ಮಾನ್ವಿ: ಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆದಾಗ ದೇವರು ಇಷ್ಟಾರ್ಥಗಳನ್ನು ನೀಡುತ್ತಾನೆ ಎಂದು ಅಂಕಲಿಮಠದ ವೀರಭದ್ರ ಸ್ವಾಮಿಗಳು ತಿಳಿಸಿದರು.
ಪಟ್ಟಣದ ಜಯನಗರದಲ್ಲಿ ಗುರುವಾರ ಸಂಗಾಪುರ ಕಿದ್ಮತ್ ಹಿರೇಮಠದ ಶಾಖಾ ಮಠದಲ್ಲಿ ನೂತನ ಪಂಚಲೋಹದ ರಾಜರಾಜೇಶ್ವರಿ ಮೂರ್ತಿ, ಶ್ರೀಚಕ್ರ, ನಾಗದೇವತಾಮೂರ್ತಿ ವಿವಿಧ ದೇವತಾ ಮೂರ್ತಿಗಳ ಸ್ಥಾಪನೆ ಅಂಗವಾಗಿ ನೂತನ ವಿಗ್ರಹಗಳಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ದುರ್ಗಾ ಹೋಮ ಹವನ ಮತ್ತು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸನಾತನ ಧರ್ಮ ಆಚರಣೆೆಗಳು, ದೇವತಾಪೂರ್ತಿಗಳ ಸ್ಥಾಪನೆಯ ಉದ್ದೇಶ ಜನರನ್ನು ಸರಿಯಾದ ಧರ್ಮದ ಹಾದಿಯಲ್ಲಿ ತರುವುದಾಗಿದೆ. ದೇವರನ್ನು ಉಪಾಸನೆ ಮೂಲಕ ನಮ್ಮ ಜೀವನದಲ್ಲಿ ಉತ್ತಮ ದೈವಿಕ ಅಂಶಗಳನ್ನು ಅಳವಡಿಸಿಕೊಂಡಾಗ ಕಷ್ಟಗಳು ಕಳೆದು ಉತ್ತಮವಾದ ಫಲಗಳು ದೊರೆಯುತ್ತವೆ ಎಂದು ತಿಳಿಸಿದರು.
ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಸುಮಂಗಲೆಯರಿಂದ ಬನ್ನಿಮಹಾಂಕಾಳಿಗೆ ಹುಡಿ ತುಂಬುವ ಕಾರ್ಯಕ್ರಮ ಜರುಗಿತು. ಚೀಕಲಪರ್ವಿಯ ರುದ್ರಮುನಿಶ್ವರ ಮಠದ ಸದಾಶಿವ ಸ್ವಾಮಿಗಳು, ಅರಳ ಹಳ್ಳಿಯ ಶರಣಬಸವ ದೇವರು, ಮೈಸೂರಿನ ನಿರಂಜನ ದೇವರು, ಸಂಗಾಪುರ ಕಿದ್ಮತ್ ಹಿರೇಮಠದ ವೀರಭದ್ರಯ್ಯಸ್ವಾಮಿ, ಕಿಡಿಗಣ್ಣಯ್ಯಸ್ವಾಮಿ, ಹಿರಿಯ ವಕೀಲ ಅಮರಯ್ಯಸ್ವಾಮಿ ಉಪ್ಪಳ ಮಠ, ಪಂಪಾಪತಿ ಪಾಟೀಲ್, ವಿಜಯಕುಮಾರ, ಮರಿಸ್ವಾಮಿ, ಮುದ್ದಯ್ಯಸ್ವಾಮಿ, ಅರುಣಕುಮಾರ ಸ್ವಾಮಿ, ಬಸಯ್ಯಸ್ವಾಮಿ ಇತರರಿದ್ದರು.