More

    ರಾಯರ ಆರಾಧನಾ ಮಹೋತ್ಸವ ಸಂಪನ್ನ

    ಖಾನಾಪುರ: ತಾಲೂಕಿನ ಗಾಡಿಕೊಪ್ಪ ಗ್ರಾಮದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಪ್ರಾರಂಭಗೊಂಡಿದ್ದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಸಂಪನ್ನಗೊಂಡಿತು.

    ಅರ್ಚಕ ಅಚ್ಯುತಾಚಾರ್ಯ ಪಾಟೀಲ ನೇತೃತ್ವದಲ್ಲಿ ರಾಯರ ವೃಂದಾವನಕ್ಕೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಅಷ್ಟೋತ್ತರ, ವಿವಿಧ ಪುಷ್ಪಗಳಿಂದ ಅಲಂಕಾರ, ಸಂಗೀತ ಸೇವೆ, ಮಹಾ ನೈವೇದ್ಯ ಕಾರ್ಯಕ್ರಮಗಳು ಜರುಗಿದವು. ಮಂಗಳವಾರ ಪೂರ್ವಾರಾಧನೆಯ ಅಂಗವಾಗಿ ರಾಮಭಕ್ತ ಆಂಜನೇಯನ ಪೂಜೆ ನೆರವೇರಿಸಲಾಯಿತು.

    ಬುಧವಾರ ಮಧ್ಯಾರಾಧನೆಯ ಅಂಗವಾಗಿ ರಾಯರ ಆರಾಧ್ಯದೈವ ಶ್ರೀರಾಮ ದೇವರ ಪೂಜೆ ನಡೆಯಿತು. ಗುರುವಾರ ಉತ್ತಾರಾಧನೆಯ ಅಂಗವಾಗಿ ರಾಯರಿಗೆ ಸಂಗೀತ ಸೇವೆ ಜರುಗಿತು. ಆರ್.ಕೆ. ಪಾಟೀಲ, ಕೃಷ್ಣಾಜಿ ಪಾಟೀಲ, ಡಾ. ಸುರೇಶ ಕುಲಕರ್ಣಿ, ಉದಯ ದೇಶಪಾಂಡೆ, ಪ್ರಶಾಂತ ಕುಲಕರ್ಣಿ, ಅ.ರಾ. ಕುಲಕರ್ಣಿ, ಪ್ರಹ್ಲಾದ ದೇಶಪಾಂಡೆ, ಸುಂದರ ಕುಲಕರ್ಣಿ ಸೇರಿ ಹಲವು ಗ್ರಾಮಗಳ ರಾಘವೇಂದ್ರ ರಾಯರ ಭಕ್ತರು ಭಾಗವಹಿಸಿದ್ದರು.

    ರಾಮದುರ್ಗ ವರದಿ: ಪಟ್ಟಣದ ಪಡಕೋಟಗಲ್ಲಿಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕರೊನಾ ಮಹಾಮಾರಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸರಳವಾಗಿ ಧಾರ್ಮಿಕ ವಿಧಿ-ವಿಧಾನ ನೆರವೇರಿಸುವ ಮೂಲಕ ಶ್ರೀಗಳ ಆರಾಧನಾ ಮಹೋತ್ಸವ ನೆರವೇರಿಸಲಾಯಿತು. ನಂತರ ರಥೋತ್ಸವ ಜರುಗಿತು. ಮೂರು ದಿನಗಳಿಂದ ವಿವಿಧ ಪೂಜಾ ವಿಧಿ ವಿಧಾನಗಳನ್ನು ಶ್ರಿಮಠದಲ್ಲಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಪ್ರಸಾದ ಕುಲಕರ್ಣಿ, ಜಿ.ಬಿ. ಮೋಡಕ, ಪವನ ದೇಶಪಾಂಡೆ, ಪ್ರಸಾದ ಯಡಿಯೂರಕರ, ಪ್ರಸನ್ನ ಉಡುಪಿ, ದರ್ಶನ ಚಿಟ್ನೀಸ್, ಶ್ರೀಹರಿ ಜೋಶಿ, ವಿನಯ ಗೋಡಖಿಂಡಿ ಇದ್ದರು.

    ತಲ್ಲೂರ: ತಲ್ಲೂರ ಗ್ರಾಮದಲ್ಲಿ ರಾಘವೇಂದ್ರ ಶ್ರೀಗಳ ಆರಾಧನಾ ಮಹೋತ್ಸವ ಜರುಗಿತು. ಉಮಾ ಅಣ್ಣಿಗೇರಿ, ಮಂಜುಳಾ ಮಠಪತಿ, ಗಂಗವ್ವ ಕಾಜಗಾರ, ರಾಜೇಶ್ವರಿ ಅಣ್ಣಿಗೇರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts