More

    ಜಿಲ್ಲೆಯಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸಿ

    ರಾಯಚೂರು: ಸಿರಿಧಾನ್ಯ ಸಮಾವೇಶದಲ್ಲಿ ಪಾಲ್ಗೊಳ್ಳಲು ಶನಿವಾರ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವಿವಿಧ ಸಂಘ, ಸಂಸ್ಥೆಗಳಿಂದ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

    ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬೆಳೆಯುವುದರಿಂದ ರಾಯಚೂರಿನಲ್ಲಿ ಮೆಗಾ ಟೆಕ್ಸ್‌ಟೈಲ್ ಪಾಕ್ ನಿರ್ಮಾಣ ಮಾಡುವಂತೆ ಹತ್ತಿ ಗಿರಣಿ ಮಾಲೀಕರ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿ, ಪದಾಧಿಕಾರಿಗಳಾದ ಕೆ.ರವಿ, ಆನಂದ ರೆಡ್ಡಿ, ಶೈಲೇಶಕುಮಾರ ದೋಖಾ ಇದ್ದರು.

    ವರ್ಗಾವಣೆ ನೀತಿಯಲ್ಲಿ ಸಡಿಲಿಕೆ ತಂದು ಎಲ್ಲ ಶಿಕ್ಷಕರಿಗೆ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ರೆಡ್ಡಿ, ಪದಾಧಿಕಾರಿಗಳಾದ ಸಿದ್ದಲಿಂಗಪ್ಪ ಮರಡಿ, ಹನುಮಂತಪ್ಪ, ರಂಗನಾಥ ಇದ್ದರು.

    ರಸಗೊಬ್ಬರ ವಿತರಣೆಯಲ್ಲಿ ಆಗುತ್ತಿರುವ ಮೋಸ ತಡೆಯುವಂತೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ದೊಡ್ಡಬಸನಗೌಡ ಇದ್ದರು. ಕಾಲಮಿತಿ ಬಡ್ತಿ ಸಮಸ್ಯೆಯಿಂದ ಆಗುತ್ತಿರುವ ವೇತನ ತಾರತಮ್ಯ ನಿವಾರಿಸುವಂತೆ ಒತ್ತಾಯಿಸಿ ಸರ್ಕಾರಿ ಪಿಯು ಕಾಲೇಜು ಬಡ್ತಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಂಘದ ಗೌರವಾಧ್ಯಕ್ಷ ನರಸಪ್ಪ ಭಂಡಾರಿ, ಅಧ್ಯಕ್ಷ ಮಂಜುನಾಥ ಐಲಿ, ಪದಾಧಿಕಾರಿಗಳಾದ ವೆಂಕಟೇಶ, ಚನ್ನಬಸಪ್ಪ ಇದ್ದರು.

    ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳನ್ನು ಕೃಷಿ ತಾಂತ್ರಿಕ ಪದವೀಧರರಿಗೆ ಮೀಸಲಿಡುವಂತೆ ಒತ್ತಾಯಿಸಿ ಕೃಷಿ ವಿಜ್ಞಾನಗಳ ವಿವಿ ವಿದ್ಯಾರ್ಥಿ ಸಂಘ ಒತ್ತಾಯಿಸಿತು. ಅಧ್ಯಕ್ಷ ಸಿದ್ಧಾರೂಢ ಪಾಟೀಲ್, ಪದಾಧಿಕಾರಿಗಳಾದ ಕರಿಬಸವರಾಜ, ಮಹಾಂತೇಶ ಗಾಣಿಗಿ, ಮಲ್ಲೇಶ ಇದ್ದರು.

    ಎನ್‌ರ್‌ಬಿಸಿ ದುರಸ್ತಿ ಕಾಮಗಾರಿ ಕಳಪೆಯಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷೆ ರೂಪಾ ನಾಯಕ, ಪದಾಧಿಕಾರಿಗಳಾದ ಉಮಾದೇವಿ ನಾಯಕ, ಗುರುಬಾಯಿ ಇದ್ದರು.ಸರ್ಕಾರಿ ಶಾಲೆ ಮುಚ್ಚುವ ಪ್ರಕ್ರಿಯೆಯನ್ನು ನಿಲ್ಲಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಎಸ್‌ಎಫ್‌ಐನಿಂದ ಮನವಿ ಸಲ್ಲಿಸಲಾಯಿತು. ಸಂಘಟನೆ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ, ಪದಾಧಿಕಾರಿಗಳಾದ ಭೀಮನಗೌಡ ಸುಂಕೇಶ್ವರಹಾಳ, ಬಸವರಾಜ ದೀನಸಮುದ್ರ ಇದ್ದರು.

    ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ಸಮಿತಿ ಪದಾಧಿಕಾರಿಗಳಾದ ಉರುಕುಂದಪ್ಪ ನಾಯಕ, ಡಾ.ಶಾರದಾ ಹುಲಿನಾಯಕ ಇದ್ದರು. ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು. ರಸಗೊಬ್ಬರ ಕೊರತೆಯನ್ನು ನಿವಾರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಪದಾಧಿಕಾರಿಗಳಾದ ನರಸಿಂಗರಾವ್ ಕುಲಕರ್ಣಿ, ಕೆ.ವಿರೇಶಗೌಡ, ನರಸರೆಡ್ಡಿ, ನರಸಪ್ಪ ಹೊಕ್ರಾಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts