More

    ಆರ್‌ಟಿಪಿಎಸ್ ಹಾರೋಬೂದಿಯಿಂದಾದ ನಷ್ಟ ಭರಿಸಿ

    ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹ

    ರಾಯಚೂರು: ಆರ್‌ಟಿಪಿಎಸ್ ಹಾರೋಬೂದಿಯಿಂದ ಆರೋಗ್ಯ, ಬೆಳೆ ಹಾಳಾದವರಿಗೆ ಕೂಡಲೇ ನಷ್ಟ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಂ.ಡಿ.ನಂಜುಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಾಲೂಕಿನ ದೇವಸುಗೂರು ಗ್ರಾಪಂ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

    ಆರ್‌ಟಿಪಿಎಸ್ ವಿದ್ಯುತ್ ಘಟಕದಿಂದ ಹೊರ ಬರುತ್ತಿರುವ ಹಾರೋಬೂದಿಯಿಂದ ಅನೇಕರಿಗೆ ಕ್ಯಾನ್ಸರ್ ಸೇರಿ ಇತರ ರೋಗ ಕಾಣಿಸಿಕೊಂಡಿದ್ದು, ಅಂತವರಿಗೆ 25 ರಿಂದ 50 ಲಕ್ಷ ರೂ. ಪರಿಹಾರ ನೀಡಬೇಕು, 20 ಹಳ್ಳಿ ರೈತರ ಬೆಳೆ ಹಾಳಾಗಿದ್ದು, ಬೆಳೆ ನಷ್ಟ ಪರಿಹಾರ ಒದಗಿಸಬೇಕು, ದತ್ತು ಗ್ರಾಮಗಳಿಗೆ ಉಚಿತ ವಿದ್ಯುತ್ ಪೂರೈಕೆ, ಗಂಜಳ್ಳಿ ರಸ್ತೆಯ ಸೇತುವೆ ನಿರ್ಮಾಣ, ರಾಘವೇಂದ್ರ ಕಾಲನಿ, ಕೆಳಗಿನ ಪೇಟೆ ನಿವಾಸಿಗಳಿಗೆ ಕುಡಿವ ನೀರು, ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸವೇಕು, ಆಸ್ಪತ್ರೆ ಮಂಜೂರು, ಸಾರ್ವಜನಿಕ ಶೌಚಗೃಹ ತಕ್ಷಣ, ಗೋಶಾಲೆ ಆರಂಭಿಸಬೇಕೆಂದು ಆಗ್ರಹಿಸಿದರು.

    ಮನವಿ ಸ್ವೀಕರಿಸಿದ ತಹಸೀಲ್ದಾರ್ ಹಂಪಣ್ಣ ಸಜ್ಜನ್, ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು. ಸಂಘದ ಜಿಲ್ಲಾಧ್ಯಕ್ಷ ವಾಸುದೇವ ಮೇಟಿ, ಶಿವರಾಮ ಚವ್ಹಾಣ ಸುರಪುರ, ಗಂಗಾಧರ ಮೇಟಿ. ಚಂದ್ರಗೌಡ ಪಾಟೀಲ್ ವಿಜಯಪುರ, ಮಹೇಶಗೌಡ ಯಾದಗಿರಿ, ಶಿವಕುಮಾರ ಶಹಪುರ, ಮಲ್ಲಮ್ಮ, ಸವಾರೆಮ್ಮ, ತಾಯಮ್ಮ, ಯಲ್ಲಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts