More

    ವಿಪತ್ತು ನಿರ್ವಹಣೆಗೆ ಕಾಸರಗೋಡು ಸಿದ್ಧ, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಮಾಹಿತಿ

    ಕಾಸರಗೋಡು: ಜಿಲ್ಲೆಯಲ್ಲಿ ಆ.4ರಂದು ರೆಡ್ ಹಾಗೂ 5ರಂದು ಆರೆಂಜ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಮಳೆಯಿಂದ ಉಂಟಾಗಬಹುದಾದ ವಿಪತ್ತು ನಿರ್ವಹಣೆಗೆ ಜಿಲ್ಲೆ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಬುಧವಾರ ತಿಳಿಸಿದ್ದಾರೆ.

    ಮುಂಗಾರು ಬಿಕ್ಕಟ್ಟಿನ ಕುರಿತು ಜಿಲ್ಲೆಯ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಆನ್‌ಲೈನ್ ಸಭೆಯಲ್ಲಿ ಈ ಮಾಹಿತಿ ನೀಡಿದ ಅವರು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಮತ್ತು ಇತರ ಇಲಾಖೆಗಳು ಬಿಕ್ಕಟ್ಟು ಮತ್ತು ವಿಪತ್ತು ಎದುರಿಸಲು ಸಿದ್ಧವಾಗಿವೆ. ಎಚ್ಚರಿಕೆ ಉಲ್ಲಂಘಿಸಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

    ಜಿಲ್ಲಾ ತುರ್ತು ಚಿಕಿತ್ಸಾ ಕೇಂದ್ರ ಮತ್ತು ತಾಲೂಕು ತುರ್ತು ಚಿಕಿತ್ಸಾ ಕೇಂದ್ರಗಳು 24 ಗಂಟೆಯೂ ಕಾರ್ಯನಿರ್ವಹಿಸಲಿವೆ. ಪುಲ್ಲೂರ್ ಪೆರಿಯ ಮತ್ತು ಮಧೂರು ಪಂಚಾಯಿತಿಯಲ್ಲಿರುವ ಸೈಕ್ಲೋನ್ ಶೆಡ್‌ಗಳನ್ನು ಪುನರ್ವಸತಿ ಕೇಂದ್ರವಾಗಿ ಬಳಸಿಕೊಳ್ಳಲಾಗುವುದು ಎಂದು ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

    ಅಪರ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಎಡಿಎಂ ಎ.ಕೆ.ರಮೇಂದ್ರನ್, ಹೆಚ್ಚುವರಿ ಎಸ್ಪಿ ಪಿ.ಕೆ.ರಾಜು, ಆರ್‌ಡಿಒ ಅತುಲ್ ಸ್ವಾಮಿನಾಥನ್, ಮೀನುಗಾರಿಕೆ ಉಪನಿರ್ದೇಶಕ ಪಿ.ವಿ.ಸತೀಶನ್ ಅಗ್ನಿಶಾಮಕ ದಳ ಜಿಲ್ಲಾ ಅಧಿಕಾರಿ ಸಿ.ಹರಿದಾಸನ್, ವಿವಿಧ ವಿಭಾಗಗಳ ಮುಖ್ಯಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts