More

    VIDEO| ವಿದೇಶಕ್ಕೆ ಹಾರಲು ಸಜ್ಜಾದ ವಾರಣಾಸಿಯ ಮತ್ತೊಂದು ಬೀದಿ ನಾಯಿ; ವೀಸಾ, ಪಾಸ್​​​ಪೋರ್ಟ್​ ಬಂದಾಯ್ತು

    ವಾರಣಾಸಿ: ಉತ್ತರಪ್ರದೇಶದಲ್ಲಿ ಬೆಳೆಯುತ್ತಿರುವ ಬಿದಿನಾಯಿಗಳಿಗೆ ಶುಕ್ರದೆಸೆ ಪ್ರಾರಂಭವಾಗಿದ್ದು, ಈ ವರ್ಷ ಜೂನ್​ ತಿಂಗಳಲ್ಲಿ ಇಟಲಿ ಮೂಲದ ಮಹಿಳೆಯೊಬ್ಬರು ಬೀದಿ ನಾಯಿಯೊಂದನ್ನು ದತ್ತು ಪಡೆದು ಅದಕ್ಕೆ ಪಾಸ್​ಪೋರ್ಟ್​ ಮಾಡಿಸಿ ಇಟಲಿಗೆ ಕರೆದೊಯ್ದಿದ್ದರು.

    ಇದೀಗ ವಾರಣಾಸಿಯ ಬೀದಿಗಳಲ್ಲಿ ಬೆಳೆದ ಜಯಾ ಎಂಬ ಹೆಸರಿನ ನಾಯಿಯೊಂದನ್ನು ನೆದರ್ಲೆಂಡ್​ ಮೂಲದ ಮಹಿಳೆಯೊಬ್ಬರು ದತ್ತು ಪಡೆದು ಅದಕ್ಕೆ ವೀಸಾ, ಪಾಸ್ ಪೋರ್ಟ್ ಮಾಡಿಸಿ ತಮ್ಮೊಂದಿಗೆ ಕರೆದೊಯ್ಯಲು ಸಿದ್ದತೆ ನಡೆಸುತ್ತಿದ್ದಾರೆ.

    ಮನಸ್ಸು ಮಾಡಿದ್ದಾರೆ

    ನೆದರ್ಲೆಂಡ್​ನ ಆ್ಯಮ್​ಸ್ಟರ್​ಡ್ಯಾಂನ ಮೂಲದ ಮಹಿಳೆ ಮೆರಲ್ ಬೊಂಟೆನ್ಬೆಲ್ ಎಂಬುವರು ನಾಯಿಯನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದಾರೆ. ಭಾರತ ಪ್ರವಾಸ ವೇಳೆ ವಾರಣಾಸಿಗೆ ಭೇಟಿ ನೀಡಿದ್ದ ಅವರು ಜಯಾ ಎಂದು ಸ್ಥಳೀಯರಿಂದ ಕರೆಯಲ್ಪಡುತ್ತಿದ್ದ ಬೀದಿನಾಯಿಯೊಂದನ್ನು ನಿತ್ಯವೂ ಮಾತನಾಡಿಸುತ್ತ ಆಹಾರವನ್ನು ಕೊಡುತ್ತಿದ್ದರು.

    ದಿನ ಕಳೆದಂತೆ ಮೆರಲ್ ಬೊಂಟೆನ್ಬೆಲ್ ಹಾಗೂ ಜಯಾ ನಡುವೆ ಆತ್ಮೀಯತೆ ಬೆಳೆದಿದ್ದು, ಮಾನವ ಸಹಜವಾದ ಪ್ರೀತಿಯನ್ನು ಕಂಡ ಆ ಬೀದಿನಾಯಿಯೂ ಸಹ ಇವರು ಬರುತ್ತಲೇ ಪ್ರೀತಿ ತೋರಿಸುತ್ತಿತ್ತು. ಕಡೆಗೆ ಇದನ್ನು ಬಿಟ್ಟು ಹೋಗಲು ಮನಸ್ಸಾಗದ ಮೆರೆಲ್, ಇದನ್ನು ತಮ್ಮೊಂದಿಗೆ ಕೊಂಡೊಯ್ಯುವ ಮನಸ್ಸು ಮಾಡಿದ್ದಾರೆ.

    ಇದನ್ನೂ ಓದಿ: ಜಮ್ಮು-ಕಾಶ್ಮೀರ; ಭದ್ರತಾ ಪಡೆಗಳ ಗುಂಡಿಗೆ ಐವರು ಉಗ್ರರು ಬಲಿ

    ಇದಕ್ಕೆ ಸಂಬಂಧಿಸಿದಂತೆ ಮೆರಲ್ ಬೊಂಟೆನ್ಬೆಲ್ ಸ್ಥಳೀಯಾಡಳಿತದಿಂದ ತಾವೇ ವಾರಸುದಾರಳಾಗುವುದಾಗಿ ಪ್ರಮಾಣಪತ್ರ ಸಲ್ಲಿಸಿ ಅದಕ್ಕೆ ಅನುಮತಿಯನ್ನು ಪಡೆದಿದ್ದಾರೆ. ಆನಂತರ, ತನ್ನ ದೇಶಕ್ಕೆ ಹಿಂದಿರುಗುವಾಗ ತಾನು ದತ್ತು ಪಡೆದ ನಾಯಿಯನ್ನು ತರುತ್ತಿರುವುದಾಗಿ ತಿಳಿಸಿ, ಅದಕ್ಕೆ ಬೇಕಾದ ದಾಖಲೆಗಳನ್ನು ಸಲ್ಲಿಸಿ, ಅಲ್ಲಿನ ಸರ್ಕಾರದಿಂದಲೂ ಜಯಾಳಿಗೆ ವೀಸಾ ತರಿಸಿಕೊಂಡಿದ್ದಾರೆ. ಈ ಎಲ್ಲಾ ಕೆಲಸಗಳನ್ನು ಮಾಡಿಸಲು ಅವರು ಭಾರತದಲ್ಲಿ ಉಳಿಯುವ ತಮ್ಮ ಸಮಯವನ್ನು ಆರು ತಿಂಗಳವರೆಗೆ ವಿಸ್ತರಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

    ಜಯಾ ಮೂಲಕ ನನ್ನ ಆಸೆ ಈಡೇರಿದೆ

    ಈ ಕುರಿತು ಪ್ರತಿಕ್ರಿಯಿಸಿರುವ ಮೆರಲ್ ಬೊಂಟೆನ್ಬೆಲ್, ನಗರವನ್ನು ಅನ್ವೇಷಿಸಲೆಂದು ನೆದರ್ಲೆಂಡ್​ನಿಂದ ವಾರಣಾಸಿಗೆ ಬಂದೆ. ಒಂದು ದಿನ ನಾನು ವಾರಣಾಸಿಯನ್ನು ಸುತ್ತಾಡುತ್ತಿರುವ ವೇಳೆ ಜಯವನ್ನು ನೋಡಿದೆ ಆಕೆ ನನ್ನ ಬಳಿ ಬಂದಳು ನಾನು ಪ್ರತಿನಿತ್ಯ ಆಹಾರವನ್ನು ಕೊಡಲು ಶುರು ಮಾಡಿದೆ. ದಿನಕಳೆದಂತೆ ಇಬ್ಬರ ನಡುವೆ ಆತ್ಮೀಯತೆ ಬೆಳೆಯಿತು. ಆ ನಂತರ ಆಕೆ ನಮ್ಮನ್ನು ಹಿಂಬಾಲಿಸಲು ಶುರು ಮಾಡಿದ್ದಳು.

    ಒಂದು ದಿನ ಆಕೆಯ ಮೇಲೆ ಬೀದಿ ನಾಯಿಯೊಂದು ದಾಳಿ ಮಾಡಿತ್ತು. ಆ ವೇಳೆ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್​ ಒಬ್ಬರು ಆಕೆಯನ್ನು ರಕ್ಷಿಸಿದ್ದರು. ಮೊದಲಿಗೆ ನಾನು ಆಕೆಯನ್ನು ದತ್ತು ತೆಗೆದುಕೊಳ್ಳುವ ಚಿಂತನೆ ನಡೆಸಿರಲಿಲ್ಲ. ಆ ನಂತರ ಆಕೆಯನ್ನು ದತ್ತು ಪಡೆಯಲು ನಿರ್ಧರಿಸಿದೆ. ಜಯಾಗೆ ಪಾಸ್‌ಪೋರ್ಟ್ ಮತ್ತು ವೀಸಾ ವ್ಯವಸ್ಥೆ ಮಾಡಲು ಭಾರತದಲ್ಲಿ ಆರು ತಿಂಗಳುಗಳ ಕಾಲ ಉಳಿಯಬೇಕಾಯಿತು.

    ಜಯಾಳನ್ನು ನನ್ನ ಜತೆ ಕರೆದುಕೊಂಡು ಹೋಗಲು ತುಂಬಾ ಸಂತಸವಾಗುತ್ತಿದೆ. ಇದು ದೀರ್ಘಾವಧಿಯ ಪ್ರಕ್ರಿಯೆಯಾಗಿತ್ತು. ಅವಳನ್ನು ನನ್ನ ಜತೆ ಕರೆದೊಯ್ಯಲು ನಾನು ಆರು ತಿಂಗಳ ಕಾಲ ಕಾಯಬೇಕಾಯಿತು. ನಾನು ನಾಯಿಯನ್ನು ಸಾಕಾಲು ಬಯಸಿದ್ದ ಜಯಾ ಮೂಲಕ ನನ್ನ ಆಸೆ ಈಡೇರಿದೆ ಎಂದು ಮೆರಲ್ ಬೊಂಟೆನ್ಬೆಲ್ ಸಂತಸ ವ್ಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts