More

    ಕಾರ್ಪೋರೇಟ್ ಕಂಪನಿ ಸಂಪತ್ತು ಹೆಚ್ಚಿಸುವ ಬಜೆಟ್ ಎಂದು ಆರೋಪಿಸಿದ ಸಿಐಟಿಯು, ಸಿಪಿಐಎಂ ಕಾರ್ಯಕರ್ತರು


    ರಾಯಚೂರು: ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಜನ ವಿರೋಧಿಯಾಗಿದ್ದು, ಕಾರ್ಪೋರೇಟ್ ಕಂಪನಿಗಳ ಸಂಪತ್ತು ಹೆಚ್ಚಿಸುವ ಬಜೆಟ್ ಎಂದು ಆರೋಪಿಸಿ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಸಿಐಟಿಯು ಮತ್ತು ಸಿಪಿಐಎಂ ಕಾರ್ಯಕರ್ತರು ಶನಿವಾರ ಬಜೆಟ್ ಪ್ರತಿ ಸುಟ್ಟು ಪ್ರತಿಭಟನೆ ನಡೆಸಿ, ಡಿಸಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿದರು.

    ಬಜೆಟ್‌ನಿಂದ ಜನ ಸಾಮಾನ್ಯರಿಗೆ ಯಾವುದೇ ಉಪಯೋಗವಿಲ್ಲ. ಮೂಲ ಸೌಕರ್ಯ, ಉತ್ಪಾದನೆ ಮತ್ತು ಖನಿಜ ಕ್ಷೇತ್ರಗಳನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಲು ಚಾಲನೆ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಬಜೆಟ್ ಸರ್ವಾಧಿಕಾರ ಮತ್ತು ಜನ ವಿರೋಧಿ ವಿಧ್ವಂಸಕ ಪ್ರವೃತ್ತಿಯನ್ನು ಬಹಿರಂಗಪಡಿಸುತ್ತಿದ್ದು, ಹಣಕಾಸು ಸಚಿವರು ಬಜೆಟ್ ಭಾಷಣದಲ್ಲಿಯೇ ಸಾರ್ವಜನಿಕ ಸಂಸ್ಥೆಗಳನ್ನು ಬಂಡವಾಳಶಾಹಿಗಳಿಗೆ ವರ್ಗಾವಣೆ ಮಾಡುವ ಸಂಕಲ್ಪವನ್ನು ಪುನರುಚ್ಚರಿಸಿದ್ದಾರೆ. ಬಜೆಟ್‌ನ 3.19 ಲಕ್ಷ ಕೋಟಿ ರೂ. ಆದಾಯ ವೆಚ್ಚ ಪ್ರಧಾನಿ ಹೆಸರಿನ ಕಲ್ಯಾಣ ಆತಿಥ್ಯ ಯೋಜನೆಗಳಾಗಿವೆ. ಜಿಎಸ್ಟಿ ಸಂಗ್ರಹಕ್ಕೆ ವೇದಿಕೆ ನೀಡಲಾಗಿದೆ. ನರೇಗಾ ಅನುದಾನ ಇಳಿಕೆ ಮಾಡಲಾಗಿದೆ. ಆಹಾರ ಸಬ್ಸಿಡಿ ಶೇ.30 ಮತ್ತು ರಸಗೊಬ್ಬರ ಸಬ್ಸಿಡಿ ಶೇ.25 ಕಡಿತಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸಿಪಿಐಎಂ ಜಿಲ್ಲಾಕಾರ್ಯದರ್ಶಿ ಡಿ.ಎಸ್.ಶರಣಬಸವ, ಪದಾಧಿಕಾರಿಗಳಾದ ವರಲಕ್ಷ್ಮ್ಮೀ, ಕೆ.ಜಿ.ವೀರೇಶ, ಬಸವರಾಜ, ಎಚ್.ಪದ್ಮಾ, ರಂಗಾರೆಡ್ಡಿ, ಪಾರ್ವತಿ, ಶರಣಮ್ಮ, ಶಿವಬಸಮ್ಮ, ಪ್ರಭಾವತಿ, ರೇಣುಕಾ, ರೂಪಾದೇವಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts