More

    ಮಲೆನಾಡಿನಲ್ಲಿ ಈ ಬಾರಿಯೂ ಮುಂಗಾರು ವೈಫಲ್ಯ ಸಾಧ್ಯತೆ

    ಶೃಂಗೇರಿ: 56 ನದಿಗಳ ಉಗಮ ಸ್ಥಾನವಾಗಿರುವ ಪಶ್ಚಿಮಘಟ್ಟ ಪ್ರದೇಶದಲ್ಲಿ ಒಳ್ಳೆಯ ಮಳೆ ಆದಲ್ಲಿ ಮಾತ್ರ ದೇಶ ಸಮೃದ್ಧಿಯಾಗಲಿದೆ ಎಂದು ಪರಿಸರವಾದಿ ಕಲ್ಕುಳಿ ವಿಠ್ಠಲ ಹೆಗ್ಡೆ ತಿಳಿಸಿದರು.

    ಈ ವರ್ಷ ಜನವರಿಯಿಂದ ಈವರೆಗೆ 1,153 ಮಿಮೀ ಮಳೆ ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 993.8 ಹಾಗೂ ಅದಕ್ಕೂ ಹಿಂದಿನ ವರ್ಷ 1,714 ಮಿಮೀ ಮಳೆಯಾಗಿತ್ತು. 1895ರಿಂದ 2020ರವರೆಗಿನ ಮಳೆ ಪ್ರಮಾಣ ಗಣನೆಗೆ ತೆಗೆದುಕೊಂಡಾಗ ಶೃಂಗೇರಿಯಲ್ಲಿ ಸರಾಸರಿ 3,750 ಮಿಮೀ ಮಳೆ ಆಗುತ್ತಿದೆ. ವಾರ್ಷಿಕ 3,000 ಮಿಮೀ ಗಿಂತ ಕಡಿಮೆ ಮಳೆಯಾದರೆ ಬರಗಾಲದ ಮುನ್ಸೂಚನೆ ಎಂದು ಮಲೆನಾಡಿನ ವರ್ತಮಾನದ ಮಳೆಗಾಲದ ಸ್ಥಿತಿಗತಿ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಮಲೆನಾಡಿನ ಬೆಳೆ ಮಟ್ಟಿಗೆ ಈಗ ಬರುತ್ತಿರುವ ಮಳೆ ಯಥೋಚಿತವಾಗಿದೆ. ಆದರೆ ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಜಾಗತಿಕ ಹಿತಾಸಕ್ತಿಗೆ ಇದು ಮಾರಕ. ಆರಿದ್ರಾ ಮಳೆ ಚೆನ್ನಾಗಿ ಬಂದರೆ ಮಾತ್ರ ಮುಂದಿನ 6 ನಕ್ಷತ್ರದ ಮಳೆಗಳು ಚೆನ್ನಾಗಿ ಆಗುತ್ತವೆ ಎಂಬುದು ಇಲ್ಲಿಯ ನಂಬಿಕೆ. ಆದರೆ ಈ ವರ್ಷ ಆರಿದ್ರಾ ಮಳೆ ವಿಫಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಮಲೆನಾಡಲ್ಲಿ ವರ್ಷದಿಂದ ವರ್ಷಕ್ಕೆ ಸರಾಸರಿ ಮಳೆ ಪ್ರಮಾಣ ಕಡಿಮೆ ಆಗುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ. ಇಲ್ಲಿ ವಾರ್ಷಿಕ ಸರಾಸರಿ 180 ಮಳೆ ದಿನಗಳು ಕಂಡಲ್ಲಿ ಮಾತ್ರ ಸಮೃದ್ಧಿ ಉಂಟಾಗುವುದು. ಇದು 150ಕ್ಕಿಂತ ಕಡಿಮೆ ಆಗಲೇಬಾರದು. ದುರದೃಷ್ಟವಶಾತ್ ಈಗ ಕೇವಲ 89 ದಿನ ಮಳೆಯಾಗಿದೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts