More

    ಎಪಿಎಂಸಿ ರಸ್ತೆಯಲ್ಲಿ ರೈಲ್ವೆ ಅಂಡರ್‌ಪಾಸ್

    ವಿಜಯವಾಣಿ ಸುದ್ದಿಜಾಲ ಪುತ್ತೂರು

    ಉಪ್ಪಿನಂಗಡಿ- ಪುತ್ತೂರು ರಾಜ್ಯ ಹೆದ್ದಾರಿಯಿಂದ ಪುತ್ತೂರು ನಗರ ನೇರವಾಗಿ ಸಂಪರ್ಕಿಸಲು ಇರುವ ಎಪಿಎಂಸಿ ರಸ್ತೆಯಲ್ಲಿ ರೈಲ್ವೆ ಅಂಡರ್‌ಪಾಸ್ ನಿರ್ಮಾಣಕ್ಕೆ 11.92 ಕೋಟಿ ರೂ. ವೆಚ್ಚದ ಮೆಗಾ ಯೋಜನೆ ಸಿದ್ಧವಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಒಪ್ಪಂದಕ್ಕೆ ಎಚ್‌ಎಂಆರ್‌ಡಿಸಿಎಲ್- ರೈಲ್ವೆ ಇಲಾಖೆಯ ಸಹಿ ಬೀಳಲಿದ್ದು, ಮೇ ಒಳಗಾಗಿ ಟೆಂಡರ್ ಹಂತ ತಲುಪಲಿದೆ.

    ಎಪಿಎಂಸಿ ರಸ್ತೆ ರೈಲ್ವೆ ಅಂಡರ್‌ಪಾಸ್ ನಿರ್ಮಾಣ ಯೋಜನೆ ಭಾರತೀಯ ರೈಲ್ವೆ ಹಾಗು ಎಪಿಎಂಸಿ 50:50 ಅನುದಾನದಲ್ಲಿ ನಿರ್ಮಾಣಗೊಳ್ಳುವ ಬಗ್ಗೆ ಈ ಹಿಂದೆ ಚರ್ಚೆ ನಡೆದಿದ್ದು, ಪುತ್ತೂರು ಎಪಿಎಂಸಿಯಲ್ಲಿ ಯೋಜನಾ ಮೊತ್ತಕ್ಕೆ ಬೇಕಾದ ಸಂಪನ್ಮೂಲ ಕೊರತೆಯಾಗಿದ್ದರಿಂದ ಯೋಜನೆಯಿಂದ ಹಿಂದೆ ಸರಿದಿತ್ತು. ಆದರೆ ಪುತ್ತೂರು ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ನಡೆದ ರೈಲ್ವೆ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಸರ್ಕಾರದ ಎಚ್‌ಎಂಆರ್‌ಡಿಸಿಎಲ್ ಹಾಗೂ ಕೇಂದ್ರ ರೈಲ್ವೆ ಇಲಾಖೆ ಅನುದಾನದಲ್ಲಿ ರೈಲ್ವೆ ಅಂಡರ್‌ಪಾಸ್ ಯೋಜನೆ ಜಾರಿಗೊಳಿಸಲು ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

    ಹಳೇ ಪ್ರಸ್ತಾವನೆಗೆ ಮರುಜೀವ: ರೈಲ್ವೆ ಅಂಡರ್‌ಪಾಸ್ ಯೋಜನೆ ಜಾರಿಗೊಳ್ಳುವ ಹಂತದಲ್ಲಿರುವಾಗಲೇ ಪುತ್ತೂರು ತಾಲೂಕಿನ ಕಡಬದ ಸುಂಕದಕಟ್ಟೆ ಕ್ರಾಸಿಂಗ್, ಐತ್ತೂರು ಗ್ರಾಮದ ಬಜಕೆರೆ ಕ್ರಾಸಿಂಗ್, ಕೋಡಿಂಬಾಳ ಬಳಿ ಇರುವ ಕ್ರಾಸಿಂಗ್, ಸವಣೂರು ಕ್ರಾಸಿಂಗ್, ವೀರಮಂಗಲ ಕ್ರಾಸಿಂಗ್, ಮುಕ್ವೆ ಬಳಿಯ ಪುರುಷರಕಟ್ಟೆ ಕ್ರಾಸಿಂಗ್, ನರಿಮೊಗರು ಗ್ರಾಪಂ ಬಳಿಯ ಸಾಂದೀಪನಿ ಶಾಲಾ ಬಳಿಯ ಕ್ರಾಸಿಂಗ್, ಸಾಮೆತ್ತಡ್ಕ ರೈಲ್ವೆ ಕ್ರಾಸಿಂಗ್‌ಗಳ ಬದಲಿಗೆ ಮೇಲ್ಸೇತುವೆ ನಿರ್ಮಾಣ ಪ್ರಸ್ತಾವನೆಗೆ ಮರುಜೀವ ಪಡೆದುಕೊಂಡಿದೆ.

    ಅಂತಿಮ ರೂಪ: ಎಪಿಎಂಸಿ ರಸ್ತೆಯಲ್ಲಿ ರೈಲ್ವೆ ಅಂಡರ್‌ಪಾಸ್ ಯೋಜನೆ ಜಾರಿಗೊಳಿಸುವ ಕುರಿತು ಇತ್ತೀಚೆಗೆ ಎಚ್‌ಎಂಆರ್‌ಡಿಸಿಎಲ್ ಆಡಳಿತ ನಿರ್ದೇಶಕ ಅಮಿತ್ ಗರ್ಗ್ ಜತೆ ಪುತ್ತೂರು ಶಾಸಕ ಸಂಜೀವ ಮಠಂದೂರು ಚರ್ಚೆ ನಡೆಸಿ ಯೋಜನಾ ಜಾರಿಗೆ ಅಂತಿಮ ರೂಪ ನೀಡಿದ್ದರು. ಪುತ್ತೂರಿನ ವಿವಿದೆ ರೈಲ್ವೆ ಗೇಟ್‌ಗಳ ಬದಲಿಗೆ ಮೇಲ್ಸೆತುವೆ ನಿರ್ಮಾಣಕ್ಕೆ 8 ಮೇಲ್ಸೆತುವೆ ಅಗತ್ಯವೆಂದು 2 ವರ್ಷದ ಮೊದಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುರ ರೈಲ್ವೆ ಮೇಲ್ಸೆತುವೆ ಮಾದರಿಯಲ್ಲಿ ತಾಲೂಕಿನ ವಿವಿಧೆಡೆಗಳಲಿ ್ಲಮೇಲ್ಸೇತುವೆ ನಿರ್ಮಿಸುವಂತೆ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ 8 ಹೊಸ ರೈಲ್ವೆ ಮೇಲ್ಸೇತುವೆ ನಿರ್ಮಾಣ ಪ್ರಸ್ತಾವನೆ ಪರಿಶೀಲನೆ ಹಂತದಲ್ಲಿದೆ.

    ಎಪಿಎಂಸಿ ರಸ್ತೆ ರೈಲ್ವೆ ಅಂಡರ್‌ಪಾಸ್ ನಿರ್ಮಾಣಕ್ಕೆ ವೆಚ್ಚದ ಮೆಗಾ ಯೋಜನೆ ಸಿದ್ಧಗೊಳಿಸಲಾಗಿದೆ. ಪುತ್ತೂರು ಅಭಿವೃದ್ಧಿ ದೃಷ್ಟಿಯಿಂದ ಕೆಲಸ ನಿರ್ವಹಿಸಿದರೆ ಅಂಡರ್‌ಪಾಸ್ ನಿರ್ಮಾಣ ವೇಗವಾಗಿ ನಡೆಯಬಹುದು. ಯೋಜನಾ ಅನುಷ್ಠಾನದ ಬಗ್ಗೆ ಎಚ್‌ಎಂಆರ್‌ಡಿಸಿಎಲ್ ಆಡಳಿತ ನಿರ್ದೇಶಕ ಅಮಿತ್ ಗರ್ಗ್ ಜತೆ ಚರ್ಚೆ ನಡೆಸಲಾಗಿದೆ.
    ಸಂಜೀವ ಮಠಂದೂರು, ಪುತ್ತೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts