More

    ರಾಯರ ಆರಾಧನೆಗೆ ಸಕಲ ಸಿದ್ಧತೆ; ಸಪ್ತರಾತ್ರೋತ್ಸವ ಇಂದಿನಿಂದ

    ಭಕ್ತರಿಗೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮ

    ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ಗುರು ರಾಯರ 350ನೇ ಆರಾಧನಾ ಮಹೋತ್ಸವಕ್ಕೆ ಶ್ರೀಮಠ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸಪ್ತ ರಾತ್ರೋತ್ಸವಕ್ಕೆ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಶನಿವಾರ ಸಂಜೆ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಿದ್ದಾರೆ.

    ಆರಾಧನಾ ಮಹೋತ್ಸವ ಶನಿವಾರದಿಂದ ಆ.27ರವರೆಗೆ ನಡೆಯಲಿದ್ದು, ಆ.23ರಂದು ಪೂರ್ವಾರಾಧನೆ, ಆ.24ರಂದು ಮಧ್ಯಾರಾಧನೆ, ಆ.25ರಂದು ಉತ್ತರಾರಾಧನೆ ನಡೆಯಲಿದೆ. ಏಳು ದಿನಗಳ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕೋವಿಡ್ ಹಿನ್ನೆಲೆಯಲ್ಲಿ ರಾಯರ ದರ್ಶನಕ್ಕೆ ಆಗಮಿಸುವ ಭಕ್ತರನ್ನು ಎಲೆಕ್ಟ್ರಾನಿಕ್ ಸ್ಕ್ರೀನಿಂಗ್ ನಡೆಸಿ ಶ್ರೀಮಠದ ಒಳಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ. ಕಂಪ್ಯೂಟರ್ ಆಧಾರಿತ ಯಂತ್ರದ ಮುಂದೆ ಭಕ್ತರು ನಿಂತರೆ ಅವರ ದೇಹ ಉಷ್ಣಾಂಶ ಕಂಪ್ಯೂಟರ್ ಪರದೆಯಲ್ಲಿ ತೋರಿಸಲಿದೆ. ಜತೆಗೆ ಭಕ್ತರು ಮಾಸ್ಕ್ ಧರಿಸದಿದ್ದರೆ ಅಲಾರಾಂ ಮೂಲಕ ಅವರಿಗೆ ಎಚ್ಚರಿಸುವ ಯಾಂತ್ರೀಕೃತ ವ್ಯವಸ್ಥೆ ಮಾಡಲಾಗಿದೆ.

    ವಸತಿ ನಿಲಯಗಳನ್ನು ಈಗಾಗಲೇ ಸ್ಯಾನಿಟೈಜೇಷನ್ ಮಾಡಲಾಗಿದ್ದು, ಶ್ರೀಮಠದ ಆವರಣದಲ್ಲಿ ಹಲವೆಡೆ ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗಿದೆ. ಶ್ರೀಮಠವನ್ನು ವಿದ್ಯುತ್ ದೀಪ ಹಾಗೂ ಹೂವುಗಳಿಂದ ಅಲಂಕರಿಸಲಾಗುತ್ತಿದ್ದು, ಮಂತ್ರಾಲಯದ ಹಲವು ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts