧರಿಸಬೇಕಾಗಿದೆ. ನನಗೆ ಅವರ ನಡೆಯಿಂದ ಸಾಕಷ್ಟು ನೋವಾಗಿದೆ. ಮೀಡಿಯಾದವರು ನ್ಯಾಯಾಲಯಕ್ಕೂ ಮೀಗಿಲಲ್ಲ’ ಎಂದು ಹೇಳಿಕೊಂಡಿದ್ದಾರೆ.

    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೆ ಸಾಥ್ ಕೊಟ್ಟ ರಮ್ಯಾ … ಹೇಗೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts