More

    ಮೀಸಲಾತಿ ಪರಿಷ್ಕರಣೆಯಿಂದ ಛಲವಾದಿಗಳಿಗೆ ಅನ್ಯಾಯ

    ರಾಯಚೂರು: ಮೀಸಲಾತಿ ಪರಿಷ್ಕರಣೆ ಹೆಸರಿನಲ್ಲಿ ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಿರುವುದರಿಂದ ಛಲವಾದಿ ಸಂಬಂಧಿತ ಉಪ ಜಾತಿಗಳಿಗೆ ಅನ್ಯಾಯವಾಗಲಿದೆ ಎಂದು ಛಲವಾದಿ ಸಂಘಟನೆಗಳ ಒಕ್ಕೂಟದ ಸಂಚಾಲಕ ರವೀಂದ್ರನಾಥ ಪಟ್ಟಿ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಛಲವಾದಿ ಸಮುದಾಯದ ಉಪ ಜಾತಿಗಳಾದ ಮಾಲಾ, ಬ್ಯಾಗಾರು, ಬೇಗಾರ ಸಮುದಾಯಗಳನ್ನು ಶೇ.1 ಮೀಸಲಾತಿಗೆ ಸೇರಿಸಲಾಗಿದೆ. ಈ ಕುರಿತು ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದರು.

    ಸರ್ಕಾರ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಮಾಡದೆ, ಸಚಿವ ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ವರದಿ ಪಡೆದು ಛಲವಾದಿ ಸಮುದಾಯದ ಉಪಜಾತಿಗಳಿಗೆ ದ್ರೋಹ ಎಸಗಿದೆ. ಸದಾಶಿವ ಆಯೋಗದ ವರದಿ ಜಾರಿ ಮಾಡಲು ಯಾವ ಸರ್ಕಾರಗಳೂ ಮುಂದಾಗಲಿಲ್ಲ. ಆದರೆ, ಬಿಜೆಪಿ ಸರ್ಕಾರ ಚುನಾವಣೆ ನೀತಿ ಸಂಹಿತೆ ಜಾರಿಗೊಳ್ಳುವ ಒಂದು ದಿನ ಮುಂಚೆ ಅವೈಜ್ಞಾನಿಕ ನಿರ್ಧಾರ ಕೈಗೊಂಡಿದೆ.

    ಸಚಿವ ಸಂಪುಟದ ಉಪ ಸಮಿತಿಯಲ್ಲಿ ಸಚಿವರಾದ ಮಾಧುಸ್ವಾಮಿ, ಗೋವಿಂದ ಕಾರಜೋಳ, ಎಸ್.ಆಂಗಾರ, ಪ್ರಭು ಚವ್ಹಾಣ್, ಡಾ.ಸುಧಾಕರ ಇದ್ದು, ಸಮಿತಿ ನೀಡಿರುವ ಶಿಾರಸಿನಂತೆ ಗ್ರೂಪ್ ಎ ನಲ್ಲಿ ಎಡಗೈ ಸಂಬಂಧಿಸಿದ ಮಾದಿಗ ಜಾತಿಗಳಿಗೆ ಶೇ.6 ಮೀಸಲಾತಿ, ಬಲಗೈ ಸಂಬಂಧಿಸಿದ ಆದಿ ಕರ್ನಾಟಕ, ಛಲವಾದಿ ಜಾತಿಗಳಿಗೆ ಗ್ರೂಪ್ ಬಿ ಅಡಿ ಶೇ.5.5 ಮೀಸಲಾತಿ, ಗ್ರೂಪ್ ಸಿ 1 ಅಡಿ ಬಂಜಾರ, ಕೊರವ, ಕೊರಚ, ಕೊರಮ, ಭೋವಿ ಸಂಬಂಧಿಸಿದ ಜಾತಿಗಳಿಗೆ ಶೇ.4.5 ಮೀಸಲಾತಿ, ಗ್ರೂಪ್ ಡಿ ಅಡಿ ಅಲೆಮಾರಿ ಜನಾಂಗ, ಹೆಸರೇ ಇಲ್ಲದ ಅಸ್ಪಶ್ಯ 89 ಜಾತಿಗಳಿಗೆ ಶೇ.1 ಮೀಸಲಾತಿ ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸಿದೆ.

    ಈ ಮೂಲಕ ಛಲವಾದಿ ಸಂಬಂಧಿತ ಜಾತಿಗಳಿಗೆ ಅನ್ಯಾಯ ಮಾಡಿದೆ. ಕ್ರಮ ಸಂಖ್ಯೆ 53 ರಲ್ಲಿ ಮಾಲಾ, 38 ರಲ್ಲಿ ಹೊಲೆ, ಹೋಲೇರು, ಹೊಲೆಯ, ಕ್ರಮಸಂಖ್ಯೆ 20 ರಲ್ಲಿ ಬ್ಯಾಗಾರ ಜಾತಿಗಳನ್ನು ಗ್ರೂಪ್ 4 ರಡಿ ಸೇರ್ಪಡೆ ಮಾಡಿ ಅಸ್ಪಶ್ಯರಿಗೆ ಅನ್ಯಾಯ ಮಾಡಲು ಹೊರಟಿದೆ. ಶೇ.5.5 ಮೀಸಲು ವಂಚಿಸಿ ಶೇ.1 ಮೀಸಲು ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ರವೀಂದ್ರನಾಥ ಪಟ್ಟಿ ತಿಳಿಸಿದರು. ಪದಾಧಿಕಾರಿಗಳಾದ ಜಗನ್ನಾಥ ಸುಂಕಾರಿ, ರವಿಕುಮಾರ ರಾಂಪುರ, ನರಸಿಂಹಲು ನೆಲಹಾಳ, ಆರ್.ತಿಮ್ಮಾರೆಡ್ಡಿ, ಶೇಖರ ರಾಂಪುರ, ಯಲ್ಲಪ್ಪ ಅರಳಬೆಂಚಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts