More

    ಪಾದಯಾತ್ರೆಗೆ ಮೆರುಗು ತಂದ ಕನ್ನಡಿಗರು, ಶ್ರೀಶೈಲ ಜಗದ್ಗುರುಗಳ ಮೆಚ್ಚುಗೆ

    ರಾಯಚೂರು: ಲೋಕ ಕಲ್ಯಾಣಾರ್ಥವಾಗಿ ಶ್ರೀಶೈಲ ಜಗದ್ಗುರು ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಮ್ಮಿಕೊಂಡಿರುವ ಪಾದಯಾತ್ರೆ ಜಿಲ್ಲೆಯಲ್ಲಿ ಏಳು ದಿನಗಳ ಕಾಲ ಸಂಚರಿಸಿದ ನಂತರ ಶನಿವಾರ ಮಧ್ಯಾಹ್ನ ತೆಲಂಗಾಣಕ್ಕೆ ಪ್ರವೇಶಿಸಿದ್ದು, ಜಿಲ್ಲೆಯ ಭಕ್ತರು ಭಕ್ತಿ, ಶ್ರದ್ಧೆಯಿಂದ ಜಗದ್ಗುರುಗಳನ್ನು ಜಿಲ್ಲೆಯಿಂದ ಬಿಳ್ಕೋಟ್ಟರು.

    ರಾಯಚೂರು ನಗರದಿಂದ ಶುಕ್ರವಾರ ರಾತ್ರಿ ತಾಲೂಕಿನ ಬೀಜನಗೇರಾ ಗ್ರಾಮಕ್ಕೆ ತೆರಳಿ ವಾಸ್ತವ್ಯ ಮಾಡಿದ್ದ ಶ್ರೀಗಳು ಶನಿವಾರ ಬೆಳಗ್ಗೆ ಗ್ರಾಮದಿಂದ ತೆಲಂಗಾಣದ ಚಿಂತಲಕುಂಟಾ ಗ್ರಾಮಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಬೀಜನಗೇರಾ ಮತ್ತು ನಗರದ ಭಕ್ತರು ಚಿಂತಲಕುಂಟಾ ಗ್ರಾಮದವರೆಗೆ ಹೆಜ್ಜೆ ಹಾಕಿ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿದರು.

    ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಾದಯಾತ್ರೆ ಕರ್ನಾಟಕದಲ್ಲಿ ಸಂಚರಿಸಿದ ಸಂದರ್ಭದಲ್ಲಿ ರಾಜ್ಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಮೆರುಗು ತಂದಿದ್ದು, ಕರ್ನಾಟಕದ ಭಕ್ತರ ಬೆಂಬಲ ಅವಿಸ್ಮರಣಿಯ ಎಂದರು.

    ಅದರಲ್ಲೂ ರಾಯಚೂರು ಜಿಲ್ಲೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪಾದಯಾತ್ರೆ ಯಶಸ್ವಿಗೆ ಬೆಂಬಲಿಸಿದ್ದಾರೆ. ನಿರೀಕ್ಷೆಗೂ ಮೀರಿ ಧರ್ಮಸಭೆಗಳಲ್ಲಿ ಭಕ್ತರು ಪಾಲ್ಗೊಂಡಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಎಲ್ಲ ಸಮುದಾಯದ ಮುಖಂಡರು ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವುದು ಖುಷಿ ತಂದಿದೆ ಎಂದು ಹೇಳಿದರು.

    ಜಿಲ್ಲೆಯ ತಿಂಥಣಿ ಬ್ರಿಡ್ಜ್‌ನಿಂದ ಆರಂಭವಾಗಿ ವೀರಗೋಟ, ಬುಂಕಲದೊಡ್ಡಿ, ಜಾಲಹಳ್ಳಿ, ಮಸರಕಲ್, ಗಬ್ಬೂರು, ಸುಲ್ತಾನಪುರ, ಕಲ್ಮಲಾ, ರಾಯಚೂರು, ಬೀಜನಗೇರಾ ಗ್ರಾಮದ ಮೂಲಕ ಒಟ್ಟು 7 ದಿನಗಳ ಕಾಲ ಶ್ರೀಗಳ ಪಾದಯಾತ್ರೆಗೆ ಅಸಂಖ್ಯಾತರ ಭಕ್ತರು ಪಾಲ್ಗೊಳ್ಳುವ ಮೂಲಕ ಯಶಸ್ಸು ತಂದುಕೊಟ್ಟಿದ್ದಾರೆ.

    ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ನಗರ ಶಾಸಕ ಡಾ.ಶಿವರಾಜ ಪಾಟೀಲ್, ಆರ್‌ಡಿಎ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಮಾಜಿ ಅಧ್ಯಕ್ಷ ಆಂಜಿನೇಯ ಕಡಗೋಲ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಿರ್ಜಾಪುರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts