More

    ಲಾಕ್​ಡೌನ್​ ನಡುವೆಯೂ ನಡೆಯಿತು ಅದ್ಧೂರಿ ಮದುವೆ: ಕರೊನಾ ಪ್ರಕರಣಗಳಿದ್ರೂ ಡೋಂಟ್​ ಕೇರ್​

    ರಾಯಚೂರು: ಕಠಿಣ ಲಾಕ್​ಡೌನ್ ನಡುವೆಯೂ ದೇವದುರ್ಗ ತಾಲೂಕಿನ ಆಕಳಕುಂಪಿ ಗ್ರಾಮದಲ್ಲಿ ಅದ್ದೂರಿ ಮದುವೆ ನಡೆದಿರುವುದು ಆಡಳಿತ ವ್ಯವಸ್ಥೆಯ ಲೋಪದೋಷಕ್ಕೆ ಸಾಕ್ಷಿಯಾಗಿದೆ. ಎಲ್ಲೆಡೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದರು ಇಂತಹ ಅದ್ಧೂರಿ ಮದುವೆ ನಡೆದಿದ್ದಾರೂ ಹೇಗೆ ಎಂಬ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ.

    ಆಕಳಕುಂಪಿ ಗ್ರಾಮವೊಂದರಲ್ಲೇ ಈಗಾಗಲೇ ಬರೋಬ್ಬರಿ 37 ಕರೊನಾ ಪಾಸಿಟಿವ್ ಪ್ರಕರಣಗಳಿವೆ. ಆದರೂ ಎಚ್ಚೆತ್ತುಕೊಳ್ಳದೇ ಗ್ರಾಮದ ಒಂದೇ ಕುಟುಂಬದ ನಾಲ್ಕು ಜನರ ಮದುವೆಯನ್ನು ಅದ್ದೂರಿಯಾಗಿ ನಡೆಸಿದ್ದಾರೆ.

    ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಧರಿಸದೇ ನೂರಾರು ಜನರು ಮದ್ವೆಯಲ್ಲಿ ಭಾಗಿಯಾಗಿದ್ದಾರೆ. ಮದುವೆ ನಂತರ ಗ್ರಾಮದಲ್ಲಿ ಭರ್ಜರಿ ಮೆರವಣಿಗೆಯು ಆಗಿದೆ. ಯುವಕರು ಡಿಜೆ ಹಚ್ಚಿ ಮೆರವಣಿಗೆಯಲ್ಲಿ ಸ್ಟೆಪ್ ಹಾಕಿದ್ದಾರೆ.

    ಗ್ರಾಮದಲ್ಲಿ ಸಾಕಷ್ಟು ಪಾಸಿಟಿವ್ ಪ್ರಕರಣಗಳಿದ್ರೂ ಕೇರ್ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಜಾಣ ಕುರುಡುತನ ಪ್ರದರ್ಶಿಸಿದ್ದಾರೆ. ಇದೀಗ ಗ್ರಾಮ ಪಂಚಾಯತಿ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ತಮ್ಮನೋ ತಂಗಿಯೋ ಇದ್ದಿದ್ರೆ ಚೆನ್ನಾಗಿರ್ತಿತ್ತು!; ಒಂದೇ ಮಗುವಿರುವ ಮನೆಗಳಲ್ಲಿ ಒಂಟಿತನ..

    ಬರೇ ಗೋತ್ರ ಬಿಟ್ಟರ ನಡಿಯಂಗಿಲ್ಲಾ.. ಕೋವಿಶೀಲ್ಡ್ ತೊಗೊಂಡವಂಗ ಕೋವ್ಯಾಕ್ಸಿನ್ ತೊಗೊಂಡೊಕಿನ್ ಕೊಡಬಹುದಾ?

    ಪರಿಹಾರದ ಭಾಗವಾಗುವತ್ತ ಮಾನವ; ಇಂದು ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts