More

  ರೈಲು ಪ್ರಯಾಣ ಇನ್ನು ದುಬಾರಿ, ಇಂದು ಮಧ್ಯರಾತ್ರಿಯಿಂದಲೇ ಜಾರಿ; ಇಲ್ಲಿದೆ ನೋಡಿ ಹೆಚ್ಚಾದ ಪ್ರಯಾಣ ದರದ ಮಾಹಿತಿ

  ನವದೆಹಲಿ: 2020ರಲ್ಲಿ ರೈಲು ಪ್ರಯಾಣ ದುಬಾರಿಯಾಗಲಿದೆ. ಹೌದು ಪ್ರತಿ ಕಿಲೋಮೀಟರ್​ಗೆ ಒಂದು ಪೈಸೆ ಬೆಲೆ ಹೆಚ್ಚಳವಾಗಿದೆ.

  ಸಾಮಾನ್ಯ ಪಯಣಕ್ಕೆ ಪ್ರತಿ ಕಿಮೀಗೆ 1 ಪೈಸೆ, ಮೈಲ್​ ಹಾಗೂ ಎಕ್ಸ್​ಪ್ರೆಸ್​ಗೆ ಪ್ರತಿ ಕಿ.ಮೀ.ಗೆ 2 ಪೈಸೆ, ಎಸಿ ಪ್ರಯಾಣಿಕರಿಗೆ ಪ್ರತಿ ಕಿ.ಮೀ.ಗೆ 4 ಪೈಸೆ ಹೆಚ್ಚಿಸಲಾಗಿದ್ದು ಇಂದು ಮಧ್ಯರಾತ್ರಿಯಿಂದ ಹೊಸ ದರ ಅನ್ವಯವಾಗುವಂತೆ ರೈಲ್ವೇ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.

  ರೈಲ್ವೇ ಸಚಿವಾಲಯವು 1 ಜನವರಿ 2020ರಿಂದ ದರ ಏರಿಕೆ ನಿರ್ಧರಿಸಲಾಗಿದೆ ಎಂದು ದರ ಏರಿಕೆ ಮಾಡಿ ನೀಡಿದ ಸೂಚನೆಯಲ್ಲಿ ಇಲಾಖೆ ಸ್ಪಷ್ಟಪಡಿಸಿದೆ.

  ರೈಲ್ವೇ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್​ ಯಾದವ್​, “ದರ ಏರಿಕೆ ಬಗ್ಗೆ ಕೇಂದ್ರ ಸರ್ಕಾರದ ಎದುರಿಗೆ ಯಾವ ಪ್ರಸ್ತಾವವಿಲ್ಲ” ಎಂದು ಹೇಳಿದ ಮರು ದಿನವೇ ಪ್ರಯಾಣದ ದರವನ್ನು ಏರಿಸಲಾಗಿದೆ. ಕಳೆದ ಬಾರಿ ಪ್ರಯಾಣ ದರ ಏರಿಕೆಯಾಗಿದ್ದು 2014-15ರಲ್ಲಿ ಎಂದು ಇಲಾಖೆ ರೈಲು ಪ್ರಯಾಣಿಕರಿಗೆ ತಿಳಿಸಿದೆ.

  ಆಫ್-ಬೋರ್ಡ್ ಮತ್ತು ಆನ್-ಬೋರ್ಡ್ ಎರಡರಲ್ಲೂ ಉನ್ನತೀಕರಣ ಮತ್ತು ಸೌಲಭ್ಯಗಳ ವಿಸ್ತರಣೆಯಾಗಿದೆ. ಬೋಗಿಗಳ ಆಧುನೀಕರಣ ಮತ್ತು ನಿಲ್ದಾಣಗಳಲ್ಲಿ ಸುಧಾರಿತ ಸೌಲಭ್ಯಗಳನ್ನು ಒದಗಿಸುವ ಮೂಲಕ ಪ್ರಯಾಣಿಕರ ಉನ್ನತ ಅನುಭವವನ್ನು ಹೆಚ್ಚಿಸಲು ಭಾರತೀಯ ರೈಲ್ವೆ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ರೈಲ್ವೆ ಸಚಿವಾಲಯ ಹೇಳಿಕೊಂಡಿದೆ.

  ಈಗಾಗಲೇ ಮುಂಗಡವಾಗಿ ಟಿಕೆಟ್​ ಬುಕ್​ ಆಗಿದ್ದರೆ ಆದರೆ ಹೆಚ್ಚಿನ ಬೆಲೆಯನ್ನು ಪಡೆಯಲಾಗುವುದಿಲ್ಲ. ಆದರೆ ನಿಲ್ದಾಣಗಳಲ್ಲಿ ಮತ್ತು ಟಿಕೆಟ್​ ಕಲೆಕ್ಟರ್​ ಪರಿಶೀಲಿಸಿದ ಟಿಕೆಟ್​ಗಳಿಗೆ ಹೆಚ್ಚನ ದರ ವಿಧಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

  ರಾಜಧಾನಿ, ಶತಾಬ್ದಿ, ಡುರಾಂಟೊ, ವಂದೇ ಭಾರತ್​, ಹಮ್​ಸಫರ್​, ಮಹಾಮಾನ, ಗತಿಮಾನ್​, ಅಂತ್ಯೋದಯ, ಗರೀಬ್​ ರಥ, ಜನ್​ ಶತಾಬ್ದಿ, ರಾಜ್ಯ ರಾಣಿ, ಯುವ ಎಕ್ಸ್​ಪ್ರೆಸ್​, ಸುವಿಧಾ, ವಿಶೇಷ ರೈಲು ಮತ್ತು ಎಸಿ ಮೆಮು ಹಾಗೂ ಎಸಿ ಡೆಮು ರೈಲುಗಳ ದರದಲ್ಲಿ ಏರಿಕೆಯಾಗಿದೆ ಎಂದು ಇಲಾಖೆಯ ಸೂಚನೆ ತಿಳಿಸಿದೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts