More

    ಮೇ 12ರಿಂದ ಹಂತಹಂತವಾಗಿ ಸಂಚರಿಸಲಿವೆ ಪ್ಯಾಸೆಂಜರ್​ ರೈಲುಗಳು

    ನವದೆಹಲಿ: ವಿವಿಧ ರಾಜ್ಯಗಳಿಗೆ ವಲಸೆ ಕಾರ್ಮಿಕರನ್ನು ಕಳುಹಿಸಲು ರೈಲ್ವೆ ಇಲಾಖೆ ಈಗಾಗಲೇ ಶ್ರಮಿಕ್​ ಎಕ್ಸ್​ಪ್ರೆಸ್​ ರೈಲುಗಳನ್ನು ಓಡಿಸುತ್ತಿದೆ. ಇದೀಗ ಸಾಮಾನ್ಯ ಪ್ರಯಾಣಿಕರಿಗಾಗಿಯೂ ಪ್ಯಾಸೆಂಜರ್​ ರೈಲುಗಳ ಸಂಚಾರವನ್ನು ಹಂತಹಂತವಾಗಿ ಏಪ್ರಿಲ್​ 12ರಿಂದ (ಮಂಗಳವಾರ) ಆರಂಭಿಸಲು ಮುಂದಾಗಿದೆ.

    ಇದಕ್ಕಾಗಿ ಸೋಮವಾರ (ಮೇ11) ಸಂಜೆ ನಾಲ್ಕು ಗಂಟೆಯಿಂದ ಬುಕಿಂಗ್​ ಆರಂಭಿಸಲಿದೆ. ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು.

    ಈ ನಡುವೆ, ಬೇರೆ ಬೇರೆ ರಾಜ್ಯಗಳಲ್ಲಿರುವ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಕರೆಯಿಸಿಕೊಳ್ಳಲು ಎಲ್ಲ ರಾಜ್ಯ ಸರ್ಕಾರಗಳು ಅನುವು ಮಾಡಿಕೊಡಬೇಕೆಂದು ರೈಲ್ವೆ ಇಲಾಖೆ ಮನವಿ ಮಾಡಿಕೊಂಡಿದೆ.

    ಇದನ್ನೂ ಓದಿ; ಹೊರ ರಾಜ್ಯ, ವಿದೇಶದಿಂದ ರಾಜ್ಯಕ್ಕೆ ಬರುವವರಿಗೆ ಕಡ್ಡಾಯ ಕ್ವಾರಂಟೈನ್​

    ಈವರೆಗೆ 350ಕ್ಕೂ ಅಧಿಕ ಶ್ರಮಿಕ್​ ಎಕ್ಸ್​ಪ್ರೆಸ್​ ರೈಲುಗಳು 3.5 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಆವರವರ ರಾಜ್ಯಗಳಿಗೆ ತಲುಪಿಸಿವೆ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್​ ಗೌಬಾ ಮಾಹಿತಿ ನೀಡಿದ್ದಾರೆ.

    ಮಾಲ್ಡೀವ್ಸ್​ ರಾಜಧಾನಿ ಮಾಲೆಗೆ ನೌಕಾಪಡೆಯ ಮತ್ತೊಂದು ಹಡಗು ಐಎನ್​ಎಸ್​ ಮಘರ್​ ತಲುಪಿದೆ. ಅಂತೆಯೇ ರಿಯಾದ್​ನಿಂದ 139 ಭಾರತೀಯರನ್ನು ಹೊತ್ತ ಏರ್​ ಇಂಡಿಯಾ ವಿಮಾನ ಪ್ರಯಾಣ ಆರಂಭಿಸಿದೆ.

    ಕಾರ್ಮಿಕರನ್ನು ಬೆಂಗಳೂರಿಗೆ ಕರೆತರಲು ಜಿಲ್ಲೆಗಳಿಂದ ಹೊರಡುತ್ತಿವೆ ವಿಶೇಷ ಬಸ್​ಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts