More

    ಬಯಲು ಜಾಗ ಒತ್ತುವರಿ, ಮಾರಾಟ ನಿಲ್ಲಿಲು ಜೈ ಕನ್ನಡ ರಕ್ಷಣಾ ವೇದಿಕೆ ಒತ್ತಾಯ

    ರಾಯಚೂರು: ನಗರದ ವಿವಿಧೆಡೆ ಇರುವ ಉದ್ಯಾನ ಹಾಗೂ ಬಯಲು ಜಾಗ ಮಾರಾಟ ಮಾಡುವುದನ್ನು ತಡೆಗಟ್ಟಿ ಭೂ ಸ್ವಾಧೀನ ಪಡೆಸಿಕೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಜೈ ಕನ್ನಡ ರಕ್ಷಣಾ ವೇದಿಕೆ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.

    ನಗರದಲ್ಲಿ ಮಾಸ್ಟರ್ ಪ್ಲಾನ್ ಪ್ರಕಾರ ನಕಾಶೆ ಮತ್ತು ಉದ್ಯಾನ ಹಾಗೂ ಬಯಲು ಜಾಗ ತಯಾರಿಸಲಾಗಿದೆ. ಅದರ ಅನುಗುಣವಾಗಿ ರಸ್ತೆಯ ಅಕ್ಕ ಪಕ್ಕದಲ್ಲಿ ಬಫರ್ ಮತ್ತು ಸರ್ವಿಸ್ ರಸ್ತೆಗಳನ್ನು ನಕಾಶೆಯಲ್ಲಿ ಸೇರಿಸಿ 2015ರ ಫೆ.27ರಂದು ಮಾಸ್ಟರ್ ಪ್ಲಾನ್ ಅನುಮೋದನೆಯನ್ನು ಪಡೆದುಕೊಳ್ಳಲಾಗಿದೆ. ಈ ರೀತಿಯ ಯೋಜನೆಗಳಲ್ಲಿ ಜಮೀನುಗಳಲ್ಲಿ ನಿರ್ದಿಷ್ಟ ಉದ್ಯಾನ ಬಯಲು ಜಾಗ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲು ಇಟ್ಟಿರುವುದು ಜಾಗ ತನ್ನಿಂದ ತಾನೇ ರದ್ದು ಆಗುತ್ತದೆ.

    ಇಲ್ಲಿಯವರೆಗೂ ಯಾವುದೇ ಪ್ರಾಧಿಕಾರಗಳು ಇಂತಹ ಜಮೀನುಗಳನ್ನು ಭೂ ಸ್ವಾಧೀನ ಪಡಿಸಿಕೊಂಡಿಲ್ಲ. ಸಾರ್ವಜನಿಕ ವಲಯಕ್ಕೆ ಮೀಸಲು ಇರಿಸಲು ಜಮೀನುಗಳನ್ನು ಲೇಔಟ್ ಅನುಮೋದನೆ ಮಾಡಿದ ತಕ್ಷಣವೇ ಭೂಸ್ವಾಧೀನ ಕಡ್ಡಾಯವಾಗಿ ಮಾಡದೇ ಇರುವುದರಿಂದ ಭೂ ಮಾಲೀಕರು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದು ಈಗಾಗಲೇ ಸಾಕಷ್ಟು ತೀರ್ಪುಗಳು ಪ್ರಾಧಿಕಾರದ ವಿರುದ್ಧ ಜಾರಿ ಆಗಿರುತ್ತದೆ. ಆದರೆ 2015 ಅನುಗುಣವಾಗಿ ರೈತರ ಮೇಲೆ ಮತ್ತು ಅರ್ಜಿದಾರರ ಮೇಲೆ ಯಾವುದೇ ಒತ್ತಡ ಹಾಕದಂತೆ ರದ್ದಾಗಿದೆ. ಇದನ್ನೇ ಪರಿಗಣಿಸಲು ಸೂಕ್ತ ನಿರ್ದೇಶನ ನೀಡಬೇಕು. ಭೂ ಒತ್ತುವರಿ ತಡೆದು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts