More

    ವಿದ್ಯಾಭ್ಯಾಸ ಮಾಡಿ ಸಮುದಾಯಕ್ಕೆ ಕೀರ್ತಿ ತನ್ನಿ

    ರಾಯಚೂರು: ಮುನ್ನೂರು ಕಾಪು ಸಮುದಾಯದ ಯುವಕ, ಯುವತಿಯರು ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಸಮಾಜ ಸೇವೆ ಮೂಲಕ ಸಮುದಾಯಕ್ಕೆ ಕೀರ್ತಿ ತರಬೇಕು ಎಂದು ಮುನ್ನೂರು ಕಾಪು ಸಮಾಜದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮತ್ತು ಮಾಜಿ ಶಾಸಕ ಎ.ಪಾಪಾರೆಡ್ಡಿ ಹೇಳಿದರು.

    ಇದನ್ನೂ ಓದಿರಿ:ನಮ್ಮನ್ನು 2ಎ ಪ್ರವರ್ಗಕ್ಕೆ ಸೇರಿಸಿ, ಮುನ್ನೂರು ಕಾಪು ಸಮುದಾಯದಿಂದ ರಾಯಚೂರಿನಲ್ಲಿ ಪ್ರತಿಭಟನೆ

    ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ


    ನಗರದ ವೀರಾಂಜನೇಯ ಮುನ್ನೂರು ಕಾಪು ಕಲ್ಯಾಣ ಮಂಟಪದಲ್ಲಿ ಸಮುದಾಯದಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಶನಿವಾರ ಮಾತನಾಡಿದರು.

    ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಶ್ಲಾಘನೀಯ. ಸಮುದಾಯ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ 11 ವರ್ಷ ಕಳೆದಿವೆ. 35 ವಿದ್ಯಾರ್ಥಿಗಳು ಎಂಬಿಬಿಎಸ್ ಓದುತ್ತಿದ್ದಾರೆ ಎಂದು ತಿಳಿಸಿದರು.

    ಮುನ್ನೂರು ಕಾಪು ಸಮುದಾಯ ಮಾದರಿ

    ಮುಂಗಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮುನ್ನೂರು ಕಾಪು ಸಮುದಾಯ ಮಾದರಿಯಾಗಿರುವುದು ಸಮಾಜದ ಪ್ರಾಬಲ್ಯ ಪ್ರದರ್ಶಸುತ್ತದೆ. ಮೂಲತಃ ಕೃಷಿ ಅವಲಂಬಿತ ಸಮುದಾಯ, ವಿಶ್ವಾರ್ಹತೆ ಮತ್ತು ಸ್ವಾವಲಂಬಿ ತನದಿಂದ ಇಂದು ಎಲ್ಲ ರಂಗಗಳಲ್ಲೂ ಬೆಳೆದು ನಿಂತಿದೆ ಎಂದರು. ಮುಖಂಡರಾದ ಬೆಲ್ಲಮ್ ನರಸರೆಡ್ಡಿ, ಚನ್ನಬಸಯ್ಯ ಹಿರೇಮಠ, ವೀರ ಹನುಮಾನ, ಕೃಷ್ಣಮೂರ್ತಿ, ಜಿ.ಬಸವರಾಜ ರೆಡ್ಡಿ, ರಾಳ್ಳ ತಿಮ್ಮಾರೆಡ್ಡಿ, ಬುಡತಪ್ಪಗಾರು ಆಂಜನೇಯ, ಸೂಗಣ್ಣಗಾರು ವೆಂಕಟರೆಡ್ಡಿ, ಫಕ್ಕೀರಪ್ಪಗಾರು ನರಸರೆಡ್ಡಿ, ಕೆ. ನರಸಿಂಹಲು, ಶೇಖರರೆಡ್ಡಿ, ಬಂಗಿ ನರಸರೆಡ್ಡಿ, ಗುಡ್ಸಿ ನರಸರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts