More

    ಸಿದ್ಧರಾಮೇಶ್ವರರ 124ನೇ ಜಾತ್ರಾ ಮಹೋತ್ಸವ

    ರಾಯಚೂರು: ತಾಲೂಕಿನ ಚಿಕ್ಕಸುಗೂರು ಚೌಕಿಮಠದಲ್ಲಿ ಸಿದ್ಧರಾಮೇಶ್ವರರ 124ನೇ ಜಾತ್ರಾ ಮಹೋತ್ಸವ ಅಂಗವಾಗಿ ಅ.14ರಂದು ಸಂಜೆ 5.30ಕ್ಕೆ ರಥೋತ್ಸವ ಜರುಗಲಿದೆ ಎಂದು ಶ್ರೀಮಠದ ಪೀಠಾಧಿಪತಿ ಡಾ.ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಜಾತ್ರಾ ಮಹೋತ್ಸವ ನಿಮಿತ್ತ ಅ.7ರಂದು ಸಂತೆಕೆಲ್ಲೂರು ಶ್ರೀ ಘನಮಠ ಶಿವಯೋಗಿಗಳ ಪುರಾಣ ಕಾರ್ಯಕ್ರಮ ಆರಂಭವಾಗಿದ್ದು, ಅ.15ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ.13ರಂದು ದುಂಡಗಿಯ ಕುಮಾರ ಮಹಾಸ್ವಾಮೀಜಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಲಿದ್ದು, ಅ.14ರಂದು ಬೆಳಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಮಧ್ಯಾಹ್ನ ಧರ್ಮಸಭೆ ನಡೆಸಲಾಗುತ್ತಿದೆ. ಸಂಜೆ 5.30ಕ್ಕೆ ಸಿದ್ಧರಾಮೇಶ್ವರ ಮೂರ್ತಿಯೊಂದಿಗೆ ರಥೋತ್ಸವ ನಡೆಸಲಾಗುತ್ತಿದೆ ಎಂದರು.

    ಧರ್ಮಸಭೆಯಲ್ಲಿ ರಾಜ್ಯ ಮತ್ತು ಜಿಲ್ಲೆಯ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದು, ಅ.15ರಂದು ಸಂಜೆ 5.30ಕ್ಕೆ ಉಚ್ಧ್ರಾಯ ಮಹೋತ್ಸವ ಮತ್ತು ಕಡುಬಿನ ಕಾಳಗ ನಡೆಯಲಿದೆ. ಪ್ರತಿನಿತ್ಯ ರಾತ್ರಿ ಶಾಸ್ತ್ರೀಯ ಗಾಯನ ಮತ್ತು ನೃತ್ಯ ರೂಪಕ ಪ್ರದರ್ಶನ ನಡೆಯಲಿವೆ. ಸುಮಾರು 800 ವರ್ಷ ಪರಂಪರೆ ಹೊಂದಿರುವ ಶ್ರೀಮಠ ಧಾರ್ಮಿಕ ಕಾರ್ಯದ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಶಿಕ್ಷಣ ಸಂಸ್ಥೆಗಳನ್ನು ನಡೆಸುವುದರ ಜತೆಗೆ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಯೋಜನೆಯನ್ನು ಹಾಕಿಕೊಂಡಿದೆ. ಐದು ಹಳ್ಳಿಗಳಲ್ಲಿ ಮನೆಗಳಿಗೆ ತೆರಳಿ ವಿಭೂತಿ ನೀಡುವ ಮೂಲಕ ಧರ್ಮ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗಿದೆ ಎಂದು ಡಾ.ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts