More

    ಹರಿಜನವಾಡಾದಲ್ಲಿ ಹೆಂಡ ಮಾರಾಟ ತಡೆಯಿರಿ, ಅಖಿಲ ಕರ್ನಾಟಕ ಭುವನೇಶ್ವರಿ ಸೇನಾ ಸಮಿತಿ ಒತ್ತಾಯ

    ರಾಯಚೂರು: ನಗರದ ಹರಿಜನವಾಡಾದಲ್ಲಿ ಅಕ್ರಮವಾಗಿ ಕೈ ಹೆಂಡ ಮಾರಾಟ ಮಾಡಲಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕುವುದರ ಜತೆಗೆ ಬಡಾವಣೆಯಲ್ಲಿ ಪೊಲೀಸ್ ಠಾಣೆ ಸ್ಥಾಪಿಸಬೇಕು ಎಂದು ಅಖಿಲ ಕರ್ನಾಟಕ ಭುವನೇಶ್ವರಿ ಸೇನಾ ಸಮಿತಿ ಅಧ್ಯಕ್ಷ ತಮ್ಮೇಶ ಒತ್ತಾಯಿಸಿದರು.

    ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಬಡಾವಣೆಯ ಹಲವು ಮನೆಗಳಲ್ಲಿ ಸಿಎಚ್ ಪೌಡರ್‌ನಿಂದ ಕೈ ಹೆಂಡ ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸ್ ಮತ್ತು ಅಬಕಾರಿ ಇಲಾಖೆಗೆ ದೂರು ನೀಡಿದರೂ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದರು.

    ಇದನ್ನೂ ಓದಿ: ವಿಚ್ಛೇದನ ಆದ ಖುಷಿಗೆ ಬಂಜೀ ಜಂಪಿಂಗ್ ಮಾಡಲು ಹೋಗಿ ಕುತ್ತಿಗೆ ಮುರಿದುಕೊಂಡ!

    ಆಂಧ್ರದಿಂದ ಸಿಎಚ್ ಪೌಡರ್ ತಂದು ಹೆಂಡ ತಯಾರಿಸಲಾಗುತ್ತಿದೆ. ಬಡಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರಿದ್ದು, ಕುಡಿತಕ್ಕೆ ಬಲಿಯಾಗಿ ಆರೋಗ್ಯ ಹಾಳು ಮಾಡಿಕೊಳ್ಳುವುದರ ಜತೆಗೆ ಹಣಕ್ಕಾಗಿ ಮಹಿಳೆಯರನ್ನು ಪೀಡಿಸುತ್ತಿದ್ದಾರೆ. ಇದರಿಂದ ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ.

    ಬಡಾವಣೆಯಲ್ಲಿ ಪೊಲೀಸ್ ಠಾಣೆ ಸ್ಥಾಪನೆ ಮಾಡುವ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ತಮ್ಮೇಶ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ನರಸಪ್ಪ, ಮಾರೆಪ್ಪ, ವಾಗಲು ನರಸಪ್ಪ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts