More

    ಧೂಮಪಾನಿಗಳೇ ರೈಲು ಪ್ರಯಾಣದಲ್ಲಿ ಇನ್ಮುಂದೆ ಬಹಳ ಎಚ್ಚರದಿಂದ ಇರಿ: ಯಾಕೆ ಗೊತ್ತಾ?

    ನವದೆಹಲಿ: ಇನ್ಮುಂದೆ ರೈಲು ಪ್ರಯಾಣದಲ್ಲಿ ಧೂಮಪಾನ ಮಾಡುವವರು ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ಚಟ ತಡೆಯಲಾಗದೇ ಕೆಲವರು ರೈಲ್ವೆ ಟಾಯ್ಲೆಟ್​​ಗಳಲ್ಲಿ ಹೋಗಿ ಸಿಗರೇಟ್, ಬೀಡಿ ಸೇದುತ್ತಾರೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕಲು ರೈಲ್ವೆ ಇಲಾಖೆ ಮುಂದಾಗಿದೆ.

    ರೈಲಿನಲ್ಲಿ ಸಿಗರೇಟ್, ಬೀಡಿ ಸೇದಿ ಸಿಕ್ಕಿ ಬಿದ್ದವರಿಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸುವ ಕಾನೂನು ಜಾರಿಗೊಳಿಸಲು ಅಣಿಯಾಗುತ್ತಿದ್ದೇವೆ ಎಂದು ರೈಲ್ವೆ ಸಚಿವಾಲಯ ಶನಿವಾರ ಹೇಳಿದೆ.

    ಕಳೆದ ಮಾರ್ಚ್ 13 ರಂದು ದೆಹಲಿ ಡೆಹರಾಡೂನ್ ಶತಾಭ್ದಿ ರೈಲಿನ 15 ನೇ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಬೋಗಿ ಹೊತ್ತಿ ಉರಿದಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ. ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿದಾಗ ಗೊತ್ತಾಗಿದ್ದು, ರೈಲ್ವೆ ಶೌಚಾಲಯದಲ್ಲಿ ಯಾರೋ ಸಿಗರೇಟ್ ಸೇದಿ ಹಾಗೇ ಬೀಸಾಡಿದ್ದರು. ಇದರಿಂದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಬೋಗಿ ಹೊತ್ತಿ ಉರಿದಿತ್ತು ಎಂದು ಅಧಿಕಾರಿಗಳು ವರದಿ ನೀಡಿದ್ದರು.

    ಇದನ್ನೂ ಓದಿ: ಪತ್ನಿ ಅನೈತಿಕ ಸಂಬಂಧ ಗೊತ್ತಾದರೂ ಸುಮ್ಮನಿದ್ದರೆ ಈಗ ಅತಿಯಾಗಿಬಿಟ್ಟಿದೆ- ಸಾಕ್ಷಿ ಇಲ್ಲದೆ ಡಿವೋರ್ಸ್​ ಪಡೆಯುವುದು ಹೇಗೆ?

    ಹೀಗಾಗಿ ಇನ್ಮುಂದೆ ರೈಲಿನಲ್ಲಿ ಸಿಗರೇಟ್ ಬೀಡಿ ಸೇದುವವರಿಗೆ ಸಂಪೂರ್ಣ ನಿಷೇಧ ಹೇರಲು ಇಲಾಖೆ ಮುಂದಾಗಿದೆ. ಸದ್ಯ ರೈಲಿನಲ್ಲಿ ಸಿಗರೇಟ್, ಬೀಡಿ ಸೇದಿ ಸಿಕ್ಕಿಬಿದ್ದರೆ 100 ರುಪಾಯಿವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. ಹೀಗಾಗಿ ಇದನ್ನು ಹತ್ತು ಪಟ್ಟು ಅಥವಾ ಅದಕ್ಕಿಂತ ಹೆಚ್ಚು ಮಾಡುವುದಲ್ಲದೇ ಜೈಲು ಶಿಕ್ಷೆ ಕೂಡ ನೀಡುವ ಕಾನೂನನ್ನು ಜಾರಿಗೊಳಿಸಲು ರೈಲ್ವೆ ಇಲಾಖೆ ಮುಂದಾಗಿದೆ. (ಏಜೇನ್ಸಿಸ್).

    ಮ್ಯಾನ್ಮಾರ್​ ರಾಜಕೀಯ ವಿಪ್ಲವದಿಂದಾಗಿ ಭಾರತದಲ್ಲಿ ದುಬಾರಿಯಾಗಲಿದೆ ಇಡ್ಲಿ, ದೋಸೆ..!

    ರಾತ್ರೋರಾತ್ರಿ ಸಿನಿಮಾ ಹಾಲ್​ಗೆ ನುಗ್ಗಿ ಸ್ನ್ಯಾಕ್ಸ್​​ ಕದ್ದು ತಿಂದು, ಸೆಕ್ಸ್​ ಮಾಡಿ ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ದಂಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts