More

    ಜನತಾ ಕರ್ಫ್ಯೂಗೆ ಸಿಗದ ಸ್ಪಂದನೆ- ಹೆಚ್ಚುತ್ತಿರುವ ಅನಗತ್ಯ ಸಂಚಾರ

    ರಾಯಚೂರು: ಕರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಜನತಾ ಕರ್ಫ್ಯೂ ಜಾರಿಗೊಳಿಸಿದ್ದರೂ ಜನರಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಶನಿವಾರವೂ ನಗರದಲ್ಲಿ ಅನಗತ್ಯ ವಾಹನಗಳ ಓಡಾಟ ಮುಂದುವರಿದ್ದು, ಅನಗತ್ಯ ವಾಹನ ಓಡಾಟ ತಡೆಯಲು ಪೊಲೀಸರು ಹರಸಾಹಸ ಪಡುವಂತಾಗಿದೆ.

    ಅಗತ್ಯ ವಸ್ತುಗಳ ಖರೀದಿಗೆ ಬೆಳಗಿನ ಅವಧಿಯಲ್ಲಿ ಅವಕಾಶ ನೀಡಿದ್ದು, ಜನರು ಪರಸ್ಪರ ಅಂತರ ಮರೆತು ಅಂಗಡಿಗಳ ಮುಂದೆ ಗುಂಪುಗೂಡಿ ಖರೀದಿಸುತ್ತಿರುವುದು ಮುಂದುವರಿದಿದೆ. ತಮ್ಮ ಮನೆ ಸುತ್ತಮುತ್ತಲಿನ ಅಂಗಡಿಗಳಲ್ಲಿ ಖರೀದಿಸುವ ಬದಲು ಜನರು ವಾಹನದೊಂದಿಗೆ ದೂರದ ಅಂಗಡಿಗಳಿಗೆ ತೆರಳಿ ಖರೀದಿಯಲ್ಲಿ ತೊಡಗುತ್ತಿದ್ದಾರೆ. ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ ಎಂದು ಕಳೆದ ನಾಲ್ಕು ದಿನಗಳಿಂದ ಪೊಲೀಸರು ಮನವಿ ಮಾಡುತ್ತಿದ್ದರೂ ಜನರು ರಸ್ತೆಗಿಳಿಯುತ್ತಿರುವುದರಿಂದ ಪೊಲೀಸರು ಸಂಕಷ್ಟ ಎದುರಿಸುವಂತಾಗಿದೆ. ದಂಡ ವಿಧಿಸಿದರು ಜನರಿಗೆ ಬುದ್ದಿ ಬರುತ್ತಿಲ್ಲ. ಮತ್ತೊಂದೆಡೆ ಕಾರ್ಮಿಕ ದಿನಾಚರಣೆ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ರಜೆಯಿದ್ದ ಕಾರಣ ಶನಿವಾರ ಹಿಂದಿನ ಮೂರು ದಿನಗಳಿಗೆ ಹೋಲಿಸಿದಲ್ಲಿ ವಾಹನ ಸಂಚಾರ ಕಡಿಮೆಯಿತ್ತು. ಹೆಚ್ಚುತ್ತಿರುವ ಕರೊನಾ ಸೋಂಕಿನ ಭೀಕರತೆಯನ್ನು ಜನರು ಅರ್ಥ ಮಾಡಿಕೊಳ್ಳುವ ಮೂಲಕ ಸಹಕರಿಸಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts