More

    ವಿದ್ಯುತ್ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸಿ

    ರಾಯಚೂರು: ಕೆಪಿಟಿಸಿಎಲ್ ಮತ್ತು ವಿವಿಧ ವಿದ್ಯುತ್ ಕಂಪನಿಗಳಡಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸೇವಾ ಭದ್ರತೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿ ಬೆಂಗಳೂರಿನ ವಿಶ್ವಕರ್ಮ ಸಮಾಜ ಸಭಾಂಗಣದಲ್ಲಿ ನ.8ರಂದು ರಾಜ್ಯ ಮಟ್ಟದ ಸಮಾವೇಶ ಆಯೋಜಿಸಲಾಗಿದೆ ಎಂದು ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಗುತ್ತಿಗೆ ಕಾರ್ಮಿಕರ ಸಂಘದ ಉಪಾಧ್ಯಕ್ಷ ಎನ್.ಎಸ್.ವೀರೇಶ ತಿಳಿಸಿದರು.

    ಸಮಾವೇಶದಲ್ಲಿ ಆಲ್ ಇಂಡಿಯಾ ಪವರ್‌ಮೆನ್ಸ್ ಫೆಡರೇಷನ್ ಪ್ರಮುಖರಾದ ಕೆ.ಸೋಮಶೇಖರ್, ಸಮರ್ ಸಿನ್ಹಾ, ನ್ಯಾಯವಾದಿ ವಿ.ಎಸ್.ನಾಯಕ ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಳೆದ 15-20 ವರ್ಷಗಳಿಂದ ಶಿಫ್ಟ್ ಆಪರೇಟರ್ಸ್‌, ಹೆಲ್ಪರ್, ಗ್ಯಾಂಗ್‌ಮನ್, ಮೀಟರ್ ರಿಡರ್ಸ್‌ಗಳಾಗಿ ಕೆಲಸ ಮಾಡುತ್ತಿದ್ದು, ಮಂಜೂರಾದ ಹುದ್ದೆಗಳ ಬದಲಿಗೆ ಕಾರ್ಯ ನಿರ್ವಹಿಸುತ್ತಿದ್ದರೂ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನದಿಂದ ವಂಚಿತರಾಗಿದ್ದಾರೆ.

    ಕೆಲವು ಜಿಲ್ಲೆಗಳಲ್ಲಿ ಗುತ್ತಿಗೆದಾರರು ಕನಿಷ್ಠ ವೇತನ ಪಾವತಿಸುವಲ್ಲಿ ವಿಫಲರಾಗಿದ್ದು, ಇಎಸ್‌ಐ, ಪಿಎಫ್ ಸೌಲಭ್ಯಗಳನ್ನು ನೀಡದೆ ವಂಚಿಸಲಾಗುತ್ತಿದೆ. ಜತೆಗೆ ರಜೆ, ಬೋನಸ್ ನೀಡದೆ ಕಾನೂನು ಉಲ್ಲಂಘಿಸುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ಕೆಲಸ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುತ್ತಿಲ್ಲ ಎಂದು ಎನ್.ಎಸ್.ವೀರೇಶ ದೂರಿದರು. ಸಂಘದ ಪದಾಧಿಕಾರಿಗಳಾದ ತಿರುಮಲರಾವ್, ಅಣ್ಣಪ್ಪ, ರಾಘವೇಂದ್ರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts