More

    ಬೆಳೆ ನಷ್ಟವಾದ ಎಲ್ಲರಿಗೂ ಪರಿಹಾರ ಸಿಗಲಿ

    ರಾಯಚೂರು: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ರೈತರಿಗೆ ವಂಚನೆಯಾಗುತ್ತಿದೆ. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಜಿಲ್ಲಾಡಳಿತ ತಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೂಪಾ ಶ್ರೀನಿವಾಸ ನಾಯಕ ಒತ್ತಾಯಿಸಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೈತರು ಯೋಜನೆ ನಂಬಿ ವಿಮೆ ಕಂತು ಪಾವತಿಸಿದರೆ ಬೆಳೆ ನಷ್ಟ ಪರಿಹಾರ ದೊರೆಯುತ್ತಿಲ್ಲ. ವಿಮೆ ಮಾಡಿಸಲು ರೈತರ ಮನೆ ಬಾಗಿಲಿಗೆ ಬರುವ ಕೃಷಿ ಅಧಿಕಾರಿಗಳು ಪರಿಹಾರ ವಿತರಣೆಯಲ್ಲಿ ಅನ್ಯಾಯವಾದರೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ವಿಮೆ ಕಂಪನಿ ಕಚೇರಿ ಜಿಲ್ಲೆಯಲ್ಲಿ ಇಲ್ಲ. ಬ್ಯಾಂಕ್‌ಗಳಲ್ಲಿ ವಿಮೆ ಕಂತು ಪಡೆಯಲಾಗುತ್ತದೆ. ಅನ್ಯಾಯವಾದರೆ ರೈತರು ಯಾರನ್ನು ಕೇಳಬೇಕು ಎಂದು ಪ್ರಶ್ನಿಸಿದರು.

    ಜಿಲ್ಲೆಯಲ್ಲಿ 40 ಸಾವಿರಕ್ಕೂ ಹೆಚ್ಚು ರೈತರು ವಿಮೆ ಮಾಡಿಸಿದ್ದು, ಬಹುತೇಕರಿಗೆ ಮೋಸವಾಗುತ್ತಿದೆ. ಬೆಳೆ ನಷ್ಟವಾಗಿರುವ ಎಲ್ಲ ರೈತರಿಗೂ ಪರಿಹಾರ ವಿತರಿಸಬೇಕು ಎಂದು ರೂಪಾ ಶ್ರೀನಿವಾಸ ನಾಯಕ ಆಗ್ರಹಿಸಿದರು. ಮಾನ್ವಿ ತಾಲೂಕು ಅಧ್ಯಕ್ಷ ಬಸವರಾಜ ನಾಯಕ, ಪ್ರಮುಖರಾದ ವೀರೇಶ ನಾಯಕ, ರಾಜಾಸಾಬ್, ವಲಿಸಾಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts