More

    ರಾಯಚೂರು ನಗರಸಭೆ ಅಧ್ಯಕ್ಷ ವಿನಯಕುಮಾರ ಪದಚ್ಯುತಿ

    ರಾಯಚೂರು: ನಗರಸಭೆ ಸಭಾಂಗಣದಲ್ಲಿ ಶನಿವಾರ ಅಧ್ಯಕ್ಷ ಇ.ವಿನಯಕುಮಾರ ವಿರುದ್ಧ ಮಂಡಿಸಲಾದ ಅವಿಶ್ವಾಸ ಗೊತ್ತುವಳಿ ಯಶಸ್ವಿಯಾಯಿತು. ಸದಸ್ಯರು ಅವಿಶ್ವಾಸ ಪರ ಮತ ಚಲಾಯಿಸುವ ಮೂಲಕ ಇ.ವಿನಯಕುಮಾರರನ್ನು ಪದಚ್ಯುತಿಗೊಳಿಸಿದರು.

    ಒಟ್ಟು 35 ಸದಸ್ಯ ಬಲದ ನಗರಸಭೆಯಲ್ಲಿ ರೇಣಮ್ಮ ಸದಸ್ಯತ್ವ ಅನರ್ಹತೆ ಪ್ರಕರಣ ನ್ಯಾಯಾಲಯದಲ್ಲಿದ್ದು, ಮತದಾನಕ್ಕೆ ಅರ್ಹರಾಗಿದ್ದ 34 ಸದಸ್ಯರಲ್ಲಿ ಅವಿಶ್ವಾಸ ಗೊತ್ತುವಳಿ ಸಭೆಗೆ 31 ಮಂದಿ ಆಗಮಿಸಿದ್ದರು. ಅಧ್ಯಕ್ಷ ಇ. ವಿನಯಕುಮಾರ, ಪಕ್ಷೇತರ ಸದಸ್ಯರಾದ ಹೇಮಲತಾ ಬೂದೆಪ್ಪ, ಸುನೀಲ್‌ಕುಮಾರ್ ಗೈರಾಗಿದ್ದರು. ಕಚೇರಿಗೆ ಆಗಮಿಸಿದ್ದರೂ ಅಧ್ಯಕ್ಷ ಇ.ವಿನಯಕುಮಾರ ಸಭೆಗೆ ಬರಲಿಲ್ಲ. ಉಪಾಧ್ಯಕ್ಷೆ ನರಸಮ್ಮ ಮಾಡಗಿರಿ ಅಧ್ಯಕ್ಷತೆಯಲ್ಲಿ ಸಭೆ ಆರಂಭಿಸಲಾಯಿತು. ಅವಿಶ್ವಾಸ ಗೊತ್ತುವಳಿ ಪರ 31 ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು.

    ಅಧ್ಯಕ್ಷ ಇ.ವಿನಯಕುಮಾರ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕ ಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ನಗರದ ಅಭಿವೃದ್ಧಿ ಬಗ್ಗೆ ನಿರ್ಲಕ್ಷೃ ವಹಿಸಿದ್ದಾರೆಂದು 32 ಸದಸ್ಯರು ಮಾ.5ರಂದು ಜಿಲ್ಲಾಧಿಕಾರಿಗೆ ಅವಿಶ್ವಾಸ ಗೊತ್ತುವಳಿ ಸಭೆ ಕರೆಯುವಂತೆ ಮನವಿ ಸಲ್ಲಿಸಿದ್ದರು.

    ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಪಕ್ಷಭೇದ ಮರೆತು ಅಧ್ಯಕ್ಷರ ವಿರುದ್ಧ ತಿರುಗಿ ಬಿದ್ದು ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದಸ್ಯರೆಲ್ಲರೂ ಅವಿಶ್ವಾಸ ಮಂಡನೆಗೆ ಮುಂದಾಗಿದ್ದರೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದೆ ಇ.ವಿನಯಕುಮಾರ ಅಧಿಕಾರ ಉಳಿಸಿಕೊಳ್ಳಲು ಕಸರತ್ತು ನಡೆಸಿದರೂ ಪ್ರಯೋಜನವಾಗಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts