More

    ಮಾತು ಕೇಳದ ಅಧಿಕಾರಿಗಳ ವರ್ಗಾವಣೆ

    ರಾಯಚೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ಐದು ಜನ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಡಿಸಿ ಡಾ.ಅವಿನಾಶ ಮೆನನ್ ವರ್ಗಾವಣೆ ರದ್ದುಗೊಳಿಸದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಹೇಳಿದರು.

    ಜಿಲ್ಲೆಯ ಬಗ್ಗೆ ಶಾಸಕರಲ್ಲಿರುವ ಬದ್ಧತೆ, ಕಾಳಜಿ ಕೊರತೆಯಿಂದಾಗಿ ಜಿಲ್ಲಾಧಿಕಾರಿಗಳ ವರ್ಗಾವಣೆ ನಡೆಯುವಂತಾಗಿದೆ. ತಮ್ಮ ಮಾತು ಕೇಳದ ಅಧಿಕಾರಿಗಳನ್ನು ಶಾಸಕರು ವರ್ಗಾವಣೆ ಮಾಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಬಿಜೆಪಿ ಅಧಿಕಾರದ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಾದ ಕಲಬುರಗಿ, ಬಳ್ಳಾರಿ, ಬೀದರ್ ಜಿಲ್ಲೆಗಳಲ್ಲಿ ಇಬ್ಬರು, ಯಾದಗಿರಿಯಲ್ಲಿ ಮೂವರು ಮತ್ತು ಕೊಪ್ಪಳದಲ್ಲಿ ಒಬ್ಬ ಡಿಸಿ ವರ್ಗಾವಣೆ ಮಾಡಲಾಗಿದೆ. ಆದರೆ ರಾಯಚೂರಿನಲ್ಲಿ ಐದು ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದರು.

    ವರ್ಗಾವಣೆಗೆ ಕಾರಣವೇನು ಎಂಬುದನ್ನು ತಿಳಿಸದೆ ವರ್ಗಾವಣೆ ಮಾಡಲಾಗುತ್ತಿದೆ. ಪರ್ಸೆಂಟೇಜ್ ರಾಜಕೀಯವೂ ವರ್ಗಾವಣೆಗೆ ಕಾರಣವಾಗಿದೆ. ಸಮಸ್ಯೆಗಳ ಬಗ್ಗೆ ಅರಿತುಕೊಳ್ಳುವ ಮೊದಲೇ ಜಿಲ್ಲಾಧಿಕಾರಿಗಳು ವರ್ಗಾವಣೆ ಆಗುತ್ತಿರುವುದರಿಂದ ಆಡಳಿತ ಯಂತ್ರ ಸಮರ್ಪಕವಾಗಿ ನಡೆಯದಂತಾಗಿದೆ ಎಂದು ಹೇಳಿದರು. ನಗರಸಭೆ ಸದಸ್ಯರಾದ ಬಿ.ರಮೇಶ, ಸಾಜೀದ್ ಸಮೀರ್, ಪ್ರಮುಖರಾದ ನರಸಿಂಹಲು ಮಾಡಗಿರಿ, ಅರುಣ ದೋತರಬಂಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts