More

    ಭಾರಿ ಮಳೆಗೆ ಕೊಚ್ಚಿಹೋದ ಮುಂಗಾರು ಬೆಳೆಗಳು

    ಅಜ್ಜಂಪುರ: ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಅಜ್ಜಂಪುರ ಸುತ್ತಮುತ್ತ ಮುಂಗಾರು ವಿವಿಧ ಬೆಳೆಗಳು ಕೊಚ್ಚಿಹೋಗಿವೆ. ಎಂ.ಹೊಸಹಳ್ಳಿ, ಅಬ್ಬಿನಹೊಳಲು, ಬಂಕನಕಟ್ಟೆ, ನಾರಾಣಾಪುರ ಇನ್ನಿತರ ಹಲವು ಗ್ರಾಮಗಳಲ್ಲಿ ಮುಂಗಾರು ಬೆಳೆಗಳಾದ ಈರುಳ್ಳಿ, ಶೇಂಗಾ, ಆಲೂಗಡ್ಡೆ ಬಿತ್ತನೆ ಮಾಡಲಾಗಿತ್ತು. ಶುಕ್ರವಾರ ರಾತ್ರಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಜಮೀನಿನ ಬದುಗಳು ನೆಲಸಮವಾಗಿ ಬೆಳೆಗಳು ನೀರು ಪಾಲಾದವು.

    ಮುಂಗಾರು ವಿಳಂಬವಾಗಿದ್ದರಿಂದ 20 ದಿನಗಳ ಹಿಂದೆ ಬಂದ ಮಳೆಗೆ ಬಿತ್ತನೆ ಬೀಜಗಳು ಮೊಳಕೆಯೊಡೆದಿದ್ದವು. ಆದರೆ ಮಳೆಗೆ ಮೊಳಕೆ ಸಸಿಗಳು ಕೊಚ್ಚಿಹೋಗಿವೆ. ಮಳೆ ವಿಳಂಬವಾಗಿದ್ದರಿಂದ ಬೆಳೆ ಇಲ್ಲದೆ ಆತಂಕದಲ್ಲಿದ್ದ ರೈತನಿಗೆ ಭಾರಿ ಮಳೆಯಿಂದ ಇದ್ದ ಅಲ್ಪಸ್ವಲ್ಪ ಬೆಳೆಯೂ ಹಾನಿಯಾಗಿದೆ.

    4 ವರ್ಷಗಳಿಂದ ಅತಿವೃಷ್ಟಿ-ಅನಾವೃಷ್ಟಿಯಿಂದ ಈ ಭಾಗದ ರೈತರು ಬೆಳೆಯಿಲ್ಲದೆ ಬಹಳಷ್ಟು ತೊಂದರೆ ಅನುಭವಿಸಿದ್ದಾರೆ. ಈಗಾಗಲೇ ಬಿತ್ತನೆ ಬೀಜ, ರಸಗೊಬ್ಬರ, ಬೇಸಾಯ ಸೇರಿದಂತೆ ಎಕರೆಗೆ 30 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಲಾಗಿದೆ. ಮಳೆಯಿಂದ ಬಿತ್ತನೆ ಮಾಡಿದ ಬೆಳೆಯೂ ಇಲ್ಲವಾಗಿದೆ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts