More

    ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ; ಪಾಲನೆಯಾದ ಕೋವಿಡ್ ಮಾರ್ಗಸೂಚಿ

    ಒಎಂಆರ್ ಶೀಟ್‌ನಲ್ಲಿ ಉತ್ತರಿಸಿದ ವಿದ್ಯಾರ್ಥಿಗಳು | ಒಟ್ಟು ಕೇಂದ್ರಗಳು 179, ನೋಂದಣಿ ಮಾಡಿಸಿಕೊಂಡವರು 30,503, ಹಾಜರಾದವರು 30,257, ಗೈರಾದವರು 246

    ರಾಯಚೂರು: ಜಿಲ್ಲೆಯ 179 ಕೇಂದ್ರಗಳಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, ನೋಂದಣಿ ಮಾಡಿಸಿಕೊಂಡಿದ್ದ 30,503 ವಿದ್ಯಾರ್ಥಿಗಳ ಪೈಕಿ 30,257 ಪರೀಕ್ಷಾರ್ಥಿಗಳು ಹಾಜರಾದಗಿದ್ದರು.

    ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿ ಪರೀಕ್ಷಾ ಕೇಂದ್ರದೊಳಗೆ ಬಿಡಲಾಯಿತು. ವಿದ್ಯಾರ್ಥಿಗಳು ಪರಸ್ಪರ ಅಂತರ ಕಾಪಾಡುವಂತೆ ಸೂಚನೆ ನೀಡಿ, ಒಂದು ಕೊಠಡಿಯಲ್ಲಿ 12 ಜನ ಪರೀಕ್ಷಾರ್ಥಿಗಳನ್ನು ಬಿಡಲಾಯಿತು. ಆರೋಗ್ಯ ಸಮಸ್ಯೆಯಿದ್ದ 7 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು.

    ಪರೀಕ್ಷೆಗೂ ಅರ್ಧ ಗಂಟೆಗೆ ಮುಂಚೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ್ದರು. ಬಹಳಷ್ಟು ವಿದ್ಯಾರ್ಥಿಗಳನ್ನು ಅವರ ಪಾಲಕರು ಪರೀಕ್ಷಾ ಕೇಂದ್ರಕ್ಕೆ ಕರೆತಂದು ಬಿಡುತ್ತಿರುವುದು ಕಂಡು ಬಂತು. ಒಎಂಆರ್ ಶೀಟ್‌ನಲ್ಲಿ ಉತ್ತರಿಸಬೇಕಾದ ಕಾರಣ ವಿದ್ಯಾರ್ಥಿಗಳಲ್ಲಿ ಅಲ್ಪ ಮಟ್ಟಿಗೆ ಆತಂಕ ಕಂಡು ಬರುತ್ತಿತ್ತು. ಪರೀಕ್ಷೆಯಲ್ಲಿ ನಕಲು ಮಾಡುವ, ಡಿಬಾರ್ ಆದ ಪ್ರಕರಣ ನಡೆದಿಲ್ಲ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts