More

  ಪೇಜಾವರ ಶ್ರೀ ದೇಶ ಕಂಡ ಮಹಾನ್ ಸಂತ; ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ ಬಣ್ಣನೆ

  ರಾಯಚೂರು: ಇಡೀ ಸಮುದಾಯವನ್ನೆ ವಸುದೈವ ಕುಟುಂಬಕಂ ಎಂಬ ಸಿದ್ಧಾಂತದಂತೆ ಪರಿಭಾವಿಸಿದ್ದ ಪೇಜಾವರದ ಶ್ರೀ ವಿಶ್ವೇಶ ತೀರ್ಥರು ಈ ದೇಶ ಕಂಡ ಮಹಾನ್ ಸಂತ ಎಂದು ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ ಬಣ್ಣಿಸಿದರು.

  ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಆಯೋಜಿಸಿದ್ದ ಪೇಜಾವರ ಶ್ರೀಗಳಿಗೆ ನುಡಿನಮನ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು. ದೇಶದಲ್ಲಿ ಸಮಾನತೆ ತರುವ ಅವರ ಪ್ರಯತ್ನಕ್ಕೆ ಪರ, ವಿರೋಧದ ಮಧ್ಯೆಯೂ ಮೆಚ್ಚುಗೆ ವ್ಯಕ್ತವಾಗಿತ್ತು. ಹರಿಜನರ ಕಾಲನಿಗಳಿಗೆ ಭೇಟಿ ನೀಡಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಮೂಲಕ ಜಾಗೃತಿ ಕಾರ್ಯವನ್ನು ಜೀವನದ ಕೊನೆಯವರೆಗೂ ಬಿಡದೆ ಜಾತ್ಯತೀತದ ಧಾರ್ಮಿಕತೆಯ ಸಂತರಾಗಿದ್ದಾರೆ. ಕೆಲ ಬ್ರಾಹ್ಮಣರ ವಿರೋಧ ಮೆಟ್ಟಿ ನಿಂತು ಸಮಾನತೆ ಸಾರಲು ಮುಂದಾಗಿದ್ದು ಮರೆಯಲಾಗದು ಎಂದರು.

  ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ನಗರಸಭೆ ಸದಸ್ಯ ಜಯಣ್ಣ, ವಿವಿಧ ಸಮುದಾಯಗಳ ಮುಖಂಡರಾದ ಕೆ.ಶಾಂತಪ್ಪ, ರವೀಂದ್ರ ಜಲ್ದಾರ್, ಜಿ. ಸುರೇಶ್, ವಿಜಯ ಭಾಸ್ಕರ್ ಇಟಗಿ, ಬ್ರಾಹ್ಮಣ ಮಹಾಸಭಾದ ವಲಯ ಉಪಾಧ್ಯಕ್ಷ ನರಸಿಂಗರಾವ್ ದೇಶಪಾಂಡೆ, ಜಿಲ್ಲಾಧ್ಯಕ್ಷ ಜಗನ್ನಾಥ ಕುಲಕರ್ಣಿ, ತಾಲೂಕು ಅಧ್ಯಕ್ಷ ಗುರುರಾಜಾಚಾರ್ಯ ತಾಳಿಕೋಟೆ, ಸುರೇಶ್ ದಿಗ್ಗಾವಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts